ಮಕ್ಕಳ ಸಾಹಿತ್ಯದಲ್ಲಿ ಏಕಾಗ್ರತೆ, ಮಾನವೀಯ ಮೌಲ್ಯಗಳಿರಲಿ

| Published : Dec 18 2024, 12:49 AM IST

ಮಕ್ಕಳ ಸಾಹಿತ್ಯದಲ್ಲಿ ಏಕಾಗ್ರತೆ, ಮಾನವೀಯ ಮೌಲ್ಯಗಳಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಮಕ್ಕಳಲ್ಲಿ ಕುತೂಹಲ ಕೆರಳಿಸುವ, ಏಕಾಗ್ರತೆಯಿಂದ ನೋಡುವ, ಮಾನವೀಯ ಮೌಲ್ಯಗಳನ್ನು ಬೀರುವಂತಹ ಅಂಶಗಳು ಮಕ್ಕಳ ಸಾಹಿತ್ಯದಲ್ಲಿರಬೇಕು. ಈ ನಿಟ್ಟಿನಲ್ಲಿ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಒಳಗೊಂಡಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮಕ್ಕಳಲ್ಲಿ ಕುತೂಹಲ ಕೆರಳಿಸುವ, ಏಕಾಗ್ರತೆಯಿಂದ ನೋಡುವ, ಮಾನವೀಯ ಮೌಲ್ಯಗಳನ್ನು ಬೀರುವಂತಹ ಅಂಶಗಳು ಮಕ್ಕಳ ಸಾಹಿತ್ಯದಲ್ಲಿರಬೇಕು. ಈ ನಿಟ್ಟಿನಲ್ಲಿ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಒಳಗೊಂಡಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಗೋರಬಾಯಿ ಟೋಳಿ ಮಹಿಳಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಇಂದುಮತಿ ಲಮಾಣಿಯವರ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಬುದ್ಧಿಮಟ್ಟವನ್ನು ವಿಕಾಸಗೊಳಿಸುವ ಶಕ್ತಿ ಸಾಮರ್ಥ್ಯ ಮಕ್ಕಳ ಸಾಹಿತ್ಯದಲ್ಲಿರಬೇಕು. ಮಕ್ಕಳ ಒಡನಾಡಿಗಳು, ಅವರ ಪ್ರೀತಿ ವಿಶ್ವಾಸಗಳಿಸಿದ್ದರೆ ಮಾತ್ರ ಅಂತಹವರಿಂದ ಉತ್ತಮ ಮಕ್ಕಳ ಸಾಹಿತ್ಯ ಹೊರಬರುತ್ತದೆ ಎಂದು ಅಭಿಪ್ರಾಯಪಟ್ಟರು.ಗ್ರಾಮೀಣ ಭಾಗದಲ್ಲಿ ಜನಿಸಿದ ಇಂದುಮತಿ ಲಮಾಣಿ ಹಲವಾರು ಕೃತಿಗಳನ್ನು ರಚಿಸಿ ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇಂದು ಬಿಡುಗಡೆಯಾದ ಅವರ ಶಿಶು ಕಥಾ ಸಂಕಲನ ಕಾಡಿನ ಕರಡಿ ನಾಡಿಗೆ ಬಂತು ಕೃತಿಯಲ್ಲಿ ಮೂಢನಂಬಿಕೆಗಳನ್ನು ಯಾವ ರೀತಿ ನಂಬಬಾರದು ಸೇರಿದಂತೆ ಹಲವಾರು ಅಂಶಗಳು ಮಕ್ಕಳು ಕುತೂಹಲದಿಂದ ಓದುವಂತೆ ಕಥೆಗಳು ಮೂಡಿ ಬಂದಿವೆ ಎಂದರು.ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಬಾಬು ಕೃಷ್ಣಮೂರ್ತಿ ಮಾತನಾಡಿ, ಸಾಹಿತಿಗಳಿಗೆ ಜಾತಿಬೇಧ ಭಾವ ಇರಬಾರದು. ಸಾಹಿತ್ಯಕ್ಕೆ ಬಡತನ-ಶ್ರೀಮಂತಿಕೆ ಇರುವದಿಲ್ಲ. ಸಾಹಿತ್ಯಾಸಕ್ತರೆಲ್ಲರೂ ಸರಸ್ವತಿಯ ಆರಾಧಕರು. ಈ ಸಾಲಿನಲ್ಲಿ ಗ್ರಾಮೀಣ ಸೊಗಡಿನಲ್ಲಿ ಬೆಳೆದ ಬಂಜಾರ ಸಮುದಾಯಕ್ಕೆ ಸೇರಿದ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೃತಿಗಳನ್ನು ನೀಡಿರುವ ಇಂದುಮತಿ ಲಮಾಣಿ ಎಂದರೆ ತಪ್ಪಾಗಲಾರದು. ಇವರಿಂದ ಸಮಾಜಕ್ಕೆ ಆದರ್ಶ ಪ್ರಾಯವಾಗುವ ಒಳ್ಳೆಯ ಕೃತಿಗಳು ಮುಂಬರುವ ದಿನಗಳಲ್ಲಿಯೂ ಬರುವಂತಾಗಲೆಂದು ಆಶಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಬಿಜ್ಜರಗಿ ಮಾತನಾಡಿ, ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿರುವ ಇಂದುಮತಿ ಲಮಾಣಿ ಇದುವರೆಗೂ ಒಳ್ಳೆಯ ಕೃತಿಗಳನ್ನು ನೀಡಿದ್ದು, ಮುಂದೆಯೂ ಉತ್ತಮ ಕೃತಿಗಳು ಮೂಡಿ ಬರಲಿ ಎಂದು ಹೇಳಿದರು.ಸಾಹಿತಿ ಕಮಲಾ ಗೆಜ್ಜಿ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಕೃತಿ ಪರಿಚಯಿಸಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿನ ವಿಘ್ನೇಶ್ವರ ಮಾತನಾಡಿದರು.ಜನಪದ ಕಲಾವಿದರಾದ ವಸಂತ ಚವ್ಹಾಣ, ಆರ್‌.ಬಿ.ನಾಯಕ, ದಾವಣಗೆರೆ ಡಿವೈಎಸ್ಪಿ ಬಿ.ಎಸ್.ಬಸವರಾಜ, ತುಕಾರಾಮ ರಜಪೂತ, ರಾಜು ರಾಠೋಡ, ಶಾಂತಾ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಇತರರು ಇದ್ದರು. ವಿವೇಕಾನಂದ ಕಲ್ಯಾಣಶೆಟ್ಟಿ ಸ್ವಾಗತಿಸಿದರು. ಆರ್‌.ಜಿ.ಅಳ್ಳಗಿ ನಿರೂಪಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.