ಮಕ್ಕಳು ಶಿಕ್ಷಣ ಪಡೆದು ಸಮಾಜದಲ್ಲಿ ಸತ್ಪ್ರಜೆಗಳಾಗಿ: ಮಾದಾರ ಶ್ರೀ

| Published : Feb 16 2024, 01:50 AM IST

ಸಾರಾಂಶ

೨೦ ವರ್ಷಗಳ ಹಿಂದೆ ಜನರಲ್ಲಿ ಅಂಧಕಾರ, ಅಜ್ಞಾನ, ಮತ್ತು ಬಡತನವೂ ಇತ್ತು. ಮಹಿಳೆಯರು ಹೊರ ಬರುತ್ತಲೇ ಇರಲಿಲ್ಲ, ಜಾತ್ರೆ ಬಂದರೆ ಜೀತ ಇರಬೇಕೆಂಬ ಬಲವಾದ ಪದ್ಧತಿ ಇತ್ತು. ಸಾಕಷ್ಟು ಶ್ರದ್ಧೆಯೂ ಮನೆ ಮಾಡಿತ್ತು. ಈಗ ಕಾಲ ಬದಲಾಗಿದೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮನೆಗಳಲ್ಲಿ ವ್ಯಕ್ತಿಗತ ಸ್ವಾಭಿಮಾನ ಬರಲು ಮನೆಗೊಬ್ಬ ಅಧಿಕಾರಿ ಇರಬೇಕೆಂದು ಮಾದಾರ ಚನ್ನಯ್ಯ ಗುರುಪೀಠದ ಬಸವ ಮೂರ್ತಿ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಎಕೆ ಕಾಲನಿಯಲ್ಲಿ ಗುರುವಾರ ದುರ್ಗಾಂಬಿಕಾ ದೇವಾಲಯದ ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭದಲ್ಲಿ ಸಂದೇಶ ನೀಡಿ ದೇವರು ಇಲ್ಲ, ಇದ್ದಾನೆ ಎಂಬ ಚರ್ಚೆ ನಡೆಯುತ್ತಲೇ ಸಾಗಿದೆ, ೨೦ ವರ್ಷಗಳ ಹಿಂದೆ ಜನರಲ್ಲಿ ಅಂಧಕಾರ, ಅಜ್ಞಾನ, ಮತ್ತು ಬಡತನವೂ ಇತ್ತು. ಮಹಿಳೆಯರು ಹೊರ ಬರುತ್ತಲೇ ಇರಲಿಲ್ಲ, ಜಾತ್ರೆ ಬಂದರೆ ಜೀತ ಇರಬೇಕೆಂಬ ಬಲವಾದ ಪದ್ಧತಿ ಇತ್ತು. ಸಾಕಷ್ಟು ಶ್ರದ್ಧೆಯೂ ಮನೆ ಮಾಡಿತ್ತು. ಈಗ ಕಾಲ ಬದಲಾಗಿದೆ ಎಂದರು.

ಸಮಾಜದಲ್ಲಿ ಸತ್ಪ್ರಜೆಗಳಾಗಲು ಮಕ್ಕಳು ಶಿಕ್ಷಣ ಪಡೆದು ನಂತರ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ದೇವಾಲಯಗಳಲ್ಲಿ ಪಾವಿತ್ರ್ಯತೆ ಕಾಪಾಡಿ, ದೇವರ ನಂಬಿಕೆಗೆ ಅಡ್ಡಿ ಬೇಡ ಭಕ್ತಿಯಿಂದ ಪೂಜೆ ಸಲ್ಲಿಸಿ ಎಂದು ಸಮಾಜದ ಜನರಿಗೆ ಸಲಹೆ ನೀಡಿದರು.

ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಬೆಳಿಗ್ಗೆ ದೇವಾಲಯದ ಕಳಸಾರೋಹಣದ ಪೂಜಾ ವಿಧಿ ವಿಧಾನ ನೆರವೇರಿಸಿದರು. ಮುಖ್ಯಾಧಿಕಾರಿ ಸುರೇಶ್, ಉಪತಹಸೀಲ್ದಾರ್ ರವಿ, ಮುಖಂಡರಾದ ಡಾ.ಚಂದ್ರಶೇಖರ್, ಚಂದ್ರಶೇಖರ್ ಪೂಜಾರ್, ಜಿ.ಮಂಜುನಾಥ್, ವಿನಯ್‌ಕುಮಾರ್, ನರಸಿಂಹಪ್ಪ, ಹನುಮಂತಪ್ಪ, ಎಕೆ.ಲೋಕೇಶ್, ನಾಗರಾಜ್, ಭೋವಿಕುಮಾರ್, ಪುರಸಭಾ ಸದಸ್ಯರಾದ ಮಂಜಣ್ಣ, ಸಿದ್ದೇಶ್, ನಯಾಜ್, ದಾದಾಪೀರ್, ಸುಧಾರಾಜು, ಖಲೀಲ್, ಶಬ್ಬೀರ್, ಷಾ ಅಬ್ರಾರ್, ಹನುಮಂತಪ್ಪ ಮತ್ತಿತರರಿದ್ದರು.