ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರ ಶ್ರೀಕಾಲಭೈರವೇಶ್ವರ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

| Published : Apr 14 2025, 01:19 AM IST

ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರ ಶ್ರೀಕಾಲಭೈರವೇಶ್ವರ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ಅರಸಿನಕೆರೆ ಗ್ರಾಮವಲ್ಲಯದ ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಹಬ್ಬವನ್ನು ಆಚರಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮತ್ತ ಮಾಂಸವನ್ನು ನಿಷೇಧಿಸಲಾಗಿದೆ. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬಿ.ಎಸ್.ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದಕ್ಷಿಣ ಭಾರತದ ಚಿಕ್ಕಕಾಶಿ ಎಂದೆ ಪ್ರಸಿದ್ಧಿ ಪಡೆದಿರುವ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಪುಣ್ಯ ಕ್ಷೇತ್ರ ಶ್ರೀ ಕಾಲಭೈರವೇಶ್ವರ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.

ಏ.13 ರಿಂದ 18ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕಾಗಿ ಗ್ರಾಮವು ನವ ವಧುವಿನಂತೆ ಸಿಂಗಾರಗೊಂಡಿದೆ.

ಚಿಕ್ಕ ಅರಸಿನಕೆರೆ ಗ್ರಾಮವಲ್ಲಯದ ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಹಬ್ಬವನ್ನು ಆಚರಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮತ್ತ ಮಾಂಸವನ್ನು ನಿಷೇಧಿಸಲಾಗಿದೆ. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಏ.13ರ ಭಾನುವಾರ ದೇಗುಲದಲ್ಲಿ ಹೋಮ ಇತ್ಯಾದಿ ಪೂಜೆ, ಸಂಜೆ 4 ಗಂಟೆಗೆ ಕೊಂಡ ಬಂಡಿಗಳ ಉತ್ಸವ ನಡೆಯಿತು. ಚಿಕ್ಕರಸಿನಕೆರೆ, ಗುರುದೇವರಹಳ್ಳಿ ಮತ್ತು ಹುಣನದೊಡ್ಡಿ ಗ್ರಾಮಸ್ಥರಿಂದ ರಾತ್ರಿ10 ಗಂಟೆಗೆ ಶ್ರೀಕಾಲಭೈರವೇಶ್ವರಸ್ವಾಮಿ, ಕಾರ್ಕಳ್ಳಿ ಬಸವೇಶ್ವರಸ್ವಾಮಿ, ದೊಡ್ಡರಸಿನಕೆರೆ ಶ್ರೀಏಳೂರಮ್ಮ ಕಾಳಮ್ಮ ಹಾಗೂ ಬುಳಿಕೆಂಪನದೊಡ್ಡಿ ಗ್ರಾಮದ ನಿಶಾನಿ ದೇವರ ಉತ್ಸವ ವೈಭವದಿಂದ ಜರುಗಿತು.

ಹುನಗನಹಳ್ಳಿ ಗ್ರಾಮಸ್ಥರಿಂದ ಕರಗದ ಉತ್ಸವ, ಗುರುದೇವರಹಳ್ಳಿ ಶ್ರೀ ಬಸವೇಶ್ವರ ಪೂಜೆ ಹಾಗೂ ಮುಟ್ಟನಹಳ್ಳಿ ಶ್ರೀ ಕಾಲಭೈರವೇಶ್ವರಸ್ವಾಮಿ, ಛತ್ರದಹೊಸಹಳ್ಳಿ ಗ್ರಾಮದವರಿಂದ ಛತ್ರಿ ಹಾಗೂ ದೇವಾನುದೇವತೆಗಳ ಉತ್ಸವು ಬಹಳ ವಿಜೃಭಣೆಯಿಂದ ನಡೆಯಿತು.

ಏ.14 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀಕಾಲಭೈರವೇಶ್ವರ ಅಗ್ನಿ ಕೊಂಡೋತ್ಸವದ ನಂತರ ಹೆಡಿಗೆಗಳ ಮೇಲೆ ಮಹಿಳೆಯರು ಆರತಿ ಬೆಳಗಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಬೇಲೂರು ಕುಲದವರಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ, ಸಂಜೆ 6.30ಕೆ ಸಿ.ಎ.ಕೆರೆ ಹೋಬಳಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಸರ್ವ ಬಣಜಿಗ (ಬಲಿಜ) ಸಂಘದಿಂದ ಶ್ರೀ ವೀರಾಂಜನೇಯ ಸ್ವಾಮಿ ಪಲ್ಲಕಿ ಉತ್ಸವ. ರಾತ್ರಿ 9 ಗಂಟೆಗೆ ಶ್ರೀ ಕಾಲಭೈರವೇಶ್ವರ ಕಲಾ ಬಳಗ ನಾಟಕ ಜರುಗಲಿದೆ.

ಏ.15ರಂದು ಅರೆಕಲ್ಲು ದೊಡ್ಡಿ, ಬನ್ನಹಳ್ಳಿ ಹಾಗೂ ಹೊನ್ನಾಯಕನಹಳ್ಳಿ ಕುಲದವರಿಂದ ಮಧ್ಯಾಹ್ನ 2.30ಕ್ಕೆ ಅನ್ನಸಂತರ್ಪಣೆ ನಂತರ ಶ್ರೀಕಾಲಭೈರವೇಶ್ವರಸ್ವಾಮಿ ವೈಭವದ ರಥೋತ್ಸವ. ಜತೆಗೆ ವಿವಿಧ ದೇವರುಗಳ ಉತ್ಸವ. ಏ.16 ರಂದು ಚಿಕ್ಕರಸಿನಕೆರೆ, ಗುರುದೇವರಹಳ್ಳಿ ಗ್ರಾಮಗಳಲ್ಲಿ ಶ್ರೀ ಕಾಲಬೈರವೇಶ್ವರ ಸ್ವಾಮಿ ಓಕಳಿ ಸೇವೆ ಉತ್ಸವ, ಏ.17 ರಂದು ಹುಣ್ಣನದೊಡ್ಡಿ ಗ್ರಾಮದಲ್ಲಿ ಓಕಳಿ ಸೇವೆ ಉತ್ಸವ, ಏ.18 ರಂದು ಛದ್ರದ ಹೊಸಹಳ್ಳಿ ಗ್ರಾಮಸ್ಥರಿಂದ ಓಕಳಿ ಉತ್ಸವ, ಏ.20 ರಂದು ಶ್ರೀ ಚನ್ನಪ್ಪಾಜಿ ಸ್ವಾಮಿ ಸಿದ್ದಭುಕ್ತಿ ಕಾರ್ಯಕ್ರಮ ನಡೆಯಲಿದೆ.ಬಸವಪ್ಪ ಲೋಕಾಯುಕ್ತ ಎಂದೇ ಪ್ರಸಿದ್ಧಿ

ಚಿಕ್ಕರಸಿನಕೆರೆ ಬಸವಪ್ಪ ಎಂದರೇ ಲೋಕಯುಕ್ತ ಎಂದೇ ಪ್ರಸಿದ್ಧಿ ಪಡೆದಿದ್ದು, ಬೋರೆದೇವರ ಬಸವಪದ್ಪ ಎಂದರೇ ರಾಜ್ಯಾದ್ಯಾಂತ ಪ್ರಸಿದ್ಧಿ ಪಡೆದಿದೆ. ವಾರದ ಐದು ದಿನಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುವ ಬಸವಪ್ಪ ಗೃಹ ಪ್ರವೇಶ, ದೇವರ ಗುಡ್ಡಪ್ಪನನ್ನು ನೇಮಿಸುವುದು, ದೇವರ ಉತ್ಸವಗಳಲ್ಲಿ ಪಾಲ್ಗೊಳ್ಳುವಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಭಕ್ತರ ಪ್ರೀತಿ ಪಾತರಾಗಿದೆ.

ಗುರುವಾರ ಮತ್ತು ಭಾನುವಾರ ದೇವಾಲಯದಲ್ಲಿ ಸೇರುವ ಸಾವಿರಾರು ಭಕ್ತರನ್ನು ದಾಟುವುದಂತು ವಿಶೇಷ ಅನುಭವ ನೀಡುತ್ತದೆ. ಚಿಕ್ಕ ಮಕ್ಕಳನ್ನು ಬಸವಪ್ಪ ಎಚ್ಚರಿಕೆಯಿಂದ ದಾಟಿ ದೈವ ರೂಪವನ್ನು ತೋರಿಸುವುದಂತು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.ಹಬ್ಬ ಆಚರಣೆ ಹಿನ್ನೆಲೆ:

ಚಿಕ್ಕರಸಿನಕೆರೆಯಲ್ಲಿ ಶತಮಾನಗಳ ಹಿಂದೆ ದೊಡ್ಡರಸಿನಕೆರೆ ಗ್ರಾಮದ ಬ್ರಾಹ್ಮಣ ಕುಟುಂಬದ ಹಸುಗಳನ್ನು ಮೇಯಲು ಹೆಬ್ಬಾಳದ ಕಡೆ ಬೀಡುತಿದ್ದರು. ಹಸುಗಳು ಮೇಯ್ದು ಬಂದು ಹಾಲು ಕೊಡುತ್ತಿದ್ದವು. ಆದರೆ, ಒಂದು ಹಸು ಮಾತ್ರ ಹಾಲು ಕೊಡದೆ ರಕ್ತವನ್ನು ಕೊಡುತ್ತಿತ್ತು ಇದನ್ನು ಗಮನಿಸಿದ ಮಾಲೀಕ ಮಾರನೇ ತಾನೇ ಹಸುಗಳನ್ನು ಮೇಯಿಸಲು ತೆರಳಿದ ಸಂಜೆ ವೇಳೆ ಹಸು ಕಾಣಲಿಲ್ಲ. ಅದನ್ನು ಹುಡುಕಿಕೊಂಡು ಹೋದಾಗ ಪೊದೆಯೊಂದರ ಮೇಲೆ ನಿಂತು ಹುತ್ತಕ್ಕೆ ಹಾಲು ಸುರಿಸುತ್ತಿತ್ತು. ಇದನ್ನು ಕಂಡು ಆಶ್ಚರ್ಯಗೊಂಡು ಗ್ರಾಮಸ್ಥರನ್ನು ಕರೆಯಿಸಿ ನೋಡಿದಾಗ ಅಲ್ಲಿ ವಿಗ್ರಹ ಸಿಕ್ಕಿತ್ತು. ಅದಕ್ಕೆ ಆಗಿನ ಸಂತರು ತಮ್ಮ ದಿವ್ಯ ದೃಷ್ಟಿಯಿಂದ ನೋಡಿ ಕಾಲಭೈರವೇಶ್ವರ ಎಂದು ಹೆಸರಿಟ್ಟರು.

ನಂತರ ದಿನಗಳಲ್ಲಿ ಬೋರಪ್ಪ ಬೋರದೇವರು ಎನ್ನುತ್ತ ಈ ಭಾಗದ ಜನರ ಇಷ್ಟಾರ್ಥಗಳನ್ನು ನೇರವೇರಿಸುತ್ತಿದ್ದ. ದೇವರ ಹೆಸರಿನಲ್ಲಿ ಬಸವಪ್ಪನನ್ನು ಬೀಡಲಾಯಿತು. ಕಳ್ಳ ಕಾಕರು ಮತ್ತು ಭ್ರಷ್ಟರಿಗೆ ಬಸವಪ್ಪ ಸಿಂಹಸ್ವಪ್ನವಾಗಿ ಲೋಕಯುಕ್ತರಂತೆ ಕಾರ್ಯ ನಿರ್ವಹಿಸಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ ಜನ ಮನ್ನಣೆಗಳಿಸಿತು. ರಾಜ್ಯಾದ್ಯಂತ ತನ್ನ ಪವಾಡಗಳನ್ನು ತೋರಿಸಿತು.

ಈ ದೇವರ ಕುಲದವರು ಶ್ರೀ ಕಾಲ ಭೈರವೇಶ್ವ ಅಭಿವೃದ್ದಿ ಸಮಿತಿ ರಚಿಸಿ ಕೊಂಡು ದೇವಸ್ಥಾನವನ್ನು ಅಭಿವೃದ್ದಿಪಡಿಸಿ ಕಲ್ಯಾಣ ಮಂಟಪ, ದಾಸೋಹಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ವರ್ಷಗಳು ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿ ಜಾತ್ರೆಗೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಅಣತಿಯಿಂತೆ ಮೂಲ ಸೌಲತ್ತುಗಳಿಗೆ ಆಧ್ಯತೆ ನೀಡಲಾಗಿದೆ.

- ಯಜಮಾನ್ ಶಿವಲಿಂಗೇಗೌಡ, ಅಧ್ಯಕ್ಷ, ಶ್ರೀಕಾಲಭೈರವೇಶ್ವರ ಅಭಿವೃದ್ಧಿ ಸಮಿತಿಶ್ರೀಕಾಲಭೈರವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಬಸವಪ್ಪನ ಮಹಿಮೆ ಅಪಾರವಾಗಿದೆ. ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಗಣ್ಯರು ತಮ್ಮ ಮನೆಗಳಿಗೆ ಬಸವಪ್ಪನ ಕರೆದುಕೊಂಡು ಹೋಗಿ ಪೂಜೆ ಮಾಡುತ್ತಾರೆ. ಪವಾಡಗಳಿಂದ ಬಸವಪ್ಪ ಪ್ರಸಿದ್ಧಿ ಪಡೆದಿದೆ. ದೇಗುಲ ದಿನೇ ದಿನೇ ಪುಣ್ಯಕ್ಷೇತ್ರವಾಗಿ ಮಾರ್ಪಾಡಾಗುತ್ತಿದೆ.

-ಬಸವಪ್ಪನ ಜೋಗಪ್ಪ