ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ. ಸಮಾಜ ಮತ್ತು ಸರ್ಕಾರದ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವಂತಹ ಸುದ್ದಿಗಳನ್ನು ಪ್ರಕಟಿಸುವ ಜೊತೆಗೆ ಮುಂದಿನ ಸತ್ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಕನ್ನಡಪ್ರಭ, ಸುವರ್ಣನ್ಯೂಸ್ ವತಿಯಿಂದ ಪರಿಸರ, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವ ಕೆಲಸ ನಡೆಯುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕನ್ನಡಪ್ರಭ- ಸುವರ್ಣ ನ್ಯೂಸ್ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ಅರಣ್ಯ ಮತ್ತು ವನ್ಯಜೀವಿ ವಿಷಯಕ್ಕೆ ಸಂಬಂಧಿಸಿದಂತೆ ವೈವಿದ್ಯಮಯ ಹಾಗೂ ವರ್ಣರಂಜಿತ ಚಿತ್ರಗಳನ್ನು ಬಿಡಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿದರು.

ಸ್ಪರ್ಧೆಯಲ್ಲಿ ವಿಜೇತರಾದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಥಮ ಬಹಮಾನ 2 ಸಾವಿರ ರು. ನಗದು, ದ್ವಿತೀಯ ಬಹುಮಾನ 1 ಸಾವಿರ ರು. ನಗದು, ತೃತೀಯ ಬಹುಮಾನ 500 ರು. ನಗದು ಬಹುಮಾನದೊಂದಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ನೋಟ್ ಬುಕ್-ಪೆನ್ ನೀಡಲಾಯಿತು.

ಜೊತೆಗೆ ಮೂರು ವಿಭಾಗದಲ್ಲಿ 6 ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ತಲಾ 200 ರು. ನಗದು, ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ನೋಟ್ ಬುಕ್- ಪೆನ್ ನೀಡಲಾಯಿತು. ಸುಮಾರು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖುಷಿಯಿಂದಲೇ ಚಿತ್ರ ಬಿಡಿಸಲು ಮುಂದಾದರು.

ಚಿತ್ರ ಬಿಡಿಸಲು 2 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಸ್ಪರ್ಧೆ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಪಾರದರ್ಶಕ ಮೌಲ್ಯಮಾಪನ ನಡೆಸಿ ತೀರ್ಪು ಪ್ರಕಟಿಸಿದರು.

ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಒಂದು ರಾಷ್ಟ್ರ ಆರೋಗ್ಯಪೂರ್ಣವಾಗಿರಬೇಕೆಂದರೆ ಪರಿಸರ, ಅರಣ್ಯ ಮತ್ತು ವನ್ಯಜೀವಿಗಳು ಅತ್ಯವಶ್ಯಕ. ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಒಂದಷ್ಟು ಮಾಹಿತಿ ಇರಬೇಕೆಂಬ ಉದ್ದೇಶದಿಂದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವ ಕನ್ನಡಪ್ರಭ, ಸುವರ್ಣನ್ಯೂಸ್‌ನ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ. ಸಮಾಜ ಮತ್ತು ಸರ್ಕಾರದ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವಂತಹ ಸುದ್ದಿಗಳನ್ನು ಪ್ರಕಟಿಸುವ ಜೊತೆಗೆ ಮುಂದಿನ ಸತ್ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಕನ್ನಡಪ್ರಭ, ಸುವರ್ಣನ್ಯೂಸ್ ವತಿಯಿಂದ ಪರಿಸರ, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವ ಕೆಲಸ ನಡೆಯುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಚಿತ್ರ ಕಲಾವಿದರಾಗಿ ಹೊರಹೊಮ್ಮಲು ಇಂತಹ ಸ್ಪರ್ಧೆಗಳು ಸಹಕಾರಿ. ಚಿತ್ರಕಲೆ ಮೂಲಕ ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಮಾಡುವಂತಹ ಜಾಗೃತಿ ಮೂಡಿಸಲು ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

8ನೇ ತರಗತಿ ವಿಭಾಗ: ದೃಪದ್‌ಗೌಡ ಕಾಂತಾಪುರ ಸರ್ಕಾರಿ ಪ್ರೌಢಶಾಲೆ ಪ್ರಥಮ, ಪಲ್ಲವಿ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಚಿಣ್ಯ ದ್ವಿತೀಯ, ಹರ್ಷ ಬಿಆರ್‌ಎಚ್‌ಎಸ್ ರಾಮೇನಹಳ್ಳಿ ತೃತೀಯ, ಕಾಂಚನ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೋಗಾದಿ ಮತ್ತು ಹನ್ಷಿಕಾ ಎಲ್ಲೆನ್ ಶಾಲೆ ಸಮಾಧಾನಕರ ಸ್ಥಾನ.

9ನೇ ತರಗತಿ ವಿಭಾಗ:

ಜಿ.ಎಸ್.ಸಿಂಚನ ವಿಸ್ಡಂ ಪಬ್ಲಿಕ್‌ಶಾಲೆ ಪ್ರಥಮ, ಗಾನವಿಗೌಡ ಬಿಜಿಎಸ್ ಪಬ್ಲಿಕ್ ಮಾಡೆಲ್ ಸ್ಕೂಲ್ ದ್ವಿತೀಯ, ಬಿ.ಎನ್.ತನುಜ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೋಗಾದಿ ತೃತೀಯ, ಆಸಿಫಾ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಾಗಮಂಗಲ ಮತ್ತು ಮಹಾಲಕ್ಷ್ಮೀ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮೈಲಾರಪಟ್ಟಣ ಸಮಾಧಾನಕರ ಸ್ಥಾನ.

10ನೇ ತರಗತಿ ವಿಭಾಗ:

ವಂದನಾಮೂರ್ತಿ ಬಿಜಿಎಸ್ ಪಬ್ಲಿಕ್ ಮಾಡೆಲ್ ಸ್ಕೂಲ್ ಪ್ರಥಮ, ಎಸ್.ಎನ್.ಗಗನ್ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೋಗಾದಿ ದ್ವಿತೀಯ, ವೈ.ಎ.ತರುಣ್‌ಗೌಡ ಸರ್ಕಾರಿ ಪ್ರೌಢಶಾಲೆ ಹರದನಹಳ್ಳಿ ತೃತೀಯ, ಧನುಶ್ರೀ ಕುವೆಂಪು ಪ್ರೌಢಶಾಲೆ ನಾಗಮಂಗಲ ಮತ್ತು ಮೋಹನ ಎಸ್‌ವಿಎಚ್‌ಆರ್‌ಎಸ್ ಬಿಎಂಹಳ್ಳಿ ಸಮಾಧಾನಕರ ಸ್ಥಾನ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ, ನೋಟ್‌ಬುಕ್ ಮತ್ತು ಪೆನ್ ವಿತರಿಸಲಾಯಿತು. ಸಿಆರ್‌ಪಿಗಳಾದ ಎನ್.ಎಸ್.ಸುರೇಶ್, ರವಿಶಂಕರ್, ಬಿ.ಎಸ್.ನಂದೀಶ್, ಬಿಆರ್‌ಪಿ ಜಿ.ಪ್ರಶಾಂತ್, ಬಿಐಇಆರ್‌ಟಿ ಮಂಜೇಗೌಡ, ಸುರೇಶ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.

ಟಿಎಪಿಸಿಎಂಎಸ್ ಕಾರ್ಯದರ್ಶಿ ಎಂ.ಕೆ.ಮೋಹನ್‌ರಾಜ್, ವಲಯ ಅರಣ್ಯಾಧಿಕಾರಿ ಸಂಪತ್‌ಪಟೇಲ್, ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವಿನಯ್‌ಕುಮಾರ್, ನಿರ್ದೇಶಕ ಸುರೇಶ್, ಶಿಕ್ಷಕರಾದ ಕೆಂಪೇಗೌಡ, ಪುಟ್ಟರಾಜು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಇದ್ದರು.

------------

‘ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿದ್ದು ಖುಷಿಯಾಗಿದೆ. ಇಂತಹ ಸ್ಪರ್ಧೆಗಳು ನಿರಂತರವಾಗಿ ನಡೆದರೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣವಾಗುತ್ತದೆ.’

- ಜಿ.ಎಸ್.ಸಿಂಚನ, 9ನೇ ತರಗತಿ ಪ್ರಥಮ ಸ್ಥಾನ,

---

‘ಅನೇಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕಲ್ಪನೆಯನ್ನು ಚಿತ್ರ ಬಿಡಿಸುವ ಮೂಲಕ ಹೊರ ಹಾಕಿದ್ದಾರೆ. ಭವಿಷ್ಯದಲ್ಲಿ ಉತ್ತಮ ಚಿತ್ರ ಕಲಾವಿದರಾಗಿ ಹೊರಹೊಮ್ಮಲು ಇಂತಹ ಸ್ಪರ್ಧೆ ಸಹಕಾರಿ. ಇದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಗೆ ಅಭಿನಂದನೆ.’

-ಎಂ.ಕೆ.ಮೋಹನ್‌ರಾಜ್, ಟಿಎಪಿಸಿಎಂಎಸ್ ಕಾರ್ಯದರ್ಶಿ, ನಾಗಮಂಗಲ.

---