.ಮಗು ಮಾರಾಟ ಪ್ರಕರಣ: ತಂದೆ ಸಹಿತ ನಾಲ್ವ ಬಂಧನ

| Published : May 15 2024, 01:36 AM IST

ಸಾರಾಂಶ

ತಾಲೂಕಿನ ಡಿಕೆಹಳ್ಳಿ ಗ್ರಾಮ ಪಂಚಾಯ್ತಿಯ ದಾಸರಹೊಸಹಳ್ಳಿ ಗ್ರಾಮದ ಹೆನ್ರೀ ಜೋಸೆಫ್, ಮತ್ತು ಭುವನೇಶ್ವರಿ ಎಂಬುವವರು ವಲ್ಲಿ ಎಂಬುವರಿಂದ 5 ತಿಂಗಳ ಮಗುವನ್ನು 2023ರಲ್ಲಿ ದತ್ತು ನೀಡಿ ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಾಡಿದ ಸಾಲವನ್ನು ತೀರಿಸಲು ದಂಪತಿ ಹೆತ್ತ ಮಗನನ್ನೇ ಮಾರಾಟ ಮಾಡಿದ್ದಾರೆ ಎಂಬ ಪ್ರಕರ ಹೊಸ ತಿರುವು ಪಡೆದಿದೆ. ಮಧ್ಯವರ್ತಿಯ ಮೂಲಕ ತಂದೆಯೇ ಮಗುವನ್ನು ದತ್ತು ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಗುವಿನ ತಂದೆ ಸೇರಿದಂ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮಗುವಿನ ತಂದೆ ಮುನಿರಾಜು, ಮಧ್ಯವರ್ತಿ ವಲ್ಲಿ ಹಾಗೂ ಮಗುವನ್ನು ಅಕ್ರಮವಾಗಿ ದತ್ತು ಪಡೆದ ಹೆನ್ರೀ ಜೋಸೆಫ್ ಮತ್ತು ಪತ್ನಿ ಭುವನೇಶ್ವರಿ ಬಂಧಿತರುಪ್ರಕರಣ ಹಿನ್ನೆಲೆ:

ಪಟ್ಟಣದ ಕೆರೆಕೋಡಿ ಬಡಾವಣೆಯ ವಾಸಿ ಮುನಿರಾಜು ಮತ್ತು ಪವಿತ್ರಾ ದಂಪತಿಗಳಿಗೆ 2023ರ ಜೂ ೨೧ರಂದು ಗಂಡು ಮಗು ಜನನವಾಗಿತ್ತು. ಮಗುವಿಗೆ ಮೂರು ತಿಂಗಳು ತುಂಬಿರುವ ಸಮಯದಲ್ಲಿ ತಾಯಿ ಪವಿತ್ರಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು.

ಈ ಸಂದರ್ಭದಲ್ಲಿ ಪತಿ ಮುನಿರಾಜು ತನ್ನನ್ನು ಅವರ ಸ್ವಗ್ರಾಮವಾದ ಶ್ರೀನಿವಾಸಪುರ ತಾಲೂಕಿನ ಪಂದಿವಾರಪಲ್ಲಿಗೆ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿ ಇಟ್ಟಿದ್ದರು. ಅದೇ ಸಮಯದಲ್ಲಿ ಗಂಡನ ಜೊತೆಗೆ ಬಡಾವಣೆಯ ವಲ್ಲಿ ಎಂಬುವವರ ಜೊತೆಸೇರಿ ತನ್ನ ಮಗುವನ್ನು ಮಾರಾಟ ಮಾಡಿದ್ದಾರೆ. ಮಾರಾಟವಾದ ಮಗುವನ್ನು ವಾಪಸ್‌ ಕೊಡಿಸಿ ಎಂದು ಪವಿತ್ರ ಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದರು.

ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಮುನಿರಾಜುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಗಂಡ ಹೆಂಡತಿ ಸೇರಿ ಮಗುವನ್ನು ದತ್ತು ನೀಡಿ ಈಗ ನಾಟಕ ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ತಾಲೂಕಿನ ಡಿಕೆಹಳ್ಳಿ ಗ್ರಾಮ ಪಂಚಾಯ್ತಿಯ ದಾಸರಹೊಸಹಳ್ಳಿ ಗ್ರಾಮದ ಹೆನ್ರೀ ಜೋಸೆಫ್, ಮತ್ತು ಭುವನೇಶ್ವರಿ ಎಂಬುವವರು ವಲ್ಲಿ ಎಂಬುವವರಿಗೆ 5 ತಿಂಗಳ ಮಗುವನ್ನು 16.8.2023ರಂದು ದತ್ತು ನೀಡಿ ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ದತ್ತು ಸ್ವೀಕಾರ ಪತ್ರವನ್ನು ನೋಂದಣಿ ಮಾಡಿಸಿಕೊಟ್ಟಿದ್ದಾರೆ. ದತ್ತು ಸ್ವೀಕಾರ ಪತ್ರಕ್ಕೆ ಮಗುವಿನ ತಾಯಿ ಪವಿತ್ರ ಸಹ ಸಹಿ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ದತ್ತು ಸ್ವೀಕಾರ ನಡೆದು ೯ ತಿಂಗಳ ಬಳಿಕ ಮಗುವಿನ ತಾಯಿ ಮಗು ಮಾರಾಟ ಹೆಸರಿನಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ದಂಪತಿ ವಿವಿಧ ಕಡೆ ಸಾಲ ಪಡೆದಿದ್ದು ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ, ದತ್ತುಪಡೆದವರಿಂದ ಹಣ ಕಿತ್ತುಕೊಳ್ಳಲು ಹೀಗೆ ನಾಟಕ ಮಾಡುತ್ತಿದ್ದಾರೆಂಬ ಅರೋಪವೂ ಕೇಳಿಬಂದಿತ್ತು..