ಸಾರಾಂಶ
ಪೊಲೀಸ್ ಠಾಣೆ ಎದುರೇ ಎನ್.ಆರ್. ವೃತ್ತದಲ್ಲಿ ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂಧೀಜಿ ವೇಶದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಐವರು ಮಕ್ಕಳನ್ನು ಶ್ರೀರಾಮ ಸೇನೆಯವರು ರಕ್ಷಣೆ ಮಾಡಿ ಅವರನ್ನು ಮೊದಲು ಪೊಲೀಸ್ ಠಾಣೆಗೆ ಕರೆತಂದು ನಂತರ ಪೊಲೀಸರ ಸಲಹೆ ಮೇರೆಗೆ ಮಕ್ಕಳನ್ನು ಕಲ್ಯಾಣ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ. ಇಂತಹ ಮಕ್ಕಳು ಇಲ್ಲಿ 200ಕ್ಕೂ ಹೆಚ್ಚು ಇದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಪೊಲೀಸ್ ಠಾಣೆ ಎದುರೇ ಎನ್.ಆರ್. ವೃತ್ತದಲ್ಲಿ ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂಧೀಜಿ ವೇಶದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಐವರು ಮಕ್ಕಳನ್ನು ಶ್ರೀರಾಮ ಸೇನೆಯವರು ರಕ್ಷಣೆ ಮಾಡಿ ಅವರನ್ನು ಮೊದಲು ಪೊಲೀಸ್ ಠಾಣೆಗೆ ಕರೆತಂದು ನಂತರ ಪೊಲೀಸರ ಸಲಹೆ ಮೇರೆಗೆ ಮಕ್ಕಳನ್ನು ಕಲ್ಯಾಣ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ.ಶ್ರೀರಾಮಸೇನೆ ಜಾನೆಕೆರೆ ಹೇಮಂತ್ ಮಾಧ್ಯಮದೊಂದಿಗೆ ಮಾತನಾಡಿ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ ಸೇರಿದಂತೆ ಇತರೆ ಭಾಗಗಳಿಂದ ನಮ್ಮ ರಾಜ್ಯ ಜಿಲ್ಲೆಗೆ ಮಕ್ಕಳು ಹಾಗೂ ಇತರರು ಕರೆತಂದು ಭಿಕ್ಷಾಟನೆ ಮಾಡಿಸುವ ಜಾಲವಿದ್ದು, ಹಾಸನ ನಗರದ ಎನ್.ಆರ್. ವೃತ್ತದಲ್ಲಿ ಪೊಲೀಸ್ ಠಾಣೆ ಎದುರೇ ಐದು ಜನ ಮಕ್ಕಳು ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ಗಾಂಧೀಜಿ ವೇಷದಲ್ಲಿ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ತಿಳಿದು ಶ್ರೀರಾಮಸೇನೆಯಿಂದ ಅವರನ್ನು ರಕ್ಷಣೆ ಮಾಡಿ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಆದರೆ ನಂತರ ಸಲಹೆ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಯ ಇಲಾಖೆಗೆ ಒಪ್ಪಿಸಲಾಗಿದೆ. ಇಂತಹ ಮಕ್ಕಳು ಇಲ್ಲಿ 200ಕ್ಕೂ ಹೆಚ್ಚು ಇದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ ಎಂದು ಹೇಳಿದರು.ಮಕ್ಕಳ ಕಲ್ಯಾಣ ಸಮಿತಿಯ ಛೇರ್‌ಪರ್ಸನ್ ಕೋಮಲ ಮಾತನಾಡಿ, ಶ್ರೀರಾಮಸೇನೆಯವರು ಮಕ್ಕಳನ್ನು ಕರೆತಂದು ಉತ್ತಮ ಕೆಲಸ ಮಾಡಿದ್ದಾರೆ. ಇಲ್ಲಿರುವ ಮಕ್ಕಳಲ್ಲಿ 10 ವರ್ಷ, 14, 17 ವರ್ಷದವರು ಬಾಲಕರು ಇದ್ದಾರೆ. ಪ್ರಸ್ತುತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹೊರಗಿನಿಂದ ಈ ಮಕ್ಕಳು ಬಂದಿದ್ದು, ಮಕ್ಕಳ ಕಲ್ಯಾಣ ಸಮಿತಿಯಿಂದ ಇಂತಹ ಮಕ್ಕಳನ್ನು ವಿಚಾರಿಸಿ ಎಜಕೇಶನ್ ಕೊಡಲು ಮುಂದಾಗುತ್ತೇವೆ. ಇಂತಹ ಮಕ್ಕಳ ಸಂಖ್ಯೆ ದಿನೇದಿನೆ ಹೆಚ್ಚಾಗಿ ಅವ್ಯವಸ್ಥೆ ಉಂಟಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಗಮನವಹಿಸಬೇಕು ಎಂದರು.ಕಾರ್ಯಾಧ್ಯಕ್ಷ ಮಹೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮನು ಜಗತ್ತು, ನಗರ ಅಧ್ಯಕ್ಷ ಅರುಣ್, ತಾಲೂಕು ಅಧ್ಯಕ್ಷ ಪ್ರದೀಪ್, ಇತರರು ಉಪಸ್ಥಿತರಿದ್ದರು.