ಮಕ್ಕಳು ಹಿರಿಯರ ಆದರ್ಶಗಳನ್ನು ಹಂಚಿಕೊಳ್ಳಿ

| Published : Apr 12 2025, 12:47 AM IST

ಸಾರಾಂಶ

ಲಿಂಗದಹಳ್ಳಿ ಗ್ರಾಮದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ನವೀನ್ ಉದ್ಘಾಟಿಸಿದರು.

ಮೇಲ್ಮನೆ ಸದಸ್ಯ ಕೆ.ಎಸ್.ನವೀನ್ ಹೇಳಿಕೆ । ಲಿಂಗದಹಳ್ಳಿಯಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹೊಸದುರ್ಗ

ಹಿರಿಯರ ಆಸ್ತಿ ಹಂಚಿಕೊಳ್ಳುವ ಮಕ್ಕಳು ಮೊಮ್ಮಕ್ಕಳು ಆಸ್ತಿಯ ಜೊತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ನಮ್ಮ ಹಿರಿಯರ ಆತ್ಮಕ್ಕೆ ನಿಜವಾದ ಗೌರವ ಆತ್ಮ ಶಾಂತಿ ಸಿಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ತಾಲೂಕಿನ ಲಿಂಗದಹಳ್ಳಿಯಲ್ಲಿ ಗುರುವಾರ ಸಂಜೆ ನಡೆದ ಗುರುವಿನ ಸಾನ್ನಿಧ್ಯದಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿವಿ ಅಥವಾ ಮೊಬೈಲ್ ಗಳಲ್ಲಿ ಬರುವ ಒಳಿತು ಕೆಟ್ಟದ್ದು ಆಯ್ಕೆ ಮಾಡುವ ಗೊಂದಲದಿಂದ ಅನೇಕ ರೀತಿಯ ಮಾನಸಿಕ ಒತ್ತಡದಲ್ಲಿ ಜನರಿದ್ದಾರೆ ಅಂತಹ ಜನರಿಗೆ ಗುರುಗಳ ಮಾರ್ಗದರ್ಶನ ಅತಿಥಿಗಳ ಉಪನ್ಯಾಸಗಳ ಮೂಲಕ ಸುಜ್ಞಾನ ಸಂಗಮ ಕಾರ್ಯಕ್ರಮ ಮಾನಸಿಕ ಒತ್ತಡವನ್ನು ಗೆಲ್ಲುವ ಆತ್ಮಬಲ ತುಂಬುವ ಕಾರ್ಯಕ್ರಮವಾಗಿದೆ ಎಂದರು.

ಹಿಂದೆ ನಮ್ಮ ಪೂರ್ವಜರು ಮನೆಯಿಂದ ಹೊರ ಹೋಗುವಾಗ ಹಣೆಗೆ ಕುಂಕುಮ ವಿಭೂತಿ ಬಂಡಾರಗಳನ್ನು ಧರಿಸಿ ಹೋಗುತ್ತಿದ್ದರು, ಆದರೆ ಇಂದಿನ ಯುವಕರು ಈ ಆದರ್ಶಗಳನ್ನು ಬದುಗೊತ್ತಿ ಕೇವಲ ಯಾಂತ್ರಿಕ ಜೀವನ ನಡೆಸುತ್ತಿದ್ದಾರೆ. ಗುರುಗಳು ತೋರಿದ ದಾರಿಯಲ್ಲಿ ನೆಡೆದಲ್ಲಿ ಯಶಸ್ಸು ಕಳಿಸಲು ಸಾಧ್ಯ ಎಂದರು.

ಕನಕ ಗುರುಪೀಠದ ಪೂಜ್ಯಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿರಿಯರ ಲಾಲನೆ ಪೋಷಣೆ ಮಾಡುವ ಮೂಲಕ ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಪ್ರಧಾನವಾಗಿಟ್ಟುಕೊಂಡು ಬದುಕು ನಡೆಸುವುದು ಅನಿವಾರ್ಯವಾಗಿದೆ. ಇವತ್ತಿನ 16 ರಿಂದ 18 ವರ್ಷದ ಯುವಕರು ದುಶ್ಚಟಗಳಿಗೆ ಡಾಬ ಸಂಸ್ಕೃತಿಗೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದರು.

ಸತ್ಯವಂತರ ಸಂಘವಿರಲು ಇರ್ತವ್ಯಾತಕೆ ಎಂಬ ದಾಸರ ಆದರ್ಶದ ಮಾತುಗಳನ್ನು ಅಳವಡಿಸಿಕೊಂಡು ಸಜ್ಜನರ ಸದ್ಗುರುವಿನ ಸಂಘ ಮಾಡಿದಾಗ ಬದುಕು ಹಸನಾಗಲು ಸಾಧ್ಯ. ಶಾಂತವೀರ ಶ್ರೀಗಳಲ್ಲಿರುವ ಧೈರ್ಯ ನಾವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಕೋಟಿ ಕೋಟಿ ಸಾಲ ಮಾಡಿ ಸಮಾಜ ಕಟ್ಟಿದ ಕೃಷಿಯಲ್ಲಿ ದುಡಿದು ಮಠ ಕಟ್ಟಿದ ಮಠಾಧೀಶರಲ್ಲಿ ಶಾಂತವೀರ ಸ್ವಾಮೀಜಿಯವರು ಅಗ್ರಗಣ್ಯರು, ಕುಂಚಿಟಿಗ ಸಮಾಜ ಇಂದು ಸಂಘಟನೆ ಆಗಲು ಅವರ ನಿರಂತರ 25 ವರ್ಷಗಳ ಶ್ರಮ ಮತ್ತು ಅವರು ಸಮಾಜಕ್ಕಾಗಿ ಮಾಡಿರುವ ಜಮೀನುಗಳು ಕಟ್ಟಡಗಳನ್ನು ನೋಡಿದಾಗ ತಮ್ಮ ಶ್ರಮದ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ ತಂದೆ ತಾಯಿಗಳ ಆಸ್ತಿಗಾಗಿ ಬಡೆದಾಡುವ ಮಕ್ಕಳು ಅವರ ಆದರ್ಶಗಳಿಗಾಗಿ ಪೈಪೋಟಿ ನಡೆಸಿ ಆಗ ಸಮಾಜ, ದೇಶ ಸತ್ಯದ ಸಮೃದ್ಧಿ ಪಥದಲ್ಲಿ ನಡೆಯಲು ಸಾಧ್ಯ. ನಿಮ್ಮ ಭವಿಷ್ಯದ ಬದುಕಿಗಾಗಿ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸುವ ದುಷ್ಟ ಮುಕ್ತ ಹಾಗೂ ಆರ್ಥಿಕ ಸಬಲೀಕರಣ ಮಾಡಲು ನಿಮ್ಮಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮ ಬಲ ತುಂಬಲು ಹಳ್ಳಿಗಳಲ್ಲಿ ಸುಜ್ಞಾನ ಸಂಗಮ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಕಲ್ಕೆರೆ ಶೇಖರಪ್ಪ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಉಪನ್ಯಾಸಕ ಶಿವಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಸಮಾಜದ ಮುಖಂಡರಾದ ಕೋಡಿಹಳ್ಳಿ ತಮ್ಮಣ್ಣ, ಕೋಡಿಹಳ್ಳಿ ಧರಣಪ್ಪ, ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿ, ಬಸವಲಿಂಗಪ್ಪ, ಮಾಚೇನಹಳ್ಳಿ ಬಸಣ್ಣ ತಣಿಗೇಕಲ್ಲು ಲೋಕಣ್ಣ, ಗುಳಿಹಟ್ಟಿ ಹಾಲಸಿದ್ದಪ್ಪ, ಮಣಿಕಂಠ ಮಂಜು, ಅಯ್ಯನಳ್ಳಿ ದೇವರಾಜ್, ಸಂಗೇನಹಳ್ಳಿ ಮಹೇಶ್, ಅಶೋಕ್ ಇದ್ದರು.