ಗಣರಾಜ್ಯೋತ್ಸವಕ್ಕೆ ತೆರೆ ಬರಲು ಸಿದ್ಧವಾದ ಚಿಕ್ಕಣ್ಣನ ‘ಉಪಾಧ್ಯಕ್ಷ’

| Published : Jan 19 2024, 01:47 AM IST

ಗಣರಾಜ್ಯೋತ್ಸವಕ್ಕೆ ತೆರೆ ಬರಲು ಸಿದ್ಧವಾದ ಚಿಕ್ಕಣ್ಣನ ‘ಉಪಾಧ್ಯಕ್ಷ’
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದಲ್ಲಿ ಗುರುವಾರ ಉಪಾಧ್ಯಕ್ಷ ಚಿತ್ರತಂಡದಿಂದ ಪತ್ರಿಕಾಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹಳ್ಳಿ ಸೊಗಡಿನ ಕಥೆ ಹೊಂದಿರುವ ಉಪಾಧ್ಯಕ್ಷ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ರಾಜ್ಯಾದ್ಯಂತ ಜ. 26ರಂದು ತೆರೆಕಾಣಲಿದೆ ಎಂದು ಚಲನಚಿತ್ರ ನಟ ಚಿಕ್ಕಣ್ಣ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 12 ವರ್ಷಗಳ ಹಿಂದೆ ಹಾಸ್ಯನಟ ಶರಣ ನಾಯಕ ನಟನಾಗಿ ಅಭಿನಯಿಸಿದ ಅಧ್ಯಕ್ಷ ಚಲನಚಿತ್ರದ ಮುಂದುವರೆದ ಚಿತ್ರ ಇದಾಗಿದೆ ಎಂದರು.ಈವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೆನೆ. ಚಿತ್ರದಲ್ಲಿ ಉತ್ತಮ ಪ್ರೇಮಕಥೆಯೂ ಇದೆ. ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆದ್ದಿವೆ. ಇದು ಪ್ಯಾಮಿಲಿಗೆ ಕನೆಕ್ಟ್ ಆಗೋ ಸಿನಿಮಾ. ಅಧ್ಯಕ್ಷ ಚಿತ್ರದ ಮುಂದುವರಿದ ಭಾಗವಾಗಿದ್ದು, ಅಧ್ಯಕ್ಷ ಚಿತ್ರದಲ್ಲಿ ನಟಿಸಿದ ಕಲಾವಿದರೆ ಈ ಚಿತ್ರದಲ್ಲಿ ಇದ್ದಾರೆ. ಸಾಧು ಕೋಕಿಲ, ಧರ್ಮಣ್ಣ, ಶಿವರಾಜ್ ಕೆ.ಆರ್.ಪೇಟೆ ಈ ಚಿತ್ರದಲ್ಲಿ ಅಭಿನಯಿಸಿದರು. ಚಿತ್ರದ ನಾಯಕಿ ಮಲೈಕ ಮಾತನಾಡಿ, ಕಿರುತೆರೆ ನಟಿಯಾಗಿರುವ ನನಗೆ ಇಷ್ಟು ಬೇಗ ಬೆಳ್ಳಿ ತೆರೆಯಲ್ಲಿ ಅವಕಾಶ ಸಿಗುತ್ತದೆ ಎಂದು‌ ಕೊಂಡಿರಲಿಲ್ಲ. ಉಪಾಧ್ಯಕ್ಷ ಚಿತ್ರ ಹಳ್ಳಿ ಕಥೆಯಾಗಿದ್ದು, ಕಾಮಿಡಿ, ಕ್ಯೂಟ್ ಲವ್ ಸ್ಟೋರಿ ಇದೆ. ಇದು ನನ್ನ ಮೊದಲ ಚಿತ್ರವಾಗಿದ್ದು, ಪ್ರೇಕ್ಷಕರು ನಮ್ಮ ಚಿತ್ರ ನೋಡು ಪ್ರೋತ್ಸಾಹ ನೀಡಬೇಕು ಎಂದರು.ಚಲನಚಿತ್ರದ ನಿರ್ದೇಶಕ ಅನಿಲಕುಮಾರ ಮಾತನಾಡಿ, ಅಧ್ಯಕ್ಷ ಚಲನಚಿತ್ರದ ಕಥೆ ಮುಗಿದ ನಂತರದ ಕಥಾವಸ್ತು ಉಪಾಧ್ಯಕ್ಷ ಚಲನಚಿತ್ರ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಟ ಧರ್ಮಣ್ಣ ಇದ್ದರು.