ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಗೊರ್ಲೆಕೊಪ್ಪ ಗ್ರಾಮದಲ್ಲಿ ಸದಾ ಧಾರ್ಮಿಕ ಕಾರ್ಯಗಳು ಜರುಗುತ್ತಾ ಬಂದಿವೆ. ಇಲ್ಲಿನ ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಕುಕನೂರು: ಧಾರ್ಮಿಕ ಕಾರ್ಯಗಳಿಂದ ಮಕ್ಕಳಿಗೆ ಸಂಸ್ಕಾರ ಪ್ರಾಪ್ತ ಆಗುತ್ತದೆ ಎಂದು ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಶ್ರೀಗಳು ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಗೊರ್ಲೆಕೊಪ್ಪ ಗ್ರಾಮದಲ್ಲಿ ಶ್ರೀ ಕಟ್ಟಿಬಸವೇಶ್ವರ ಹಾಗೂ ಬಸವಲಿಂಗೇಶ್ವರ ಕಾರ್ತಿಕೋತ್ಸವ ಮತ್ತು ಶರಣಬಸವೇಶ್ವರ ಮಹಾ ಪುರಾಣ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವ ಕಾರ್ಯ ಆಗಬೇಕು. ಆಧುನಿಕ ಈ ಕಾಲದಲ್ಲಿ ಸಂಸ್ಕಾರ ಕಣ್ಮರೆ ಆಗುತ್ತಿದೆ. ಅದರಲ್ಲೂ ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಆಗುತ್ತಿಲ್ಲ. ಗ್ರಾಮದಲ್ಲಿ ಜರುಗುವ ಧಾರ್ಮಿಕ ಕಾರ್ಯಗಳು ಮಕ್ಕಳಲ್ಲಿ ಸಂಸ್ಕಾರ ತುಂಬುತ್ತವೆ ಎಂದರು.ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಗೊರ್ಲೆಕೊಪ್ಪ ಗ್ರಾಮದಲ್ಲಿ ಸದಾ ಧಾರ್ಮಿಕ ಕಾರ್ಯಗಳು ಜರುಗುತ್ತಾ ಬಂದಿವೆ. ಇಲ್ಲಿನ ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಪುರಾಣ ಪ್ರವಚನಕಾರ ಪ್ರಭಯ್ಯ ಸೊಪ್ಪಿನಮಠ, ಹಾರ್ಮೋನಿಯಂ ವಾದಕ ವೀರಯ್ಯ ಹಿರೇಮಠ, ತಬಲಾ ವಾದಕ ಈಶಪ್ಪ, ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ, ಪ್ರಮುಖರಾದ ಚನ್ನಪ್ಪಗೌಡ ಮಾಪಾ, ಬಸಯ್ಯ ಹಿರೇಮಠ, ಕಟ್ಟಿ ಬಸಯ್ಯ ಲಿಂಗಾಪುರ, ಶಾಂತವೀರಯ್ಯ ಜುಲ್ಪಿ, ಕರಬಸಯ್ಯ ಬಿನ್ನಾಳ, ಕಲ್ಲಯ್ಯ ಮೂಲಿಮನಿ, ವಿರೂಪಾಕ್ಷಯ್ಯ ಹಿರೇಮಠ, ರುದ್ರಯ್ಯ ಕೊಮಾರ, ಮಂಜುನಾಥ ಗುನ್ನಾಳ. ಶರಣಯ್ಯ ಇಟಗಿ ಇತರರಿದ್ದರು.