ಮಕ್ಕಳ ಸಂತೆಯಲ್ಲಿ ನಾಟಿ ಕೋಳಿ, ಏಡಿ ಮಾರಾಟ ಕೂಡ ನಡೆಯಿತು. ಬಗೆ ಬಗೆಯ ಏಡಿಗಳನ್ನು ಮಾರಾಟಕ್ಕೆ ಮಕ್ಕಳು ತಂದು ಮಾರಾಟ ಮಾಡಿದರು. ಎಲ್ಲವೂ ಬೇಗ ಬೇಗ ಬಿಕರಿಯಾದವು. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಾರ್ವಜನಿಕರು ಖರೀದಿ ಮಾಡಿದ್ದು ವಿಶೇಷವಾಗಿತ್ತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀಆದಿಶಿಕ್ಷಣ ಟ್ರಸ್ಟ್, ಬಿಜಿಎಸ್ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖೆಯಿಂದ ಪಟ್ಟಣದ ಬಿಜಿಎಸ್ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಸಂತೆ ನಡೆಯಿತು.ಮಕ್ಕಳು ನಾವು ದಿನನಿತ್ಯ ಬಳಸುವ ವಿವಿಧ ಬಗೆಯ ತರಕಾರಿ, ಸೊಪ್ಪು, ಹಣ್ಣು ಹಾಗೂ ಬಜ್ಜಿ, ಪಾನಿಪುರಿ, ಎಳನೀರು, ಟೀ, ಮದ್ದೂರು ವಡೆ, ನಿಪ್ಪಟು, ಪೂಟ್ ಸಲಾಡ್, ತೆಂಗಿನಕಾಯಿ, ವಿವಿಧ ಬಗೆಯ ಸಿಹಿ ತಿಂಡಿಸುಗಳು ಬಲು ಜೋರಾಗಿಯೇ ನಡೆಯಿತು.
ಮಕ್ಕಳ ಸಂತೆಯಲ್ಲಿ ನಾಟಿ ಕೋಳಿ, ಏಡಿ ಮಾರಾಟ ಕೂಡ ನಡೆಯಿತು. ಬಗೆ ಬಗೆಯ ಏಡಿಗಳನ್ನು ಮಾರಾಟಕ್ಕೆ ಮಕ್ಕಳು ತಂದು ಮಾರಾಟ ಮಾಡಿದರು. ಎಲ್ಲವೂ ಬೇಗ ಬೇಗ ಬಿಕರಿಯಾದವು. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಾರ್ವಜನಿಕರು ಖರೀದಿ ಮಾಡಿದ್ದು ವಿಶೇಷವಾಗಿತ್ತು.ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳಿಗೆ ಕೇವಲ ಶಿಕ್ಷಣ ನೀಡಿ ಉತ್ತಮ ಕಲಿಕೆ ಮೂಲಕ ಅವರನ್ನು ಉತ್ತೀರ್ಣಗೊಳಿಸಿ ಕಳಿಸುವ ಜತೆಗೆ ಅವರಲ್ಲಿ ವಿಶೇಷ ಚಟುವಟಿಕೆಗಳನ್ನು ಕಲಿಸುವ ಉದ್ದೇಶ ನಮ್ಮದಾಗಿದೆ. ಆ ಮೂಲಕ ಮಕ್ಕಳನ್ನು ಕೌಶಲ್ಯಾಭಿವೃದ್ಧಿಗೊಳಿ ಸುವುದಾಗಿದ್ದು, ಮಕ್ಕಳ ಸಂತೆ ಮೂಲಕ ಅವರಿಗೆ ವ್ಯವಹಾರಿಕ ಜ್ಞಾನದ ಅರಿವು ಮೂಡಿಸಲಾಗುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಉದ್ಯಮಿ ಹಾಳೇಗೌಡ, ಕಾಂಗ್ರೆಸ್ ಮುಖಂಡ ಎಂ.ಆರ್.ದೇವರಾಜು, ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಪತ್ರಕರ್ತರಾದ ಬಿ.ಎಸ್.ಜಯರಾಂ, ಎನ್.ಕೃಷ್ಣೇಗೌಡ, ಚೆನ್ನ ಮಾದೇಗೌಡ ಸೇರಿದಂತೆ ಇತರರಿದ್ದರು.ಇಂದು ಸಂವಿಧಾನ ದಿನ ಆಚರಣೆ
ಮಂಡ್ಯ: ನಗರದ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ) ವನರಂಗದಲ್ಲಿ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ರಾಜ್ಯ ಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ (ರಿ.), ಮಂಗಲ ವತಿಯಿಂದ ಸೆ.26 ರಂದು ಸಂವಿಧಾನ ದಿನ ಆಚರಣೆಯನ್ನು ಆಯೋಜಿಸಲಾಗಿದೆ.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ ಆಶಯ ನುಡಿಯಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲ ಪ್ರೊ.ಗುರುರಾಜ್ ಪ್ರಭು ಕೆ. ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ ಎಂ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಬಿ.ಪಿ.ಗೀತಾ, ವಕೀಲರ ಸಂಘ ಅಧ್ಯಕ್ಷ ಟಿ.ಎಸ್. ಸತ್ಯಾನಂದ ಭಾಗವಹಿಸಲಿದ್ದಾರೆ.