ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಇಂದಿನ ಮಕ್ಕಳು ಮುಂದಿನ ಭವಿಷ್ಯದ ಪ್ರಜೆಗಳು ಎಂಬಂತೆ ಮಕ್ಕಳು ದೇಶದ ಸಂಪತ್ತಾಗಿದ್ದು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ನೈತಿಕ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುವಂತೆ ನಗರದ ಜೆಎಂಎಫ್‌ಸಿ ನ್ಯಾಯಾಲಯದ ೧ನೇ ಅಪರ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್. ಜೆ ಶಿಲ್ಪಾ ಹೇಳಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರೌಢಶಾಲಾ ವಿಭಾಗದಿಂದ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಮಕ್ಕಳನ್ನು ದುಡಿಸಬೇಡಿ:ಮಕ್ಕಳು ನೈತಿಕ ಹಾಗೂ ಗುಣಾತ್ಮಕ ಶಿಕ್ಷಣವನ್ನು ಪಡೆಯಲು ಸರ್ಕಾರಗಳು ಕೋಟ್ಯಂತರ ರೂಗಳನ್ನು ಖರ್ಚು ಮಾಡಿ ಹಲವು ರೀತಿಯ ಸವಲತ್ತುಗಳನ್ನು ಒದಗಿಸಿದೆ. ಶಿಕ್ಷಣ ಪಡೆಯುವ ಮಕ್ಕಳನ್ನು ದುಡಿಮೆಗೆ ದೂಡಬಾರದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಪೂರಕ ವಾತಾವರಣ ಮಾಡಿಕೊಡಬೇಕು, ಬಾಲಕಿಯರು ಶಾಲಾ ಕಾಲೇಜುಗಳಿಗೆ ಹೋಗುವ ವೇಳೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದಾದರೂ ಕಿರುಕುಳ ನೀಡುವಂತಹ ಘಟನೆಗಳು ನಡೆದರೆ ತಕ್ಷಣ ಶಾಲಾ-ಕಾಲೇಜುಗಳು ಹಾಗೂ ಪೋಷಕರು ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದರು.ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕಾನೂನು ಸೇವಾ ಪ್ರಾಧಿಕಾರವು ಉಚಿತ ಕಾನೂನು ಅರಿವು ಮತ್ತು ನೆರವು ನೀಡುವ ಕೆಲಸ ಮಾಡುತ್ತಿದೆ ವಿದ್ಯಾರ್ಥಿಗಳು ಶೈಕ್ಷಣಿಕ ದಿನಗಳಲ್ಲಿ ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ರೂಪಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗುವಂತೆ ಸಲಹೆ ನೀಡಿದರು.ಶಿಕ್ಷಕರೇ ಮಾರ್ಗದರ್ಶಕರು
ತಹಸೀಲ್ದಾರ್ ಎಂ.ವಿ.ರೂಪ ಮಾತನಾಡಿ ಯುವ ಮನಸ್ಸುಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತೀರಿ. ನೀವು ಕೇವಲ ಶಿಕ್ಷಕರಲ್ಲ. ನೀವು ಮಾರ್ಗದರ್ಶಕರು, ಮಾರ್ಗದರ್ಶಕರು ಮತ್ತು ಆಗಾಗ್ಗೆ, ಸ್ಫೂರ್ತಿಯ ಮೂಲವೂ ಆಗಿದ್ದೀರಿ. ಈ ಮಕ್ಕಳ ದಿನದಂದು, ಈ ಯುವ ಆತ್ಮಗಳನ್ನು ಪೋಷಿಸಲು ಮತ್ತು ರೂಪಿಸಲು ತಮ್ಮ ಸಮಯ, ಶಕ್ತಿ ಮತ್ತು ಜ್ಞಾನವನ್ನು ಮೀಸಲಿಡುವ ನಮ್ಮ ಶಿಕ್ಷಕರ ಅವಿಶ್ರಾಂತ ಪ್ರಯತ್ನಗಳನ್ನು ಶ್ಲಾಘಿಸಲು ಒಂದು ಕ್ಷಣ ತೆಗೆದುಕೊಳ್ಳೋಣ ಎಂದರು.ಪ್ರತಿಯೊಂದು ಮಗುವಿನಲ್ಲೂ ಅಡಗಿರುವ ಅದ್ಭುತ ಸಾಮರ್ಥ್ಯವನ್ನು ನಾವು ಒಪ್ಪಿಕೊಳ್ಳೋಣ. ಶಿಕ್ಷಕರಾಗಿ, ಈ ಸಾಮರ್ಥ್ಯವನ್ನು ಅನ್‌ಲಾಕ್ ಮಾಡುವ, ಅವರ ಉತ್ಸಾಹ ಮತ್ತು ಪ್ರತಿಭೆಯನ್ನು ಅನ್ವೇಷಿಸಲು ಮಾರ್ಗದರ್ಶನ ನೀಡುವ ವಿಶಿಷ್ಟ ಸವಲತ್ತು ನಿಮಗಿದೆ. ನೀವು ಹೊರುವ ಜವಾಬ್ದಾರಿ ಅಪಾರ ಮತ್ತು ನಿಮ್ಮ ಸಮರ್ಪಣೆ ಶ್ಲಾಘನೀಯ ಎಂದರು.ತಾ.ಪಂ. ಕೃಷ್ಣಪ್ಪ, ಕೋಲಾರ ಜಿಲ್ಲೆ ಉಪನಿರ್ದೇಶಕರಾದ (ಅಭಿವೃದ್ಧಿ) ಕೃಷ್ಣಮೂರ್ತಿ, ಬಿಇಒ ಬಿಪಿ ಕೆಂಪಯ್ಯ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಟಿ ವೆಂಕಟಸ್ವಾಮಿ, ಶ್ರೀ ಮಾರಿಕಾಂಬ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪಿ ವೆಂಕಟೇಶ್, osಚಿಚಿಣ ಸಂಸ್ಥೆಯ ಕ್ಯಾಪ್ಟನ್ ಪ್ರಸಾದ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮುನೇಗೌಡ,ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಎಬಿ ರಾಮಕೃಷ್ಣಪ್ಪ ಇನ್ನಿತರರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))