ಮಕ್ಕಳು ಈ ದೇಶದ ಭವಿಷ್ಯದ ಬೌದ್ಧಿಕ ಆಸ್ತಿ: ಹೆಚ್.ಆನಂದ್ ಕುಮಾರ್

| Published : Nov 16 2024, 12:33 AM IST

ಮಕ್ಕಳು ಈ ದೇಶದ ಭವಿಷ್ಯದ ಬೌದ್ಧಿಕ ಆಸ್ತಿ: ಹೆಚ್.ಆನಂದ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

Children are the future intellectual property of this country: H. Anand Kumar

-ರೋಟರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಚಿಣ್ಣರು

---------

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮಕ್ಕಳು ಈ ದೇಶದ ಭವಿಷ್ಯದ ನಿಜವಾದ ಬೌದ್ಧಿಕ ಆಸ್ತಿ. ಅವರನ್ನು ಪೋಷಿಸುವ, ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರದು ಎಂದು ಸಾಹಿತಿ ಹೆಚ್.ಆನಂದ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನ ಆಚರಿಸಲಾಗುತ್ತಿದೆ. ದೇಶಕ್ಕೆ ನೆಹರು ಅವರ ಕೊಡುಗೆ ಹಿರಿದು. ಈ ದೇಶವನ್ನು ಬಹುತ್ವದ ನೆಲೆಯಲ್ಲಿ ಕಟ್ಟಿದ ಮೊದಲ ಪ್ರಧಾನಿ. ಅವರ ಕಂಡ ಕನಸಿನ ಭಾರತಕ್ಕೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು ಡಾ.ಬಿ.ಆರ್.ಅಂಬೇಡ್ಕರ್‌. ಅನೇಕ ವಿಶ್ವವಿದ್ಯಾನಿಲಯ, ಸಂಶೋಧನಾ ಕೇಂದ್ರ ಮಾತ್ರವಲ್ಲದೆ, ಭಾರತವನ್ನು ಪ್ರಗತಿಯ ಹಾದಿಗೆ ತಂದ ದೇಶದ ಮೊದಲ ಪ್ರಧಾನಿ ಎಂದರು.

ಪ್ರಸಾರ ಭಾರತಿ, ಆಕಾಶವಾಣಿ ಕೇಂದ್ರದ ಡಾ.ನವೀನ್ ಮಸ್ಕಲ್ ಮಾತನಾಡಿ, ಮಕ್ಕಳ ಹಕ್ಕು, ಶಿಕ್ಷಣ ಮತ್ತು ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಚಾಚಾ ಎಂದೇ ಹೆಸರಾದ ನೆಹರು ಅವರು ಮಕ್ಕಳ ಕುರಿತಾದ ಪ್ರೀತಿಯ ದ್ಯೋತಕವಾಗಿ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು, ಋಷಿ ವಾಕ್ಯದೊಡನೆ ವಿಜ್ಞಾನ, ಕಲೆ ಸಮನ್ವಯದಿಂದ ಬದುಕು ಸಮೃದ್ಧ ಎಂದರು.

ರೋಟರಿ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಮ್.ಉಮಾದೇವಿ ಮಾತನಾಡಿ, ಮಕ್ಕಳ ಮನಸ್ಸು ಹೂವಿನಂತೆ ಅರಳಬೇಕು. ಅದಕ್ಕೆ ಸೂಕ್ತ ಶೈಕ್ಷಣಿಕ ವಾತಾವರಣವನ್ನು ಶಿಕ್ಷಕರನ್ನು ಒಳಗೊಂಡಂತೆ ಪೋಷಕರು ಸಹ ಬದ್ಧತೆಯೊಂದಿಗೆ ಮಕ್ಕಳ ಮನೋವಿಕಾಸಕ್ಕೆ ನೆರವಾಗಬೇಕು ಎಂದರು. ಶಿಕ್ಷಕರಾದ ನಿರ್ಮಲ ಸ್ವಾಗತಿಸಿದರು. ಶುಭಲಕ್ಷ್ಮಿ ನಿರೂಪಿಸಿ ವಂದಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ಆಯೋಜಿಸಲಾದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ಸೊಬಗು ಹೆಚ್ಚಿಸಿತು. ರೋಟರಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ, ಸಹ ಶಿಕ್ಷಕರಾದ ವೆಂಕಟಲಕ್ಷ್ಮಿ, ವನಜಾಕ್ಷಮ್ಮ, ಜಯಣ್ಣ, ಉಮೇಶ್, ಸುಮ, ಜೀನತ್, ರಜಿಯಾ ಬೇಗಂ, ಮಧು ಕುಮಾರ್, ಕವಿತಾ, ಅನುಷಾ ಇದ್ದರು.

--------------

ಪೋಟೋ: ಚಿತ್ರದುರ್ಗದ ರೋಟರಿ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ದಿನಾಚರಣೆಯಲ್ಲಿ ಚಿಣ್ಣರು ಉತ್ಸಾಹಿಂದ ಪಾಲ್ಗೊಂಡಿದ್ದರು.

---------

ಪೋಟೋ : 15 ಸಿಟಿಡಿ4