ಮಕ್ಕಳನ್ನು ಮಾಹಿತಿ ತಂತ್ರಜ್ಞಾನ, ಡಿಜಿಟಲ್ ವ್ಯವಸ್ಥೆಗೆ ಅಣಿಗೊಳಿಸಬೇಕಿದೆ: ರೇಖಾ ಸಲಹೆ

| Published : Aug 20 2025, 01:30 AM IST

ಸಾರಾಂಶ

ನರಸಿಂಹರಾಜಪುರ: ಇಂದಿನ ಮಕ್ಕಳನ್ನು ಮಾಹಿತಿ ತಂತ್ರಜ್ಞಾನ, ಡಿಜಿಟಲ್ ವ್ಯವಸ್ಥೆಗೆ ಅಣಿಗೊಳಿಸಬೇಕಾಗಿದೆ ಎಂದು ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಸಲಹೆ ನೀಡಿದರು.

- ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಟ್ ವರ್ಕ್, ಸ್ಮಾರ್ಟ ಕ್ಲಾಸ್,ಇಂಗ್ಲೀಷ್ ಮೀಡಿಯಂ ಉದ್ಘಾಟನೆ

ನರಸಿಂಹರಾಜಪುರ: ಇಂದಿನ ಮಕ್ಕಳನ್ನು ಮಾಹಿತಿ ತಂತ್ರಜ್ಞಾನ, ಡಿಜಿಟಲ್ ವ್ಯವಸ್ಥೆಗೆ ಅಣಿಗೊಳಿಸಬೇಕಾಗಿದೆ ಎಂದು ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಸಲಹೆ ನೀಡಿದರು.

ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದವರು ಶಾಲೆಗೆ ನೀಡಿದ 96 ಸಾವಿರ ರು. ದೇಣಿಗೆಯ ಹಣದಲ್ಲಿ ಸ್ಮಾರ್ಟ್ ಕ್ಲಾಸ್, ಪ್ರಿಂಟರ್, ಕಂಪ್ಯೂಟರ್,ಶಾಲೆ ನೆಟವರ್ಕ್ ಗೆ ಬೂಸ್ಟರ್,1 ನೇ ತರಗತಿಯ ಇಂಗ್ಲೀಷ್ ಮೀಡಿಯಂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹಳ್ಳಿಬೈಲು ಸರ್ಕಾರಿ ಶಾಲೆ ಪ್ರಾರಂಭವಾಗಿ 61 ವರ್ಷವಾಗಿದೆ. ಶಾಲೆಗೆ ಯಾವುದೇ ಮೊಬೈಲ್ ನೆಟವರ್ಕ್ ಸಿಕ್ಕುತ್ತಿರಲಿಲ್ಲ.ಈ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಕ್ಕಿದೆ ಎಂದರು.

ಅತಿಥಿಯಾಗಿದ್ದ ಗ್ರಾಪಂ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಈ ಶಾಲೆಗೆ ಹಳೇ ವಿದ್ಯಾರ್ಥಿ ಸಂಘದವರು 96 ಸಾವಿರ ರು. ದೇಣಿಗೆ ನೀಡಿರುವುದು ಪ್ರಶಂಶನೀಯ. ಸರ್ಕಾರ ಎಲ್ಲಾ ಕೆಲಸ ಮಾಡಲು ಸಾದ್ಯವಿಲ್ಲ. ಈ ರೀತಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನಕ್ಕೆ ಹೋದ ಮೇಲೆ ಕಲಿತ ಶಾಲೆ ಮರೆಯದೆ ಸಹಾಯ ಮಾಡಬೇಕು ಎಂದರು.

ಅತಿಥಿಯಾಗಿದ್ದ ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಈ ಶಾಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಕರಿದ್ದಾರೆ. ಹಳೇ ವಿದ್ಯಾರ್ಥಿ ಸಂಘದಿಂದ ಶಾಲೆಗೆ ನೆಟ್ ವರ್ಕ್ ಸಿಕ್ಕಿದೆ ಎಂದರು.

ಸಭೆಯ ಅಧ್ಯಕ್ಷತೆಯಲ್ಲಿ ಶಾಲೆ ಎಸ್.ಡಿಎಂಸಿ ಉಪಾಧ್ಯಕ್ಷೆ ರೂಪ ವಹಿಸಿದ್ದರು.ಸಭೆಯಲ್ಲಿ ಗ್ರಾಪಂ ಸದಸ್ಯೆ ದಾಮಿನಿ, ಇಸಿಓ ರಂಗಪ್ಪ,ಸಿಆರ್.ಪಿ ಓಂಕಾರಪ್ಪ, ಶಾಲಾ ಮುಖ್ಯೋಪಾಧ್ಯಾಯ ಬಸವರಾಜ್, ಗ್ರಾಮದ ಮುಖಂಡರಾದ ಸಂಜೀವ್‌ ಪೂಜಾರಿ , ರವೀಂದ್ರ ಗೌಡರು, ಸಹ ಶಿಕ್ಷಕ ರಂಗನಾಥ ಇದ್ದರು.