ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ

| Published : Nov 21 2025, 02:45 AM IST

ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಬಾಲರೋಗ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆ ಆಸ್ಪತ್ರೆಯ ಪತಂಜಲಿ ಯೋಗ ಭವನದಲ್ಲಿ ನೆರೆವೇರಿತು.

ಉಡುಪಿ: ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಬಾಲರೋಗ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆ ಆಸ್ಪತ್ರೆಯ ಪತಂಜಲಿ ಯೋಗ ಭವನದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಹಾಗೂ ಎಸ್.ಡಿ. ಎಮ್ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಮಾರ್ಗದರ್ಶನದಲ್ಲಿ ನೆರೆವೇರಿತು.ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಡೀನ್ ಡಾ. ರಾಜಲಕ್ಷ್ಮಿ ಎಂ.ಜಿ. ಅಧ್ಯಕ್ಷತೆ ವಹಿಸಿದ್ದರು. ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕ ಡಾ. ಸುಮಾ ವಿ. ಮಲ್ಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ‘ಮಕ್ಕಳಲ್ಲಿ ಮನೆಮದ್ದಿನ ಪ್ರಯೋಗ’ ಎಂಬ ವಿಷಯದ ಕುರಿತು ಮಾತನಾಡಿದರು. ಬಾಲರೋಗ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ದಿನಾಚರಣೆ ಅಂಗವಾಗಿ ಆರೋಗ್ಯವಂತ ಶಿಶು ಸ್ಪರ್ಧೆಯಲ್ಲಿ ೬ ತಿಂಗಳಿನಿಂದ ೧ ವರ್ಷದೊಳಗಿನ ವಿಭಾಗದಲ್ಲಿ ದಿತ್ಯ ಶೆಣೈ ಪ್ರಥಮ, ಪ್ರವರ್ಧನ ದ್ವಿತೀಯ ಬಹುಮಾನವನ್ನು ಹಾಗೂ 1 - 2 ವರ್ಷ ವಿಭಾಗದಲ್ಲಿ ಗನೀಷ್ಕಾ ಪ್ರಥಮ, ನೈದೀಲೆ ಎಸ್. ರಾವ್ ದ್ವಿತೀಯ, ಪ್ರೇಕ್ಶಿತ್ ಹಾಗೂ ಅಹನಿ ತೃತೀಯ ಬಹುಮಾನವನ್ನು ಮತ್ತು 2 -3 ವರ್ಷ ವಿಭಾಗದಲ್ಲಿ ತಷ್‌ವಿಕ್ ಪ್ರಥಮ, ಪ್ರಮಾಥಿ, ದ್ವಿತೀಯ ಸಾಧ್ವಿ ತೃತೀಯ ಬಹುಮಾನ ಪಡೆದರು.

‘ಸ್ವಚ್ಛ ಮತ್ತು ಹಸಿರು ಭವಿಷ್ಯ’ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯ 6 - 10 ವರ್ಷ ವಿಭಾಗದಲ್ಲಿ ಮೊಹಮ್ಮದ್ ರಹಾನ್ ಪ್ರಥಮ, ಭುವನ್ ದ್ವಿತೀಯ, ಸಾನ್ವಿ ತೃತೀಯ ಬಹುಮಾನವನ್ನು ಪಡೆದರು. ಸುಮಾರು ೬೦ ಮಕ್ಕಳು ಹಾಗೂ ಪಾಲಕರು ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಿ, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಆಟಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಮನಸ್ವಿತಾ ಸ್ವಾಗತಿಸಿ, ಕಿರುವೈದ್ಯರಾದ ಡಾ. ವಿಭಾ, ಡಾ. ರಮ್ಯ, ಡಾ. ಸಾಧನಾ ಪ್ರಾರ್ಥಿಸಿ, ಡಾ. ಮನಸ್ವಿತಾ ವಂದಿಸಿ, ನಿರೂಪಿಸಿದರು. ಸಹಪ್ರಾಧ್ಯಾಪಕ ಡಾ. ನಾಗರತ್ನ ಎಸ್.ಜೆ. ಕಾರ್ಯಕ್ರಮ ಸಂಯೋಜಿಸಿದರು. ಬಾಲರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಿತ್ರಲೇಖಾ, ಡಾ. ಕಾವ್ಯ, ಡಾ. ಅಂಜು ಕೆ.ಎಲ್, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರುವೈದ್ಯರು ಸಹಕರಿಸಿದರು.