ಪಟ್ಟಣದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್‌ ಪಿಯು ಕಾಲೇಜಿನಲ್ಲಿ ಭಟ್ಕಳ ಎಜ್ಯುಕೇಶನ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಘಟಕದಿಂದ ಏ. 20ರವರೆಗೆ ನಡೆಯುವ ಚಿಣ್ಣರ ಮೇಳ-3 ಮಕ್ಕಳ ಬೇಸಿಗೆ ಶಿಬಿರವನ್ನು ನಿವೃತ್ತ ಸೈನಿಕ ಹಾಗೂ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ನಾಯ್ಕ ಉದ್ಘಾಟಿಸಿದರು.

ಭಟ್ಕಳದಲ್ಲಿ ಚಿಣ್ಣರ ಮೇಳ-3 ಚಾಲನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್‌ ಪಿಯು ಕಾಲೇಜಿನಲ್ಲಿ ಭಟ್ಕಳ ಎಜ್ಯುಕೇಶನ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಘಟಕದಿಂದ ಏ. 20ರವರೆಗೆ ನಡೆಯುವ ಚಿಣ್ಣರ ಮೇಳ-3 ಮಕ್ಕಳ ಬೇಸಿಗೆ ಶಿಬಿರವನ್ನು ನಿವೃತ್ತ ಸೈನಿಕ ಹಾಗೂ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಚಿಣ್ಣರ ಮೇಳದಿಂದ ಮಕ್ಕಳಿಗೆ ಅನುಕೂಲವಾಗಲಿದೆ. ಹಿಂದೆ ನಾವು ಇಂತಹ ಶಿಬಿರಗಳು ಯಾವುದೋ ದೂರದ ಊರುಗಳಲ್ಲಿ ನಡೆಯುತ್ತಿರುವುದನ್ನು ಕೇಳುತ್ತಿದ್ದೆವು, ಆದರೆ ಈ ಚಿಣ್ಣರ ಮೇಳ ಎಂಬ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ನಮ್ಮ ಊರಿನಲ್ಲಿಯೇ ನಡೆಸುತ್ತಿರುವುದು ಹೆಮ್ಮಯ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ, ಈ ಚಿಣ್ಣರ ಮೇಳವು ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರುವುದರ ಜೊತೆಗೆ ನಿತ್ಯ ಮನೆಯಲ್ಲಿ ನೃತ್ಯ ಮತ್ತು ನಾಟಕದ ಜೊತೆಗೆ ಭಜನೆ ಮಾಡುವ, ಗುರು ಹಿರಿಯರಿಗೆ ಗೌರವಿಸುವ, ನಿತ್ಯ ತಂದೆ ತಾಯಿಗೆ ನಮಸ್ಕರಿಸುವ, ಸಂಸ್ಕಾರವನ್ನು ಕಲಿಸುವ ಒಳ್ಳೆಯ ವೇದಿಕೆಯಾಗಿದೆ ಎಂದರು.

ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದ ಗೌರವಾಧ್ಯಕ್ಷ ನಾರಾಯಣ ದೈಮನೆಯವರು, ಗೌರವ ಮಾರ್ಗದರ್ಶಕ ಮಾನಸುತ ಶಂಭು ಹೆಗಡೆ, ಹಿರಿಯ ಮಾರ್ಗದರ್ಶಕ ವಿಷ್ಣುದಾಸ ಪೈ, ಸಹ ಕಾರ್ಯದರ್ಶಿ ಗೀತಾ ಶಿರೂರು ಮಾತನಾಡಿದರು. ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಶಿರಾಲಿ ಸ್ವಾಗತಿಸಿದರು. ನೇತ್ರಾವತಿ ಪ್ರಾರ್ಥಿಸಿದರು. ಕಾವ್ಯಾ ಗೊಂಡ ವಂದಿಸಿದರು. ಸಂಕಲ್ಪ ನಿರೂಪಿಸಿದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವನಾಥ ಮಹಾಲೆ, ರಘುರಾಮ ಮಡಿವಾಳ, ಉಪನ್ಯಾಸಕ ಜಗದೀಶ ಹರಿಕಾಂತ ಮತ್ತು ದಾಮೋದರ ಗೊಂಡ ನಾಟಕವನ್ನು, ಈಶ್ವರ ಹಕ್ರೆ ಭಜನೆಯನ್ನು, ಯೋಗರಾಜ ಮತ್ತು ತೇಜಸ್ವಿನಿ ನೃತ್ಯವನ್ನು ತರಬೇತಿ ನೀಡಲಿದ್ದು, ಉಪನ್ಯಾಸಕಿ ನಿಶ್ಚಿತಾ ಮತ್ತು ಉಪನ್ಯಾಸಕ ಗಣೇಶ ಗೊಂಡ ಶಿಬಿರದ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ. ಶಿಬಿರ ಏ. 20ರ ವರೆಗೂ ನಡೆಯಲಿದೆ.