ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು: ಬಸವರಾಜು

| Published : Nov 13 2025, 12:30 AM IST

ಸಾರಾಂಶ

ಶಾಲಾ ಹಂತದಿಂದಲೂ ಮಕ್ಕಳಲ್ಲಿ ಗೌರವ ಗುರು ಭಾವನೆ ಹಿರಿಯರಿನ್ನು ಗೌರವದಿಂದ ಕಾಣುವ ಸದುದ್ದೇಶದ ಕೇಂದ್ರ ಸರ್ಕಾರದ ಆಕ್ಷನ್ ಫಾರ್ ಸೀನಿಯರ್ ಸಿಟಿಜನ್ ಶಿಪ್ ಯೋಜನೆ ಅಡಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದೆ.

ಕನ್ನಡಪ್ರಭ ವಾರ್ತೆ ದೇವಲಾಪುರ

ಗುರು, ಹಿರಿಯರ ಬಗ್ಗೆ ಗೌರವ ಮೂಡಲು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರ ಕಲಿಸಬೇಕು ಎಂದು ಎಚ್.ಎಂ.ಬಸವರಾಜು ತಿಳಿಸಿದರು.

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ನಡೆದ ನಮ್ಮ ಹಿರಿಯರು ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನ ಶೈಲಿಯಿಂದ ಸಂಸ್ಕಾರ ಮರೆಯಾಗುತ್ತಿದೆ. ಗುರು ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಇದರಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶಾಲಾ ಹಂತದಿಂದಲೂ ಮಕ್ಕಳಲ್ಲಿ ಗೌರವ ಗುರು ಭಾವನೆ ಹಿರಿಯರಿನ್ನು ಗೌರವದಿಂದ ಕಾಣುವ ಸದುದ್ದೇಶದ ಕೇಂದ್ರ ಸರ್ಕಾರದ ಆಕ್ಷನ್ ಫಾರ್ ಸೀನಿಯರ್ ಸಿಟಿಜನ್ ಶಿಪ್ ಯೋಜನೆ ಅಡಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಚಿಕ್ಕನಾಗೇಗೌಡ ಮಾತನಾಡಿ, ಮಕ್ಕಳಲ್ಲಿ ಗುರು ಹಿರಿಯರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಸಂಸ್ಕಾರ ರೂಢಿಸಿಕೊಂಡು ಭವಿಷ್ಯದ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಸಮಾರಂಭದಲ್ಲಿ ಶಿಕ್ಷಕಿ ಎಚ್.ಎಸ್.ಉಮಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ತೋಂಟರಾಧ್ಯ, ಮಾಯಗೋನಹಳ್ಳಿ ಪಂಚಾಯ್ತಿ ಭಾಗ್ಯ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿ, ಮಕ್ಕಳು ಉಪಸಿತರಿದ್ದರು.

ನೆಲದ ಮೇಲೆ ಮಲಗಿರುವ ಪುಸ್ತಕಗಳು ಸಹಾಯಕ್ಕೆ ಅಂಕೇಗೌಡ ಮನವಿ

ಕನ್ನಡಪ್ರಭ ವಾರ್ತೆ ಮಂಡ್ಯ

ಪಾಂಡವಪುರ ತಾಲೂಕು ಹರಳಹಳ್ಳಿಯ ಅಂಕೇಗೌಡ ಪುಸ್ತಕ ಮನೆಯಲ್ಲಿರುವ ಪುಸ್ತಕಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಸುಮಾರು 8 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು ನೆಲದ ಮೇಲೆ ಮಲಗಿವೆ. ಇದಕ್ಕೆ ಕಾಯಕಲ್ಪ ನೀಡಲು ಸಹಾಯ ಮಾಡುವಂತೆ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಎಂ.ಅಂಕೇಗೌಡ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಓದುವ ಕಾಲದಲ್ಲಿ ಪುಸ್ತಕಗಳೇ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ನನ್ನ ದುಡಿಮೆಯ ಒಂದಷ್ಟು ಹಣದಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗವಂತೆ ಎಲ್ಲೆಡೆ ಸುತ್ತಾಡಿ ಸಾಕಷ್ಟು ಪುಸ್ತಕಗಳನ್ನು ಸಂಗ್ರಹಿಸಿ ಅದನ್ನು ಒಂದೆಡೆ ಗುಡ್ಡೆ ಹಾಕಿದ್ದನ್ನು ಕಂಡ ಕೆಲವರು ಧನ ಸಹಾಯ ಮಾಡಿದ್ದರು ಎಂದರು.

ಉದ್ಯಮಿ ಹರಿಕೋಡೆ ಅವರು ಕಟ್ಟಡ ಕಟ್ಟಿಸಿಕೊಟ್ಟರು. ನಂತರ ಮಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ಕೋಟಿ ಅನುದಾನ ನೀಡಿ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟರು. ಆದರೂ ಇನ್ನೂ 8 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು ನೆಲದ ಮೇಲೆಯೇ ಇವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದರು.

ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ತಮಗೆ ಬೇಕಾದ ಪುಸ್ತಕಗಳನ್ನು ಓದಿ ಬರೆದುಕೊಂಡು ಹೋಗುತ್ತಾರೆ. ಜ್ಞಾನಾರ್ಜನೆಗಾಗಿ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುಸ್ತಕಗಳ ರಕ್ಷಣೆ ಅತ್ಯಾವಶ್ಯವಾಗಿದೆ ಎಂದರು.