ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ಅಭಿಮಾನಕ್ಕೆ ಅವರ ಹೆಸರಿನ ಅರ್ಧವನ್ನು ಬಳಸಿಕೊಂಡು ತಮ್ಮ ಮಗನಿಗೆ ‘ಅನ್ನ ರಾಮಯ್ಯ’ ಎಂದು ಹೆಸರಿಟ್ಟಿರುವುದು ವಿಶೇಷವಾಗಿದೆ. ಮಗುವಿನ ಹೆಸರಿನ ಮೂಲಕ ತಮ್ಮ ಅಭಿಮಾನವನ್ನು ಪೂಜಾರಿ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನೊಂದಿಗೆ ಬೆಳೆದು ದೊಡ್ಡವನಾಗಲಿ ಎಂಬ ಆಶಯದೊಂದಿಗೆ ತನ್ನ ಮಗುವಿಗೆ ಕುಟುಂಬದವರು ‘ಅನ್ನರಾಮಯ್ಯ’ ಎಂದು ಹೆಸರಿಟ್ಟಿದ್ದಾರೆ.ರಾಜ್ಯಕ್ಕೆ ಅನ್ನಭಾಗ್ಯ ಕೊಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನಕ್ಕಾಗಿ ಸೆ.29ರಂದು ಜನಿಸಿದ ತನ್ನ ಪುತ್ರನಿಗೆ ಅನ್ನರಾಮಯ್ಯ ಎಂದು ನಾಮಕರಣ ಮಾಡಲಾಗಿದೆ. ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ ಗ್ರಾಮದ ನಿವಾಸಿ, ಮಾಜಿ ಸೈನಿಕ ರಾಜಪ್ಪ ಪೂಜಾರಿ ಅವರು ಅನ್ನಭಾಗ್ಯ ಯೋಜನೆಯ ಅರ್ಧ ಹೆಸರನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನ ಅರ್ಧ ಪದವನ್ನು ಬಳಸಿ ತನ್ನ ಮಗುವಿಗೆ ‘ಅನ್ನರಾಮಯ್ಯ’ ಎಂದು ಹೆಸರಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ಅಭಿಮಾನಕ್ಕೆ ಅವರ ಹೆಸರಿನ ಅರ್ಧವನ್ನು ಬಳಸಿಕೊಂಡು ತಮ್ಮ ಮಗನಿಗೆ ‘ಅನ್ನ ರಾಮಯ್ಯ’ ಎಂದು ಹೆಸರಿಟ್ಟಿರುವುದು ವಿಶೇಷವಾಗಿದೆ. ಮಗುವಿಗೆ ಜನನ ಪ್ರಮಾಣಪತ್ರದ ಜೊತೆಗೆ ಹೆಸರನ್ನು ನೋಂದಾಯಿಸಲಾಗಿದೆ. ಮಗುವಿನ ಹೆಸರಿನ ಮೂಲಕ ತಮ್ಮ ಅಭಿಮಾನವನ್ನು ಪೂಜಾರಿ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರ ಮೇಲಿನ ಅಭಿಮಾನ ವ್ಯಕ್ತಪಡಿಸಿ ಅನ್ನಭಾಗ್ಯ ಬಡವರ ಹಸಿವು ನೀಗಿಸಿದೆ. ಹೀಗಾಗಿ ಅನ್ನಭಾಗ್ಯ ಹೆಸರಿನ ಅರ್ಧ ಹಾಗೂ ಸಿದ್ದರಾಮಯ್ಯ ನವರ ಮೇಲಿನ ಅಭಿಮಾನಕ್ಕೆ ಅವರ ಹೆಸರಿನ ಅರ್ಧ ಹೆಸರನ್ನು ಇಟ್ಟಿದ್ದೇನೆ. ಹೆರಿಗೆಗೆ ಮುನ್ನವೇ ಹೆಣ್ಣಾದರೆ ಪಾರ್ವತಿರಾಮಯ್ಯ, ಗಂಡಾದರೆ ಅನ್ನರಾಮಯ್ಯ ಎಂದು ಹೆಸರಿಡಲು ತಿರ್ಮಾನಿಸಲಾಗಿತ್ತು ಎಂದು ಮಗುವಿನ ತಂದೆ-ತಾಯಿ ರಾಜಪ್ಪ-ಅಂಬಿಕಾ ತಿಳಿಸಿದ್ದಾರೆ.