ಚಿಕ್ಕಾಟೀಲಿ ಮೂರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ

| Published : Aug 11 2025, 12:30 AM IST

ಚಿಕ್ಕಾಟೀಲಿ ಮೂರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿ ನಾಯಿ ಕಚ್ಚಿ ಮೂವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಚಿಕ್ಕಾಟಿ ಗ್ರಾಮದ ಸುಜನ್‌ (10), ಸಮೃದ್ಧಿ(7), ಮದನ್ (‌6)ಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಸಮೃದ್ಧಿಗೆ ತುಸು ಗಾಯಗೊಂಡಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೀದಿ ನಾಯಿ ಕಚ್ಚಿ ಮೂವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಚಿಕ್ಕಾಟಿ ಗ್ರಾಮದ ಸುಜನ್‌ (10), ಸಮೃದ್ಧಿ(7), ಮದನ್ (‌6)ಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಸಮೃದ್ಧಿಗೆ ತುಸು ಗಾಯಗೊಂಡಿದೆ ಎನ್ನಲಾಗಿದೆ.

ಗಾಯಗೊಂಡ ಮೂವರು ಮಕ್ಕಳನ್ನು ಪೋಷಕರು ಹಾಗೂ ಯುವಕರು ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ನಾಯಿ ಚುಚ್ಚು ಮದ್ದು ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬೀದಿ ನಾಯಿ ಕಚ್ಚಿ ಗಾಯಗೊಂಡ ಮೂವರು ಮಕ್ಕಳನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್‌ ಮೂಲಕ ಕಳುಹಿಸುವುದಕ್ಕೆ ಮಂಜು ಅವರು 108 ಕರೆ ಮಾಡಿದರೂ ಕರೆ ಸ್ವೀಕರಿಸದ ಕಾರಣ ಸಾರಿಗೆ ಬಸ್‌ ನಲ್ಲಿ ಮೈಸೂರಿಗೆ ಕಳುಹಿಸಿದ್ದಾರೆ.

ಮಂಜು ಮಾತನಾಡಿ, ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಗ್ರಾಪಂ ಕೂಡಲೇ ಬೀದಿ ನಾಯಿಗಳ ಸೆರೆ ಹಿಡಿಯಬೇಕು. ಆ್ಯಂಬ್ಯುಲೆನ್ಸ್‌ ಸಂಖ್ಯೆ 108ಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮಕ್ಕಳಿಗೆ ತುರ್ತು ಚಿಕಿತ್ಸೆ ಇರುವುದರಿಂದಲೇ ಮೈಸೂರು ಆಸ್ಪತ್ರೆಗೆ ಹೋಗಿ ಎಂದು ವೈದ್ಯರು ಹೇಳಿದ್ದಾರೆ. ಆದರೂ ಆ್ಯಂಬ್ಯುಲೆನ್ಸ್‌ ಸಿಗದೆ ಸಾರಿಗೆ ಬಸ್‌ ನಲ್ಲಿ ಕಳುಹಿಸಲು ಕಾರಣವಾದ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.