ರಾಷ್ಟ್ರಮಟ್ಟದಲ್ಲಿ ಮಿಂಚಿದ ಓಂಸಾಯಿ ಲರ್ನಿಂಗ್ ಸಂಸ್ಥೆ ಮಕ್ಕಳು

| Published : Feb 25 2024, 01:53 AM IST

ರಾಷ್ಟ್ರಮಟ್ಟದಲ್ಲಿ ಮಿಂಚಿದ ಓಂಸಾಯಿ ಲರ್ನಿಂಗ್ ಸಂಸ್ಥೆ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಇತ್ತೀಚಿಗೆ ಸೋಲಾಪೂರದ ಶ್ರದ್ಧಾ ಅಬಾಕಸ್ ಮತ್ತು ವೇದಿಕ್ ಮ್ಯಾಥ್ ಸಂಸ್ಥೆಯಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಗಣಿತ ಸ್ಪರ್ಧೆಯಲ್ಲಿ ವಿಜಯಪುರದ ಓಂ ಸಾಯಿ ಲರ್ನಿಂಗ್ಸ್ ಸಂಸ್ಥೆಯ ಶಾಲಾ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ. 8 ವಿಭಾಗಗಳಲ್ಲಿ 87 ವಿದ್ಯಾರ್ಥಿಗಳು ಭಾಗವಹಿಸಿ 6 ವಿದ್ಯಾರ್ಥಿಗಳು ಚಾಂಪಿಯನ್ ಆಫ್ ಚಾಂಪಿಯನ್ 16 ಪ್ರಥಮ ಸ್ಥಾನ, 21 ದ್ವಿತೀಯ ಸ್ಥಾನ, 30 ತೃತೀಯ ಸ್ಥಾನ, 11 ಚತುರ್ಥ ಸ್ಥಾನ, 2 ಪಂಚಮ ಸ್ಥಾನ ಸೇರಿದಂತೆ ಒಟ್ಟು 86 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ವಿಜಯಪುರ: ಇತ್ತೀಚಿಗೆ ಸೋಲಾಪೂರದ ಶ್ರದ್ಧಾ ಅಬಾಕಸ್ ಮತ್ತು ವೇದಿಕ್ ಮ್ಯಾಥ್ ಸಂಸ್ಥೆಯಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಗಣಿತ ಸ್ಪರ್ಧೆಯಲ್ಲಿ ವಿಜಯಪುರದ ಓಂ ಸಾಯಿ ಲರ್ನಿಂಗ್ಸ್ ಸಂಸ್ಥೆಯ ಶಾಲಾ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ. 8 ವಿಭಾಗಗಳಲ್ಲಿ 87 ವಿದ್ಯಾರ್ಥಿಗಳು ಭಾಗವಹಿಸಿ 6 ವಿದ್ಯಾರ್ಥಿಗಳು ಚಾಂಪಿಯನ್ ಆಫ್ ಚಾಂಪಿಯನ್ 16 ಪ್ರಥಮ ಸ್ಥಾನ, 21 ದ್ವಿತೀಯ ಸ್ಥಾನ, 30 ತೃತೀಯ ಸ್ಥಾನ, 11 ಚತುರ್ಥ ಸ್ಥಾನ, 2 ಪಂಚಮ ಸ್ಥಾನ ಸೇರಿದಂತೆ ಒಟ್ಟು 86 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಗೆ ಸುನೀತಾ ಜಾಗೀರದಾರ, ಬಾವೂರ, ಅಂಬುಜಾ, ಪವಿತ್ರ ನಂದಿಕೋಲ, ಸ್ವಾತಿ, ಬಿರಾದಾರ, ಮೀನಾಕ್ಷಿ ಮಠ, ಪೂಜಾರಿ, ಕುಲಕರ್ಣಿ ಅಭಿನಂದಿಸಿದ್ದಾರೆ.