ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿ ‘ಬೇಟಿ ಬಚಾವೊ ಬೇಟಿ ಪಡಾವೋ’ ಕಾರ್ಯಕ್ರಮದಡಿ ತಾಲೂಕು ಮಟ್ಟದಲ್ಲಿ ಅಪೌಷಿಕ್ಟ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಪೋಷಕರ ಪಾತ್ರ ಮುಖ್ಯವಾಗಿದೆ. ಕಾರಣ ಮಕ್ಕಳ ಪೋಷಕರು ಇಂದು ಉದ್ಯೋಗದ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಮಕ್ಕಳನ್ನು ಶಾಂತವಾಗಿರಿಸಲು ಸಿಹಿ ತಿನಿಸು, ಬಿಸ್ಕೆಟ್, ಚಿಪ್ಸ್ ಇಂತಹ ಅಂಗಡಿಗಳಿಂದ ಖರೀದಿಸಿದ ಪದಾರ್ಥ ನೀಡುತಿದ್ದಾರೆ. ಇದರಿಂದ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮಕ್ಕಳ ಎಲ್ಲಾ ತಾಯಂದಿರು ಮುಖ್ಯವಾಗಿ ಗಮನಿಸಬೇಕಿದೆ ಎಂದರು.
ಮನೆಯಲ್ಲಿ ತಯಾರಿಸಿದ ಆಹಾರ ಪಾದರ್ಥಗಳನ್ನು ನೀಡುವುದು ಉತ್ತಮ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಜೊತೆ ಹಣ್ಣುಗಳು, ಮೊಟ್ಟೆ, ಕಾಳುಗಳನ್ನು ಹಾಲು ನೀಡಿ ಹಾಗೂ ಮಕ್ಕಳ ಸ್ವಚ್ಛತೆ ಕಾಪಾಡಿ ಎಂದು ಹೇಳಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿರುವ ಭಾಗ್ಯ ಲಕ್ಷ್ಮಿ/ಸುಕನ್ಯ ಸಮೃದ್ದಿ, ಮಾತೃಂದನಾ, ಯೋಜನೆಯ ಕುರಿತು ಮಾಹಿತಿ ನೀಡಿದರು.
ಪೂರಕ ಪೌಷ್ಟಿಕ ಆಹಾರ, ಹಾಲು ಮತ್ತು ಮೊಟ್ಟೆಗಳನ್ನು ನೀಡುತ್ತಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.ಪೋಷಕರು ಇತ್ತೀಚೆಗೆ ಮಗುವಿಗೆ ಮೊಬೈಲ್ ಗಳನ್ನು ನೀಡುತ್ತಿದ್ದು ಬದಲಾಗಿ ಉತ್ತಮ ಪರಿಸರ, ಪ್ರಾಣಿ, ಪಕ್ಷಿಗಳ ಕಡೆ ಮಕ್ಕಳ ಮನವೊಲಿಸಿ ಬದಲಿಸುವುದರೊಂದಿಗೆ ಉತ್ತಮ ಸಾಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಹಾಗೂ ಮಗುವಿನ ಆರೋಗ್ಯ ಕೂಡ ಕಾಪಾಡಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ದೇವಿ ಮುದೋಳ್, ಹಾಗೂ ಮೇಲ್ವಿಚಾರಕಿ ಸಾವಿತ್ರವ್ವ, ಜೆಂಡರ್ ಸ್ಷೆಷಲಿಸ್ಟ್ ಕೇಶಿನಿ ಎಸ್.ಆರ್, ಪೋಷಣಾಭಿಯಾನ ತಾಲೂಕು ಸಂಯೋಜಕ ರಂಜಿತ, ಆರೋಗ್ಯ ಇಲಾಖೆಯ ಡಯಟಿಷಿಯನ್ ನಯನಾ ಹಾಗೂ ಹೇಮಲತಾ ,ನಸಿರ್ಂಗ್ ಆಪಿಸರ್ ಕೋಹಿಮ್ಸ್ ಮತ್ತಿತರರಿದ್ದರು. ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಸುಂಟಿಕೊಪ್ಪ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು. ಚಂದ್ರಿಕಾ ಪ್ರಾರ್ಥಿಸಿದರು.