ಸಾರಾಂಶ
ಹಿರೇಕೆರೂರು: ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ತಾಲೂಕಿನ ಜೋಗಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾವರಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕೂಡ ವಿಶಿಷ್ಟವಾದ ಕಲೆ ಇರುತ್ತದೆ. ಹಳ್ಳಿಗಾಡಿನಲ್ಲಿ ಇರುವ ಪ್ರತೀ ಮಗು ಕೂಡ ಹಾಡುಗಳನ್ನು ಹೇಳುವುದರಲ್ಲಿ, ಚಿತ್ರಕಲೆ, ನೃತ್ಯ,ರಂಗೋಲಿ ಹೀಗೆ ವಿವಿಧ ಕಲೆಗಳಲ್ಲಿ ಜಾಣರು ಇರುತ್ತಾರೆ. ಅಂಥಹ ಪ್ರತಿಭೆಗಳನ್ನು ಗುರುತಿಸುವ ವೇದಿಕೆ ಇದಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ವಿದ್ಯಾರ್ಥಿಗಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡಿ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣರಾಗಬೇಕು ಎಂದರು.ಗ್ರಾಪಂ ಅಧ್ಯಕ್ಷ ಈರಪ್ಪ ಗುಬ್ಬೇರ, ಉಪಾಧ್ಯಕ್ಷೆ ಶಾಂತಾ ಮುಂದಿನಮನಿ, ಎಸ್‌ಡಿಎಂಸಿ ಅಧ್ಯಕ್ಷ ಜಯದೇವ ಬಣಕಾರ, ಉಪಾಧ್ಯಕ್ಷೆ ಇಂದ್ರವ್ವ ಮಾಳಗಿ, ಗ್ರಾಪಂ ಸದಸ್ಯರಾದ ರೇಣುಕಾ ಕುರಬರ, ಶಂಕರಗೌಡ ಅಬಲೂರು, ಬಸನಗೌಡ ದೊಡ್ಡಗೌಡ್ರ, ಕ್ಷೇತ್ರ ಸಮನ್ವಯಾಧಿಕಾರಿ ಎನ್.ಸುರೇಶಕುಮಾರ, ರಾಮು ದೀವೀಗಿಹಳ್ಳಿ, ಶಶಿಧರ ಶಿವಪ್ಪಳವರ, ಚನ್ನೇಶ ದಿವೀಗಿಹಳ್ಳಿ, ಚಂದ್ರಪ್ಪ ಬಣಕಾರ, ಬಸವರಾಜ ಬಿದರಿ, ರವಿಯಪ್ಪ ಮರಿಗೌಡ್ರ, ಬಸವರಾಜ ಬಣಕಾರ, ಪಿಡಿಒ ಮಹಾಂತೇಶ ಹೆಗದಾಳ, ಮುಖ್ಯಶಿಕ್ಷಕ ನಿಜಲಿಂಗಪ್ಪ ಇಂಗಳಗೊಂದಿ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ತಾವರಗಿ ಕ್ಲಸ್ಟರ್ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.