ಹಂಗಳ ಗ್ರಾಪಂಗೆ ಚಿಕ್ಕತಾಯಮ್ಮ ಅಧ್ಯಕ್ಷೆ

| Published : Jun 07 2025, 01:54 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಪಂ ಅಧ್ಯಕ್ಷರಾಗಿ ಚಿಕ್ಕತಾಯಮ್ಮ, ಉಪಾಧ್ಯಕ್ಷರಾಗಿ ಗೀತಾಸ್ವಾಮಿ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತರಾದ ಗಿರಿಜನ ಮಹಿಳೆ ಚಿಕ್ಕತಾಯಮ್ಮ, ಉಪಾಧ್ಯಕ್ಷರಾಗಿ ಗೀತಾಸ್ವಾಮಿ ಅವಿರೋಧ ಆಯ್ಕೆಯಾದರು.

ಹಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ನಾಗರಾಜು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರಾಗಿ ಚಿಕ್ಕತಾಯಮ್ಮ, ಉಪಾಧ್ಯಕ್ಷರಾಗಿ ಗೀತಾಸ್ವಾಮಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಮಧುಸೂದನ್‌ ಘೋಷಿಸಿದರು. ಆಯ್ಕೆಯಾದ ಅಧ್ಯಕ್ಷೆ ಚಿಕ್ಕತಾಯಮ್ಮ, ಉಪಾಧ್ಯಕ್ಷೆ ಗೀತಾಸ್ವಾಮಿ ಅವರನ್ನು ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಅಭಿನಂದಿಸಿ ಶುಭ ಕೋರಿದರು.

ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ಹಂಗಳ ನಾಗರಾಜು, ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಎಚ್.ಬಿ.ಶಿವಕುಮಾರ್‌, ಮಾಸ್ಟರ್‌ ಮಹದೇವಪ್ಪ, ಮುಖಂಡರಾದ ಕರಿಬಸವನಾಯಕ, ಮೇಲುಕಾಮನಹಳ್ಳಿ ನಾಗೇಶ್‌, ಚಿಕ್ಕಣ್ಣ, ವಕೀಲ ರಾಜೇಶ್‌, ಪಿಡಿಒ ಶಾಂತಮಲ್ಲಪ್ಪ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.ಗಿರಿಜನ ಮಹಿಳೆಗೆ ಒಲಿದ ಅಧ್ಯಕ್ಷ ಸ್ಥಾನ

ತಾಲೂಕಿನ ಹಂಗಳ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಸಾಮಾಜಿಕ ನ್ಯಾಯದಂತೆ ಹಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಗಿರಿಜನ ಮಹಿಳೆ ಚಿಕ್ಕತಾಯಮ್ಮನಿಗೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿದ್ದರೂ ಗಿರಿಜನ ಸಮುದಾಯಕ್ಕೆ ಅವಕಾಶ ಕಲ್ಪಿಸಿ ಕೊಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒಲವು ತೋರಿದ್ದಾರೆ ಎಂದು ಹೆಸರೇಳಲಿಚ್ಚಿಸಿದ ಸದಸ್ಯರೊಬ್ಬರು ಹೇಳಿದ್ದಾರೆ.