ಸಾರಾಂಶ
ಕುರುಬರು ಯಾವುದೇ ಕಾರಣಕ್ಕೂ ಸೋಮವಾರ ಮಧ್ಯಪಾನ ಮಾಡುವುದು, ಮಾಂಸಾಹಾರ ಸೇವಿಸುವುದು ಮಾಡಬೇಡಿ. ಬ್ರಾಹ್ಮಣ, ಜೈನ, ಮುಸ್ಲಿಂ ಸಮುದಾಯ ಎಂದೂ ಕೂಡ ಮತಧರ್ಮಗಳನ್ನು ಮರೆಯುವುದಿಲ್ಲ. ಯಾರ ಮನೆಯಲ್ಲಿ ಸಂಪ್ರದಾಯ ಪಾಲಿಸುವರೋ ಅಲ್ಲಿ ಗಲಾಟೆ ಇರಲ್ಲ. ಹೀಗಾಗಿ ನಮ್ಮ ಮಕ್ಕಳಿಗೆ ಸಂಪ್ರದಾಯ ಸಂಸ್ಕಾರ ಕಲಿಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಾಲುಮತ ಸಮಾಜದ ಮಕ್ಕಳಲ್ಲಿ ಎಲ್ಲವನ್ನು ಮೀರಿ ಉತ್ತಮವಾಗಿ ವಿದ್ಯೆಕಲಿಯುವ ಸಾಮರ್ಥ್ಯವಿದೆ. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸಾಧನೆ ಮಾಡಲು ಸಾಧ್ಯ ಎಂದು ಕನಕ ಗುರುಪೀಠ ಕಲಬುರುಗಿಯ ತಿಂಥಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಶ್ರೀಬೀರೇಶ್ವರ, ಆನೇದೇವರು, ಚೌಡೇಶ್ವರಿ, ಸಿದ್ದೇದೇವರುಗಳ ಸೇವಾ ಮಂಡಳಿ ಟ್ರಸ್ಟ್ವತಿಯಿಂದ ಮೂರುದಿನಗಳ ಕಾಲ ನಡೆದ ದೊಡ್ಡ ಜಾತ್ರೆಯ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಲುಮತ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.ಮಕ್ಕಳಿಗೆ ಸಂಸ್ಕಾರ ಕಲಿಸಿ
ಕುರುಬರು ಯಾವುದೇ ಕಾರಣಕ್ಕೂ ಸೋಮವಾರ ಮಧ್ಯಪಾನ ಮಾಡುವುದು, ಮಾಂಸಾಹಾರ ಸೇವಿಸುವುದು ಮಾಡಬೇಡಿ. ಬ್ರಾಹ್ಮಣ, ಜೈನ, ಮುಸ್ಲಿಂ ಸಮುದಾಯ ಎಂದೂ ಕೂಡ ಮತಧರ್ಮಗಳನ್ನು ಮರೆಯುವುದಿಲ್ಲ. ಯಾರ ಮನೆಯಲ್ಲಿ ಸಂಪ್ರದಾಯ ಪಾಲಿಸುವರೋ ಅಲ್ಲಿ ಗಲಾಟೆ ಇರಲ್ಲ. ಹೀಗಾಗಿ ನಮ್ಮ ಮಕ್ಕಳಿಗೆ ಸಂಪ್ರದಾಯ ಸಂಸ್ಕಾರ ಕಲಿಸಬೇಕು. ಕಂಬಳಿ ಮೇಲೆ ಕುಳಿತು ಪ್ರಾರ್ಥನೆ ಮಾಡುವುದನ್ನು ಕಲಿಸಿ ಎಂದು ಕರೆ ನೀಡಿದರು.ಜಾತಿ ನೋಡಿ ದೇವರ ದರ್ಶನ ಮಾಡೋ ಕಡೆ ನೂಕುನುಗ್ಗಲಿನಲ್ಲಿ ಹೋಗುತ್ತೀರಿ. ಹರಕೆ ಕಟ್ಟುತ್ತೀರಿ. ಅಲ್ಲಿ ದೇವರು ಇರೋದಿಕ್ಕೆ ಸಾಧ್ಯನಾ, ಇಲ್ಲವೋ ಗೊತ್ತಿಲ್ಲ. ದೇವರು ಎಲ್ಲಾ ಕಡೆ ಇರುತ್ತಾನೆ. ಆದರೆ ದರ್ಶನ ಸಿಗಬೇಕಾದರೆ, ದೇವರ ನಿಜವಾದ ಪ್ರೇಮ ಸಿಗಬೇಕೆಂದರೆ ಎಲ್ಲಿ ಜಾತಿ ನೋಡದೆ ದರ್ಶನ ಸಿಗುತ್ತದೋ ಅಂತಹ ಮೈಲಾರಲಿಂಗನ, ಬೀರಪ್ಪನನ್ನು ಸಣ್ಣವನನ್ನಾಗಿ ಮಾಡಿ ನಮ್ಮಷ್ಟಕ್ಕೇ ನಾವೇ ಸಣ್ಣವರಾಗಿದ್ದೇವೆ ಎಂದರು.ಸಂಬಂಧ ಬೆಸೆಯುವ ಹಬ್ಬ
ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, 25 ವರ್ಷಗಳಿಗೆ ಒಮ್ಮೆ ಈ ಜಾತ್ರೆ ನಡೆಯುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ 7 ವರ್ಷಗಳಿಗೆ ಒಮ್ಮೆ ನಡೆಸಿಕೊಂಡು ಬರಲಾಗಿದೆ. ಹಬ್ಬ ಹರಿದಿನ ಜಾತ್ರೆಗಳು ಬೇಕು. ಏಕೆಂದರೆ ಇವಿದ್ದಲ್ಲಿ ಒಂದು ಆಚಾರ, ವಿಚಾರ, ಸಂಪ್ರದಾಯ ಇರಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಭ್ರಮಗಳು ಸಂಬಂಧಗಳನ್ನು ಬೆಸೆಯುತ್ತವೆ ಎಂದರು. ಈ ಸಂದರ್ಭದಲ್ಲಿ ಹನೂರು ಶಾಸಕರಾದ ಮಂಜುನಾಥ್, ಬೀರೇಶ್ವರ,ಆನೆ ದೇವರು, ಚೌಡೇಶ್ವರಿ, ಸಿದ್ದೇದೇವರ ಸೇವಾ ಮಂಡಳಿ ಟ್ರಸ್ಟ್ ಗೌರವಾಧ್ಯಕ್ಷ ಎಸ್ ಜಗದೀಶ್ ಕುಮಾರ್, ಅಧ್ಯಕ್ಷ ಎಂ.ಪಿ.ಕೋದಂಡರಾಮಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ ರವೀಂದ್ರನಾಥ್, ಖಜಾಂಚಿ ಎಂ.ಮಹೇಂದ್ರ ಆಂತರಿಕ ಲೆಕ್ಕಪರಿಶೋಧಕ ಎಸ್.ಕೆ.ನಟರಾಜ್, ಹಿರಿಯ ಉಪಾಧ್ಯಕ್ಷ ಎಂ.ಎನ್.ನಂಜಪ್ಪ, ಎನ್.ಮುನಿವೀರಪ್ಪ, ಸಿ.ಪಿ.ಕೃಷ್ಣಪ್ಪ, ಲಕ್ಷ್ಮಣ್, ಅಶ್ವಥ್‌ನಾರಾಯಣ್, ಮತ್ತಿತರರು ಇದ್ದರು.