ಯಾವುದೇ ವ್ಯಕ್ತಿಯು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಮುಖ್ಯ. ಹೀಗಾಗಿ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡುವ ಕಾರ್ಯ ಹೆಚ್ಚೆಚ್ಚು ನಡೆಯಬೇಕಿದೆ
ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರದಲ್ಲಿ
350 ಎಸ್ಸೆಸ್ಸೆಲ್ಸಿ, 250ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರಕನ್ನಡಪ್ರಭ ವಾರ್ತೆ ಧಾರವಾಡ
ಯಾವುದೇ ವ್ಯಕ್ತಿಯು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಮುಖ್ಯ. ಹೀಗಾಗಿ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡುವ ಕಾರ್ಯ ಹೆಚ್ಚೆಚ್ಚು ನಡೆಯಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ಸದಸ್ಯರಾದ ವಿ.ಎಸ್. ಪಾಟೀಲ ಹೇಳಿದರು.ಇಲ್ಲಿಯ ಲಿಂಗಾಯತ ಭವನದಲ್ಲಿ ಮಹಾಸಭಾ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದ ಅವರು, ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾಜದ ವಿದ್ಯಾರ್ಥಿಗಳು ಉನ್ನತ ಹಂತದ ಉದ್ಯೋಗಾವಕಾಶ ಪಡೆಯಲು ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕು. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸಮಾಜದ ಸಂಘ-ಸಂಸ್ಥೆಗಳು ಅವರಿಗೆ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಮಹಾಸಭಾ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಬೇರೆ ಬೇರೆ ಸಮಾಜಗಳನ್ನು ಅವಲೋಕಿಸಿದರೆ ನಮ್ಮ ಸಮಾಜ ಹೆಚ್ಚಿನ ಸಂಘಟನೆ ಆಗಬೇಕಿದೆ. ಸಂಘಟನೆ ಮೂಲಕ ಸಮಾಜದ ಕೆಳಸ್ತರದ ಜನರನ್ನು ಸಹ ಉನ್ನತ ಮಟ್ಟಕ್ಕೆ ಏರಿಸಬೇಕಿದೆ. ಈ ನಿಟ್ಟಿನಲ್ಲಿ ಮಹಾಸಭಾ ಕಾರ್ಯೋನ್ಮುಖವಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ, ಬರೀ ಪ್ರತಿಭಾ ಪುರಸ್ಕಾರ ಮಾತ್ರವಲ್ಲದೇ ಬರುವ ದಿನಗಳಲ್ಲಿ ಮಹಾಸಭಾದಿಂದ ಸಾಕಷ್ಟು ಶೈಕ್ಷಣಿಕ, ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
350 ಎಸ್ಸೆಸ್ಸೆಲ್ಸಿ ಹಾಗೂ 250 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವೀರೇಶ್ ಕಲಗೇರಿ, ಮಂಜುನಾಥ ಮುಗ್ಗನ್ನವರ ನಿರೂಪಿಸಿದರು. ರಾಜಶೇಖರ್ ಉಪ್ಪಿನ್ ಸ್ವಾಗತಿಸಿದರು. ಜಯಶ್ರೀ ಪಾಟೀಲ್ ವಚನ ಪ್ರಾರ್ಥನೆ ಮಾಡಿದರು. ಪ್ರಕಾಶ್ ಬಾವಿಕಟ್ಟಿ ವಂದಿಸಿದರು. ಗರಗ ಕಲ್ಮಠದ ಆತ್ಮಾರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಸಮಾಜದ ಮುಖಂಡರಾದ ಸವಿತಾ ಅಮರಶೆಟ್ಟಿ, ಡಾ. ಸುವರ್ಣ ಬಿರಾದಾರ, ವಿಜಯಲಕ್ಷ್ಮಿ ಕಲ್ಯಾಣ ಶೆಟ್ಟರ್, ಬಸಂತಿ ಹಪ್ಪಳ, ಡಾ. ಪಾರ್ವತಿ ಹಾಲಬಾವಿ, ನಾಗರಾಜ ಪಟ್ಟಣಶೆಟ್ಟಿ, ನಾಗರಾಜ ಗೌರಿ, ಸಿ.ಎಂ. ಮನಗುಂಡಿ, ಸಂತೋಷ್ ಪಟ್ಟಣಶೆಟ್ಟಿ, ನೀಲಕಂಠಪ್ಪ ಹಂಪಣ್ಣವರ, ಆನಂದ್ ಗಡೇಕರ, ಶಶಿ ಶೇಖರ ಡಂಗನವರ, ಶಂಕರ್ ಕುಂಬಿ, ಬಸವರಾಜ ಗೋಲಪ್ಪನವರ, ಮೃತ್ಯುಂಜಯ ಬನ್ನೂರ, ಷಣ್ಮುಖಪ್ಪ ಬೆಟಗೇರಿ, ಬಸವಂತಪ್ಪ ತೋಟದ, ಮವಾಳಪ್ಪ ಸಿರಿಯಣ್ಣವರ ಹಾಗೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್ ಇದ್ದರು.