ರಿಲಾಯಿನ್ಸ್ ಶಾಲೆಯಲ್ಲಿ ಮಕ್ಕಳ ಫುಡ್ ಫೆಸ್ಟಿವಲ್

| Published : Feb 25 2024, 01:48 AM IST

ಸಾರಾಂಶ

ತಾಳಿಕೋಟೆ ಪಟ್ಟಣದ ರಿಲಾಯಿನ್ಸ್ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಫುಡ್ ಫೆಸ್ಟಿವಲ್(ಆಹಾರ ಉತ್ಸವ) ಆಯೋಜಿಸಲಾಗಿತ್ತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ನಮಾಜಕಟ್ಟಿ ಉದ್ಘಾಟಿಸಿದರು. ಮಕ್ಕಳಲ್ಲಿ ಅಡಗಿರುವ ವ್ಯವಹಾರಿಕ ಜ್ಞಾನವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಳಿಕೋಟೆ ಪಟ್ಟಣದ ರಿಲಾಯಿನ್ಸ್ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಫುಡ್ ಫೆಸ್ಟಿವಲ್(ಆಹಾರ ಉತ್ಸವ) ಆಯೋಜಿಸಲಾಗಿತ್ತು. ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ದಾದಾಫೀರ ಚೌದ್ರಿ, ಪುರಸಭೆ ಮಾಜಿ ಅಧ್ಯಕ್ಷ ಮೈಹಿಬೂಬಸಾಬ ಚೋರಗಸ್ತಿ, ಇಬ್ರಾಹಿಂ ಮನ್ಸೂರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ನಮಾಜಕಟ್ಟಿ ಉದ್ಘಾಟಿಸಿದರು. ಮಕ್ಕಳಲ್ಲಿ ಅಡಗಿರುವ ವ್ಯವಹಾರಿಕ ಜ್ಞಾನವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಆಹಾರ ಉತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಿ ಯೋಗ್ಯ ದರದಲ್ಲಿ ಮಾರಾಟ ಮಾಡಿದರು. ಆಹಾರ ಪದಾರ್ಥಗಳಲ್ಲಿ ಸಿಹಿ ಪದಾರ್ಥ, ಕಾಯಿಪಲ್ಲೆ ಮತ್ತು ಕೋಲ್ಡ್ರೀಂಕ್ಸ್ ಒಳಗೊಂಡಂತೆ ವಿವಿಧ ನಮೂನೆಯ ಪದಾರ್ಥಗಳನ್ನು ಮಾರಾಟಕ್ಕೆ ಇಟ್ಟು ಗ್ರಾಹಕರನ್ನು ಸೆಳೆಯುವ ಕೌಶಲದ ಬಗ್ಗೆ ಅತಿಥಿಗಳಿಗೆ ಸಂತಸ ವ್ಯಕ್ತಪಡಿಸಿದರು. ಆಹಾರ ಪದಾರ್ಥಗಳ ಬೆಲೆ ₹5 ಯಿಂದ ₹30 ವರೆಗೆ ನಿಗದಿಪಡಿಸಲಾಗಿತ್ತು ಆಹಾರ ಪದಾರ್ಥಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳೆ ಖರೀದಿಸಿ ಮಕ್ಕಳನ್ನ ಪ್ರೋತ್ಸಾಹಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಬೀಬಿಆಯಿಶಾ ವಠಾರ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಬಾನಾ ಚೋರಗಸ್ತಿ, ಸಹ ಶಿಕ್ಷಕರಾದ ಜೆ.ಆಯ್.ಸಂಗಾಪೂರ, ಮೊದಲಾದವರು ಇದ್ದರು.