ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಾಗದಿರಲಿ: ಸ್ಥಾವರಮಠ

| Published : Jan 20 2024, 02:00 AM IST

ಸಾರಾಂಶ

ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.

ಹುಣಸಗಿ: ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ಮಹೇಶ ಸ್ಥಾವರಮಠ ಹೇಳಿದರು.

ಪಟ್ಟಣದ 1ನೇ ವಾರ್ಡ್‌ನ ಜನತಾ ಕಾಲೊನಿಯ ಅಂಗನವಾಡಿ ಸಂಖ್ಯೆ 4ರಲ್ಲಿ ನಡೆದ ಪೌಷ್ಟಿಕ ಆಹಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆ ಹಂತದಲ್ಲಿ ಪೌಷ್ಟಿಕ ಆಹಾರದ ಕೊರತೆ ಕಾಣಿಸಿಕೊಳ್ಳದಂತೆ ಗಮನಹರಿಸಿ ತಾಯಂದಿರು ಹೆಚ್ಚು ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಿ ಆರೋಗ್ಯಯುತರಾಗಿ ಬೆಳಸುವಂತಾಗಬೇಕು ಎಂದರು.

ಬೆಳೆಯುವ ಮಕ್ಕಳಲ್ಲಿ ಯಾವುದೇ ನ್ಯೂನತೆ ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರದ ಕಾರ್ಯಕರ್ತರದ್ದಾಗಿರುತ್ತದೆ. ಪೋಷಕರು ಮಕ್ಕಳಿಗೆ ಸೊಪ್ಪು, ಕಾಳುಗಳು, ಮೊಟ್ಟೆ, ತರಕಾರಿ, ಹಣ್ಣು, ಹಾಲು ಸೇರಿದಂತೆ ಇನ್ನಿತರ ಉತ್ತಮ ಪೋಷಕಾಂಶಗಳುಳ್ಳ ಆಹಾರ ನೀಡಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಹಿರೇಮಠ ಮಾತನಾಡಿ, ಪ್ರತಿ ಮಗುವಿಗೆ ಮೊದಲ ಎರಡು ವರ್ಷದಲ್ಲಿ ಪೌಷ್ಟಿಕ ಆಹಾರವು ಭೌತಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ತಾಯಂದಿರು ಇದರ ಬಗ್ಗೆ ಹೆಚ್ಚಿನ ಗಮನವಹಿಸುವಂತೆ ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯೆ ಭೀಮವ್ವ ಕಡಿಮನಿ, ಆನಂದ ಬಾರಿಗಿಡದ, ಬಸವರಾಜ ವೈಲಿ, ವಿನೋದ ದೊರೆ, ಪತ್ರಕರ್ತ ಬಸವರಾಜ ಕಟ್ಟಿಮನಿ, ಶೋಭಾ ಸಜ್ಜನ್, ರಂಗಮ್ಮ ಬಿರಾದಾರ್, ಶಾಂತ ಬಿರಾದಾರ್, ಶ್ರೀದೇವಿ, ಶಾಂತಮ್ಮ ಕಟ್ಟಿಮನಿ, ಲಕ್ಷ್ಮೀ ಪೂಜಾರಿ, ಚಾಂದಬಿ ನಧಾಪ್, ರೇಣುಕಾ ಚಲುವಾದಿ, ಸಾವಿತ್ರಿಭಾಯಿ, ಶಾಂತಮ್ಮ ಹೂಗಾರ, ಸುಧಾ ಬಿರಾದಾರ್, ಯಂಕಮ್ಮ ಅಂಚಲಿ, ಚಂದ್ರಕಲಾ ಸೇರಿದಂತೆ ಇತರರಿದ್ದರು.