ಬಾಲ್ಯದಲ್ಲೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಶಿಕ್ಷಣ ನೀಡಬೇಕು

| Published : Jul 31 2024, 01:01 AM IST

ಬಾಲ್ಯದಲ್ಲೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಶಿಕ್ಷಣ ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಮನಸ್ಸು ಹಸಿ ಗೋಡೆಯ ತರಹ ಮೃದುವಾಗಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು ಎಂದು ಲ್ಯಾಂಡ್ ಲಾರ್ಡ್ ವರುಣಗೌಡ ಪಾಟೀಲ ಅವರು ಹೇಳಿದರು.

ಶಿಗ್ಗಾಂವಿ: ಮಕ್ಕಳ ಮನಸ್ಸು ಹಸಿ ಗೋಡೆಯ ತರಹ ಮೃದುವಾಗಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು ಎಂದು ಲ್ಯಾಂಡ್ ಲಾರ್ಡ್ ವರುಣಗೌಡ ಪಾಟೀಲ ಅವರು ಹೇಳಿದರು.

ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಗ್ಲೋಬಲ್ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಮಕ್ಕಳ ಆಟಕ್ಕಾಗಿ ಜಾರು ಬಂಡಿ ಕುಳಿತುಕೊಳ್ಳಲು ಕಾಂಕ್ರೀಟ್ ಬೆಂಚಗಳನ್ನು ಕೊಡುಗೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳು ಸಹ ನಗರ ಪ್ರದೇಶದ ಮಕ್ಕಳ ಜೊತೆ ಸ್ಪರ್ಧೆ ಮಾಡಲು ಈಗಿನಿಂದಲೇ ಅವರಿಗೆ ತಯಾರಿ ಮಾಡುವ ಜವಾಬ್ದಾರಿ ಶಿಕ್ಷಕರಿಗೆ ಇದೆ. ಹಾಗಾಗಿ ಈ ಕಾನ್ವೆಂಟ್ ಶಾಲೆಗೆ ಮಕ್ಕಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಪಾಠದ ಜೊತೆಗೆ ಆಟಗಳಿಗೂ ಸಹ ಅಷ್ಟೇ ಪ್ರಾಮುಖ್ಯತೆ ನೀಡಿದರೆ ಕಲಿಕೆಯ ಕಡೆಗೆ ಮಕ್ಕಳ ಆಸಕ್ತಿ ಹೆಚ್ಚುವುದು ಎನ್ನುವ ದಿಸೆಯಿಂದ ಆಟದ ಮೈದಾನದಲ್ಲಿ ಬೇಕಾಗುವ ಜಾರು ಬಂಡೆ ಹಾಗೂ ಇನ್ನಿತರೆ ವಸ್ತುಗಳನ್ನು ನೀಡಿರುವುದು ಸಂತೋಷವೆನಿಸುತ್ತದೆ. ಹಾಗಾಗಿ ಶಾಲಾ ಮಂಡಳಿಯ ಮನವಿ ಮೇರೆಗೆ ಈ ಕಾರ್ಯ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ನಾಗರಾಜ ಕ್ಯಾಬಳ್ಳಿ, ವಿನಯ ಹೊನ್ನಣ್ಣವರ, ಗ್ರಾಮದ ವೇಮೂ ರೇವಣಸಿದ್ದಯ್ಯ ಹಿರೇಮಠ, ನಾಗರಾಜ ಪಟ್ಟಣಶೆಟ್ಟಿ, ರಮೇಶ ಸಾತಣ್ಣವರ, ಇರ್ಷಾದಅಹ್ಮದಖಾನ್ ಭಾವಾಖಾನವರ, ಬಾಬುಸಾಬ ದಿವಾನವರ, ವೀರಭದ್ರಗೌಡ ಪಾಟೀಲ, ಇಂತಿಯಾ ದಿವಾನವರ, ಮಹ್ಮದ ಬಾವಾಖಾನವರ, ರೂಪಾ ದೊಡ್ಡಮನಿ, ನಿರ್ಮಲಾ ಪೂಜಾರ ಇದ್ದರು.