ಬಾಲ್ಯದಿಂದಲೇ ಮಕ್ಕಳು ಓದುವ, ಬರೆಯುವ, ಕಲಿಯುವ ಆಸಕ್ತಿ ಇದ್ದಾಗ ಮಾತ್ರ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು
ಕನ್ನಡಪ್ರಭ ವಾರ್ತೆ ಮಧುಗಿರಿ
ಬಾಲ್ಯದಿಂದಲೇ ಮಕ್ಕಳು ಓದುವ, ಬರೆಯುವ, ಕಲಿಯುವ ಆಸಕ್ತಿ ಇದ್ದಾಗ ಮಾತ್ರ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಕೊಡಿಗೇನಹಳ್ಳಿ ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಜಿ.ಎಸ್.ಸದಾಶಿವರೆಡ್ಡಿ ಅಭಿಪ್ರಾಯಪಟ್ಟರು.ತಾಲೂಕಿನ ಕೊಡಿಗೇನಹಳ್ಳಿ ಸರ್ವೋದಯ ಪ್ರೌಢಶಾಲೆಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ವಯೋ ನಿವೃತ್ತಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಾಲೆಗಳು ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳ ದಾಖಲಾತಿ ಅತಿ ಮುಖ್ಯ, ಶಾಲೆಗಳಿ ದಾಖಲಾತಿ ಇಲ್ಲವೆಂದರೆ ಹೇಗೆ. ಹಾಗಾಗಿ ,ಮಕ್ಕಳಿದ್ದರೆ ಮಾತ್ರ ಶಿಕ್ಷಕರು, ದಾಖಾಲಾತಿ ಇಲ್ಲದಿದ್ದರೆ ಶಿಕ್ಷಕರ ಅಗತ್ಯವಿಲ್ಲ, ಶಿಕ್ಷಕರ ಪಾಲಿಗೆ ಮಕ್ಕಳೇ ದೊಡ್ಡ ಆಸ್ತಿ ಎಂದರು.ನಾನು ಕೂಡ ಇದೇ ಶಾಲೆಯಲ್ಲಿ ಓದಿದ್ದು, ಇದೇ ಶಾಲೆಯಲ್ಲಿ ಶಿಕ್ಷಕನಾಗಿ, ಉಪನ್ಯಾಸಕನಾಗಿ ಪಾಠ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಶಾಲೆಯ ಆಡಳಿತ ಮಂಡಳಿಯವರಾಗಲಿ, ಶಿಕ್ಷಕರಾಗಲಿ ಯಾವುದೇ ಬೇದವಿಲ್ಲದೆ ನನ್ನನ್ನು ಉತ್ತಮವಾಗಿ ನಡೆಸಿಕೊಂಡು ನನ್ನ ಸೇವೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿಗೂ ಮತ್ತು ವಿದ್ಯಾರ್ಥಿಗಳಿಗೂ ಎಂದೆಂದಿಗೂ ನಾನು ಅಬಾರಿ ಎಂದರು.
ಕಾರ್ಯಕ್ರಮದಲ್ಲಿ ಬಿಇಒ ಕೆ.ಎನ್.ಹನುಮಂತರಾಯಪ್ಪ ಮಾತನಾಡಿ, ನಾನು ಸಹ ಇದೇ ಶಾಲೆಯಲ್ಲಿ ಸದಾಶಿವರೆಡ್ಡಿ ಅವರ ಜೊತೆ ಓದಿದ್ದು, ಅಂದು ನಮ್ಮ ಗುರುಗಳು ನೀಡಿದ ಉತ್ತಮ ಶಿಕ್ಷಣ ನಮ್ಮನ್ನು ಈ ಎತ್ತರಕ್ಕೆ ಬೆಳಸಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದು, ಅದೇ ರೀತಿ ತಾವು ಸಹ ಗುಣ ಮಟ್ಟದ ಶಿಕ್ಷಣ ಕಲಿತು ತಮ್ಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ಸಂಸ್ಥಾಪಕ ಕಾರ್ಯದರ್ಶಿ ಜಿ.ವಿ.ವೆಂಕಟರಾಮಯ್ಯ ಮಾತನಾಡಿ, ಸದಾಶಿವರೆಡ್ಡಿ ಸರ್ಕಾರದ ದೃಷ್ಠಿಯಲ್ಲಿ ವಯೋ ನಿವೃತ್ತಿ ಹೊಂದಿದ್ದಾರೆಯೇ ಹೊರತು ವೃತ್ತಿಯಿಂದಲ್ಲ. ಅವರು ಓದಿದ ಶಾಲೆ ಸಲ್ಲಿಸಿದ ಸೇವೆಗೆ ಮುಂದೆಯೂ ಸಹ ಈ ಶಾಲೆಯ ಮಕ್ಕಳಿಗೆ ಪಾಠ ಪ್ರವಚನ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ರವಿ ಮೋಹನರೆಡ್ಡಿ , ಮುದ್ದುಮಲ್ಲಯ್ಯ, ಚಿಕ್ಕರಾಮಯ್ಯ, ರಂಗಧಾಮಯ್ಯ, ಪ್ರಕಾಶ್, ರಾಜ್ ಗೋಪಾಲ್ ರೆಡ್ಡಿ, ಕೆ.ವಿ.ಸತ್ಯನಾರಾಯಣ ಎ.ರಾಮಚಂದ್ರಪ್ಪ, ಮೆಡುವ ಕಾರ್ಯದರ್ಶಿ ಮಧು, ಮುಖ್ಯ ಶಿಕ್ಷಕ ಸದಾನಂದ, ಪ್ರಸನ್ನಚಾರ್, ನಬಿಸಾಬ್, ಸುಮಲತಾ, ಲಕ್ಷ್ಮೀ, ಶಿವಕುಮಾರ್,ಸಂಪತ್ ಕುಮಾರ್, ಕಾಳಪ್ಪ, ನಿಜರಾಜು, ದಿವ್ಯ, ಸಿದ್ದಿಕಾಬಾನು, ಶಾಲಾ ಸಿಬ್ಬಂದಿ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.