ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಸತತ ಅಧ್ಯಯನ ಹಾಗೂ ಕಲಿಸುವ ಉತ್ಸಾಹ ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಹಾಗೂ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಕಾರ್ಯ ಮಾಡಬೇಕು. ಮಕ್ಕಳಿಗೆ ಕಲಿಕೆಯೊಂದಿಗೆ ಮೌಲ್ಯಗಳು ಮತ್ತು ಜೀವನ ಕೌಶಲ್ಯ ಕಲಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಹಿರೇಕೆರೂರು: ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಸತತ ಅಧ್ಯಯನ ಹಾಗೂ ಕಲಿಸುವ ಉತ್ಸಾಹ ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಹಾಗೂ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಕಾರ್ಯ ಮಾಡಬೇಕು. ಮಕ್ಕಳಿಗೆ ಕಲಿಕೆಯೊಂದಿಗೆ ಮೌಲ್ಯಗಳು ಮತ್ತು ಜೀವನ ಕೌಶಲ್ಯ ಕಲಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಷ್ಯನ ಸಾಧನೆಯಲ್ಲಿ ಸಂತೃಪ್ತಿ ಕಾಣುವ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ, ಸದೃಢ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಮೇಲಿದೆ ಎಂದರು. ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಬದುಕಿಗೆ ದಾರಿದೀಪವಾಗಿ, ಮಾರ್ಗದರ್ಶಕರಾದ ಗುರುಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಂತ ಮಹಾನ್ ವ್ಯಕ್ತಿಯ ಆದರ್ಶ ಮೈಗೂಡಿಸಿಕೊಳಬೇಕು. ಸೇವೆ ತತ್ವ, ಆದರ್ಶ ಗುಣಗಳನ್ನು ನಾವೆಲ್ಲ ಅಳವಡಿಸಕೊಳಬೇಕು. ಇಲ್ಲಿನ ಗುರುಭವನದ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಅನುದಾನದಲ್ಲಿ ರು. 5 ಲಕ್ಷ ರು.ಗಳನ್ನು ಅನುದಾನ ನೀಡುವ ಭರವಸೆ ನೀಡಿದರು.
ಬಿಇಒ ಎನ್. ಶ್ರೀಧರ ಮಾತನಾಡಿ, ದೇಶ ಕಂಡ ಆದರ್ಶ ಶಿಕ್ಷಕರು ರಾಷ್ಟ್ರಪತಿ, ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸೇವೆ ತತ್ವ, ಆದರ್ಶ ಗುಣಗಳನ್ನು ನಾವೆಲ್ಲ ಅಳವಡಿಸಿಕೊಂಡು ವೃತ್ತಿಪರತೆಯನ್ನು ಹೆಚ್ಷಿಸಿಕೊಂಡು, ಅವರ ಆದರ್ಶಗಳನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯ ಮಾಡಬೇಕು. ಅತೀ ಗೌರವದ ವೃತ್ತಿ ಶಿಕ್ಷಕ ವೃತ್ತಿಯಾಗಿದ್ದು, ವೃತ್ತಿ ಗೌರವಿಸಬೇಕು, ಅದಕ್ಕೆ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸಿ ಮಕ್ಕಳ ಅಭಿವೃದ್ಧಿಯಲ್ಲಿ ತೃಪ್ತಿ ಕಾಣಬೇಕು. ಸದೃಢ ದೇಶ ಕಟ್ಟುವಲ್ಲಿ ಶಿಕ್ಷಕರ ಜವಾಬ್ದಾರಿ ಅತೀ ಮಹತ್ವದ್ದಾಗಿದೆ. ಇಲಾಖೆಯಲ್ಲಿ ಬದಲಾದ ಎಲ್ಲ ವ್ಯವಸ್ಥೆಗಳಿಗೆ ಹೊಂದಿಕೊಂಡು ಎಲ್ಲ ಕಾರ್ಯಕ್ರಮ ಅನುಷ್ಠಾನಗೊಳಿಸುವ ಜತೆಗೆ ಮಕ್ಕಳ ಕಲಿಕೆಗೂ ಒತ್ತು ನೀಡಬೇಕು ಎಂದರು.ಉಪನ್ಯಾಸ ನೀಡಿದ ಬೆನಕನಕೊಂಡ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜಪ್ಪ ಆರ್., ಮಕ್ಕಳ ಬದುಕಿನಲ್ಲಿ ಗುರುಗಳಾಗಿ ಅವರ ಬದುಕಿಗೆ ದಾರಿದೀಪವಾಗುವ ಕೆಲಸ ಮಾಡುವ ಅವಶ್ಯಕತೆ ಇದೆ. ಅವರನ್ನು ಪಠ್ಯದಿಂದಾಚೆಗೂ ಜೀವನ ರೂಪಿಸುವ ಶಿಕ್ಷಣ ನೀಡಿದಾಗ ಅವರ ನಮ್ಮನ್ನು ಸದಾ ಸ್ಮರಣೆ ಮಾಡಬೇಕು. ಮಕ್ಕಳಿಗೆ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿದಾಗ ಅವರ ಬಾಳು ಹಸನಾಗಲು ಸಾಧ್ಯವಾಗುತ್ತದೆ. ಗುರು- ಶಿಕ್ಷಕ ಎರಡೂ ನಿಭಾಯಿಸಬೇಕು. ಅಂದಾಗ ಮಾತ್ರ ಅವರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಂದಿನ ಮಕ್ಕಳ ಆಲೋಚನೆ ಬಹಳ ವೇಗವಾಗಿದೆ. ಅವರ ಮಕ್ಕಳಲ್ಲಿನ ಶಕ್ತಿ ಪ್ರತಿಭೆ ಯನ್ನು ಗುರುತಿಸಿ ಅವುಗಳನ್ನು ಪ್ರೇರಣೆ ನೀಡಿ ಅವರ ಸಾಧನೆಗೆ ತಳಪಾಯ ಹಾಕಬೇಕು. ಸಾಧಕರ ಜೀವನ ಸಾಧನೆ, ಅವರ ಮೌಲ್ಯಗಳನ್ನು ಅವರಿಗೆ ಮನವರಿಕೆ ಮಾಡಿ ಅವರಲ್ಲೂ ಸಾಧನೆ ಮಾಡುವ ಹುಮ್ಮಸ್ಸು ತುಂಬಬೇಕು ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಬಿಇಒ ಎನ್. ಶ್ರೀಧರ, ಶಿಕ್ಷಣಾಧಿಕಾರಿ ಎನ್. ಸುರೇಶಕುಮಾರ, ಸಮನ್ವಯಾಧಿಕಾರಿ, ಬಿ.ಆರ್. ತೆವರಿ, ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ದೈಹಿಕ ಪರಿವೀಕ್ಷಕ ಎಸ್.ಟಿ. ಲಮಾಣಿ, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಮೇಘರಾಜ ಮಾಳಗಿಮನಿ, ನಂಜುಂಡಪ್ಪ ಕೆ.ಸಿ., ಶಹಜಾನ್ ಬಿಲ್ಲಳ್ಳಿ, ಹನುಮಗೌಡ ಪಾಟೀಲ, ಸೇರಿದಂತೆ ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಿವೃತ್ತ ಶಿಕ್ಷಕರು, ಶಿಕ್ಷಕರು, ಇಲಾಖೆ ಸಿಬ್ಬಂದಿಯವರು ಹಾಜರಿದ್ದರು.