ಶಾಲೆಗಳ ಆರಂಭ: ಮಕ್ಕಳಿಗೆ ಹೂ, ಚಾಕಲೇಟ್ ನೀಡಿ ಸ್ವಾಗತ

| Published : Jun 01 2024, 12:46 AM IST

ಶಾಲೆಗಳ ಆರಂಭ: ಮಕ್ಕಳಿಗೆ ಹೂ, ಚಾಕಲೇಟ್ ನೀಡಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ರಜೆ ಕಳೆದು ಶುಕ್ರವಾರದಿಂದ ಶಾಲೆಗಳು ಪ್ರಾರಂಭವಾಗಿವೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿ, ಚಾಕಲೇಟ್ ವಿತರಿಸಿದರು. ಶಾಲೆ ಆರಂಭವಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ಕಳೆದೆರಡು ದಿನಗಳಿಂದ ಸ್ವಚ್ಛತೆ ಸೇರಿದಂತೆ ಅನೇಕ ಪೂರ್ವಸಿದ್ಧತೆ ಮಾಡಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಬೇಸಿಗೆ ರಜೆ ಕಳೆದು ಶುಕ್ರವಾರದಿಂದ ಶಾಲೆಗಳು ಪ್ರಾರಂಭವಾಗಿವೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿ, ಚಾಕಲೇಟ್ ವಿತರಿಸಿದರು.

ಶಾಲೆ ಆರಂಭವಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ಕಳೆದೆರಡು ದಿನಗಳಿಂದ ಸ್ವಚ್ಛತೆ ಸೇರಿದಂತೆ ಅನೇಕ ಪೂರ್ವಸಿದ್ಧತೆ ಮಾಡಿಕೊಂಡಿದ್ದರು.

ಶಾಲೆಗಳ ಅಲಂಕಾರ: ಮಕ್ಕಳಿಗೆ ಸಿಹಿಯೂಟ:

ಜಿಲ್ಲಾದ್ಯಂತ ಶಾಲೆಗಳು ಶುಕ್ರವಾರದಿಂದ ಆರಂಭವಾಗಿದ್ದು, ಆವರಣದಲ್ಲಿ ರಂಗೋಲಿ ಹಾಗೂ ದ್ವಾರ ಬಾಗಿಲುಗಳಿಗೆ ಮಾವಿನ ತೋರಣ, ಬಲೂನುಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಮೊದಲ ದಿನ ಕೆಲವು ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಪಾಯಸ, ಮಾವಿನ ಹಣ್ಣು, ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಪುಸ್ತಕದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಮಕ್ಕಳು ಉತ್ಸುಕತೆಯಿಂದ ಶಾಲೆಗೆ ಬರುತ್ತಿದ್ದರು.

ಅಕ್ಷರಾಭ್ಯಾಸ- ಲಡ್ಡು ವಿತರಣೆ:

ಶುಕ್ರವಾರ ನಗರದ ನಿಟ್ಟುವಳ್ಳಿಯ 550 ಮಕ್ಕಳನ್ನು ಹೊಂದಿದ ಪಿಎಂಶ್ರೀ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್ ಗಣ್ಯರು ಭೇಟಿ ನೀಡಿ ಶಾರದಾದೇವಿ ಭಾವಚಿತ್ರಕ್ಕೆ ಪುಷ್ಪಗಳ ಅರ್ಪಿಸಿ ಶಾಲೆಯಲ್ಲಿನ ಸಿದ್ಧತೆ ನೋಡಿ ಸಂತೋಷ ವ್ಯಕ್ತಪಡಿಸಿದರು.

ಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಶಾಲೆಯಲ್ಲಿ ಸ್ವಾಗತ ಕಾರ್ಯಕ್ರಮವನ್ನು ಸಹಾ ಮಕ್ಕಳಿಂದ ಮಾಡಿಸಿದರು. ಮಕ್ಕಳಿಗೆ ನೋಟ್ ಪುಸ್ತಕ, ಸಮವಸ್ತç ವಿತರಣೆ ಮಾಡಿದರು. ಸಜ್ಜನ್ ಸೂಪರ್ ಮಾರುಕಟ್ಟೆಯ ನವೀನ್ ಅವರು ಮಕ್ಕಳಿಗೆ ಲಡ್ಡು ವಿತರಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ದುರುಗಪ್ಪ, ಸಿಆರ್‌ಪಿ ಮಂಜಾನಾಯ್ಕ, ವಿಷಯ ಪರಿವೀಕ್ಷಕರಾದ ವಸಂತಕುಮಾರಿ, ಸುಧಾ, ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯ ಸುರೇಶ, ಸ್ವಾಮಿ, ಶಿಕ್ಷಕರಾದ ಜಯಪ್ಪ, ಅಜಯ ನಾರಾಯಣ, ಸೇವಾದಳ ಸಂಘಟಕ ಪಕ್ಕೀರ ಗೌಡ, ಶಿಕ್ಷಕರು, ಪೋಷಕರು, ಇತರರು ಇದ್ದರು.

- - - -31ಕೆಡಿವಿಜಿ45ಃ:

ದಾವಣಗೆರೆಯ ನಿಟ್ಟುವಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಡಿಡಿಪಿಐ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಶಾಲೆಗೆ ಸ್ವಾಗತಿಸಿ ಶುಭ ಕೋರಿದರು.

-31ಕೆಡಿವಿಜಿ46ಃ:

ದಾವಣಗೆರೆಯಲ್ಲಿ ಶಾಲಾ ಸ್ವಾಗತ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಮಕ್ಕಳು ಉದ್ಘಾಟಿಸಿದರು. -31ಕೆಡಿವಿಜಿ47ಃ:

ದಾವಣಗೆರೆಯ ನಿಟ್ಟುವಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

-31ಕೆಡಿವಿಜಿ48ಃ:

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಶಾಲೆ ಆರಂಭದ ಹಿನ್ನಲೆಯಲ್ಲಿ ಮಕ್ಕಳಿಗೆ ಲಡ್ಡು ವಿತರಿಸಲಾಯಿತು.