ಚಿಕ್ಕಮಗಳೂರಿನ ರಾಜ ಕಾಲುವೆ ಒತ್ತುವರಿ ತೆರವಿಗೆ ಚಾಲನೆ

| Published : Jan 01 2025, 12:00 AM IST

ಸಾರಾಂಶ

ಚಿಕ್ಕಮಗಳೂರು, ಕೆರೆಗಳು ಹಾಗೂ ರಾಜ ಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಹೈ ಕೋರ್ಟ್‌ ಆದೇಶ ಹೊರಡಿಸಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಪ್ರತಿವಾರ ತೆರವಿನ ಪ್ರಗತಿ ಪರಿಶೀಲನೆ ನಡೆಸುತ್ತಿದೆ.

ದಂಟರಮಕ್ಕಿ ಕೆರೆ - ಕೋಟೆ ಕೆರೆ ಸಂಪರ್ಕದ ಕಾಲುವೆ, ಸುಮಾರು 4 ಕಿ.ಮೀ. ಉದ್ದದ ಕಾಲುವೆ । ಮೊದಲನೇ ಹಂತದಲ್ಲಿ ಗಡಿ ಗುರುತು

ಕನ್ನಡ ಪ್ರಭವಾರ್ತೆ, ಚಿಕ್ಕಮಗಳೂರು

ಕೆರೆಗಳು ಹಾಗೂ ರಾಜ ಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಹೈ ಕೋರ್ಟ್‌ ಆದೇಶ ಹೊರಡಿಸಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಪ್ರತಿವಾರ ತೆರವಿನ ಪ್ರಗತಿ ಪರಿಶೀಲನೆ ನಡೆಸುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಗರದ ಕೋಟೆ ಕೆರೆ ಒತ್ತುವರಿ ಯಾಗಿದೆ, ಅದನ್ನು ಸರ್ವೆ ಮಾಡಿ ತೆರವುಗೊಳಿಸಬೇಕೆಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಹಾಗಾಗಿ ಮಂಗಳವಾರ ಕಂದಾಯ ಇಲಾಖೆ, ಸರ್ವೆ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಚಿಕ್ಕಮಗಳೂರು ನಗರಸಭೆ ಅಧಿಕಾರಿಗಳು ಜಂಟಿಯಾಗಿ ತೆರವು ಕಾರ್ಯಾಚರಣೆ ಆರಂಭಿಸಿದರು. ಇಲ್ಲಿನ ದಂಟರಮಕ್ಕಿ ಕೆರೆ ಹಾಗೂ ಕೋಟೆ ಕೆರೆ ಸಂಪರ್ಕಿಸುವ ರಾಜ ಕಾಲುವೆ ಒಟ್ಟು 4 ಕಿ.ಮೀ. ಇದ್ದು, ಹಲವೆಡೆ ಒತ್ತುವರಿಯಾಗಿದೆ. ಕೆಲವೆಡೆ ರೈತರು ಸಾಗುವಳಿ ಮಾಡಿದ್ದರೆ, ಮತ್ತೆ ಕೆಲವೆಡೆ ಸಮೀಪದ ಮನೆಯವರು ಒತ್ತುವರಿ ಮಾಡಿಕೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ ಕೋಟೆ ಕೆರೆಯಿಂದ ಕಾಲುವೆ ಸರ್ವೆ ಹಾಗೂ ಜೆಸಿಬಿ ಯಂತ್ರದಿಂದ ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ನಗರ ಪ್ರದೇಶದಲ್ಲಿ ಹಾದು ಹೋಗುವ ಕಾಲುವೆ ಎಡ ಮತ್ತು ಬಲ ಭಾಗದಲ್ಲಿ ಕಾಲುವೆ ಕಾಂಕ್ರಿಟ್‌ ವಾಲ್‌ನಿಂದ 6 ಮೀಟರ್‌ ಪ್ರದೇಶವನ್ನು ಬಫರ್‌ ಜೋನ್‌ ವ್ಯಾಪ್ತಿಗೆ ಬರುತ್ತಿದೆ. ಭೂ ಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳು ಈ ಮಾನದಂಡ ಪರಿಶೀಲಿಸಿ ನಂತರ ಅನುಮತಿ ನೀಡಲಿವೆ.

ಈ ಕಾಲುವೆ ಹಾದು ಹೋಗಿರುವ ಪ್ರದೇಶದಲ್ಲಿ ಹೆಚ್ಚಿನ ಭಾಗ ಕೃಷಿ ವಲಯವಾಗಿದ್ದರಿಂದ ಭೂ ಪರಿವರ್ತನೆಯಾಗಿ ನಿವೇಶನ ನಿರ್ಮಾಣಆಗಿರುವ ಸಂಖ್ಯೆ ತೀರ ಕಡಿಮೆ ಇದೆ. ಹಾಗಾಗಿ ತೆರವಿಗೆ ಹೆಚ್ಚಿನ ಸಮಸ್ಯೆ ಆಗಲಾರದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಮೊದಲ ಹಂತ:

ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಕಾಲುವೆ ಸಂರಕ್ಷಿತ ಪ್ರದೇಶವನ್ನು ಸರ್ವೆ ಮಾಡಿ ಗುರುತು ಮಾಡಲಾಗುವುದು. ಒತ್ತುವರಿಯಾಗಿದ್ದರೆ ಅಂತಹವರಿಗೆ ಖಾಲಿ ಮಾಡಲು ಒಂದು ವಾರಗಳ ಕಾಲ ಗಡುವು ನೀಡ ಲಾಗುವ ಅವಕಾಶ ಮೀರಿದ ನಂತರ ತೆರವುಗೊಳಿಸಿ ಸ್ವಾಧೀನಕ್ಕೆ ಪಡೆಯಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಸಂತೋಷ್‌, ಗ್ರಾಮ ಆಡಳಿತಾಧಿ ಕಾರಿ ಚೇತನ್‌, ರುದ್ರೇಶ್‌, ಸರ್ವೆಯರ್‌ ದೊರೆ, ಚಂದ್ರಶೇಖರ್‌, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ವಿಕಾಸ್‌, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌, ಎಂಜಿನಿಯರ್‌ ಲೋಕೇಶ್‌, ಕಂದಾಯ ಅಧಿಕಾರಿ ಶಿವಾನಂದ್‌, ಸಿಬ್ಬಂದಿಗಳಾದ ಉದಯ್‌, ವಸಂತ್‌ ಇದ್ದರು.---------------------------ಬಫರ್‌ ಜೋನ್‌ ಗುರುತು

ಸುಮಾರು ₹3.50 ಕೋಟಿ ವೆಚ್ಚದಲ್ಲಿ ಕೋಟೆ ಕೆರೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. ಈ ಕೆಲಸ ಮುಗಿಯುತ್ತಿದ್ದಂತೆ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು. ಕೆರೆಗೆ ಸಂಬಂಧಿಸಿದ ಜಾಗ ಒತ್ತುವರಿಯಾಗಿದ್ದು, ಈ ಸಂಬಂಧ 5 ಮನೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆದರೆ, ಸಂಬಂಧಿತ ಕಟ್ಟಡದ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

- ಬಿ.ಸಿ. ಬಸವರಾಜ್‌

ಪೌರಾಯುಕ್ತರು, ಚಿಕ್ಕಮಗಳೂರು ನಗರಸಭೆಪೋಟೋ ಫೈಲ್‌ ನೇಮ್‌ 31 ಕೆಸಿಕೆಎಂ 6

----

ಕೆರೆಗಳ ಸುತ್ತಳತೆ 30 ಮೀಟರ್‌ ಕೆರೆಗೆ ಸೇರಿರುವ ಜಾಗ ಎಂದು ಈಗ ಹೇಳುತ್ತಿದ್ದಾರೆ. ಆಸ್ತಿ ಮಾರಾಟ ಮಾಡಿ ನಿವೇಶನ ಮಾಡಲು ಜಾಗ ಖರೀದಿ ಮಾಡಿದ್ದೆ. 30 ಮೀಟರ್‌ಗೆ ಗುರುತು ಮಾಡಿ ಟ್ರಂಚ್‌ ಹೊಡೆದರೆ ನಾವುಗಳು ವಿಷ ಕುಡಿಯ ಬೇಕಾಗುತ್ತದೆ.- ಸಾರ್ವಜನಿಕರ ಅಳಲು

--- 31 ಕೆಸಿಕೆಎಂ 3ಚಿಕ್ಕಮಗಳೂರಿನ ಕೋಟೆ ಕೆರೆ ಬಳಿ ರಾಜ ಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳು ಮಂಗಳವಾರ ಚಾಲನೆ ನೀಡಿದರು.