ಸಾರಾಂಶ
ಬಾಲಕಾರ್ಮಿಕ ಪದ್ಧತಿ ಜಗತ್ತಿನ ಪಿಡುಗು. ಮಕ್ಕಳನ್ನು ದುಡಿಸುವ ಪದ್ಧತಿ ರಾಷ್ಟ್ರಕ್ಕೆ ಕಳಂಕವಾಗಿದ್ದು, ಮಕ್ಕಳ ದುಡಿಮೆ ಮಾನವ ಅಭಿವೃದ್ಧಿಗೆ ಮಾರಕವಾಗಿದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಈ ಪದ್ಧತಿಯ ಕಡಿವಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಾಧ್ಯಾಪಕ ಮಹೇಶ ನಾಡಗೇರಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಾಲಕಾರ್ಮಿಕ ಪದ್ಧತಿ ಜಗತ್ತಿನ ಪಿಡುಗು. ಮಕ್ಕಳನ್ನು ದುಡಿಸುವ ಪದ್ಧತಿ ರಾಷ್ಟ್ರಕ್ಕೆ ಕಳಂಕವಾಗಿದ್ದು, ಮಕ್ಕಳ ದುಡಿಮೆ ಮಾನವ ಅಭಿವೃದ್ಧಿಗೆ ಮಾರಕವಾಗಿದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಈ ಪದ್ಧತಿಯ ಕಡಿವಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಾಧ್ಯಾಪಕ ಮಹೇಶ ನಾಡಗೇರಿ ತಿಳಿಸಿದರು.ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.10 ಜೋರಾಪುರ ಪೇಠನಲ್ಲಿನ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ನಿಮಿತ್ತ ಮಕ್ಕಳ ಶೈಕ್ಷಣಿಕ ಸವಲತ್ತುಗಳು ಕುರಿತು ಅವರು ಮಾತನಾಡಿದರು.
ಶಿಕ್ಷಣದಿಂದ ಬದುಕು ಕಟ್ಟಿಕೊಂಡು, ಪ್ರಗತಿ ಹೊಂದಲು ಸಾಧ್ಯ ಎಂಬ ಅರಿವು ಪೋಷಕರಲ್ಲಿ ಮೂಡಿಸಬೇಕು. ಬಾಲಕಾರ್ಮಿಕ ಪದ್ಧತಿ ವಿರುದ್ಧದ ನಿಜವಾದ ಅಸ್ತ್ರ ಎಂದರೆ ಸಾರ್ವತ್ರಿಕ ಶಿಕ್ಷಣ. ಪೋಷಕರು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೇ ಅವರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ಬಾಲ್ಯವು ಸಂತೋಷ, ನಗು ಮತ್ತು ಶಿಕ್ಷಣದ ಸಮಯವಾಗಿರಬೇಕು. ಬಾಲ್ಯಾವಸ್ಥೆಯಲ್ಲಿ ಮಕ್ಕಳನ್ನು ಮೂಲಭೂತ ಶಿಕ್ಷಣ, ಜ್ಞಾನ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಬೇಕು. ಅವರ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ಹೇಳಿದರು.ಶಿಕ್ಷಕಿ ಶಬಾನ ಬೇಗಂ ಹೊನ್ನುಟಗಿ ಮಾತನಾಡಿ, ಬಾಲ ಕಾರ್ಮಿಕ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಎಮ್.ಎನ್.ಮುಂಜಣ್ಣಿ, ಝಡ್.ಎಸ್.ಆಸ್ಕಿ, ಪಿ.ಕೆ.ಖರಾತ್, ಸಚಿನ ನಾಶಿ, ಎ.ಐ.ಮಾಗಿ, ಪಿ.ಕೆ.ಖರಾತ, ವಿದ್ಯಾರ್ಥಿಗಳು, ಪಾಲಕರು, ಎಸ್.ಡಿ.ಎಮ್.ಸಿ.ಸದಸ್ಯರು, ಉಪಸ್ಥಿತರಿದ್ದರು.