ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು: ಚಿಟ್ಟಕ್ಕಿ ಬಸಪ್ಪ

| Published : Aug 06 2025, 01:15 AM IST

ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು: ಚಿಟ್ಟಕ್ಕಿ ಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಕ್ಕಳು ಚೆನ್ನಾಗಿ ಓದಿ, ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನೇರಲಕೆರೆ ಚಿಟ್ಟಕ್ಕಿ ಬಸಪ್ಪ ಟ್ರಸ್ಟ್ ದಾನಿಗಳಾದ ಚಿಟ್ಟಕ್ಕಿ ಬಸಪ್ಪ ಹೇಳಿದ್ದಾರೆ.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ಚೆನ್ನಾಗಿ ಓದಿ, ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನೇರಲಕೆರೆ ಚಿಟ್ಟಕ್ಕಿ ಬಸಪ್ಪ ಟ್ರಸ್ಟ್ ದಾನಿಗಳಾದ ಚಿಟ್ಟಕ್ಕಿ ಬಸಪ್ಪ ಹೇಳಿದ್ದಾರೆ.

ಮಂಗಳವಾರ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ 2025-26ನೇ ಸಾಲಿನ ಹೊಸದಾಗಿ ದಾಖಲಾದ ಮಕ್ಕಳಿಗೆ ಚಿಟ್ಟಕ್ಕಿ ಬಸಪ್ಪ ಟ್ರಸ್ಟ್ ನಿಂದ ಉಚಿತ ಸಮವಸ್ತ್ರ ವಿತರಣೆಯಲ್ಲಿ ಮಾತನಾಡಿದರು. ಪೋಷಕರು ಅನುಭವಿಸುತ್ತಿರುವ ಕಷ್ಟ-ಕಾರ್ಪಣ್ಯ ನೆನಪಿನಲ್ಲಿಟ್ಟುಕೊಂಡು ಸುಸಂಸ್ಕೃತ ಜೀವನ ನಡೆಸಬೇಕು. ತಾವು ವಿದ್ಯಾರ್ಥಿ ಯಾಗಿ ದ್ದಾಗ ಅನುಭವಿಸಿದ ಆರ್ಥಿಕ ಸಮಸ್ಯೆ ನೆನಪಿಸಿಕೊಂಡು ಈಗ ಇಷ್ಟೊಂದು ಉದಾರ ದೇಣಿಗೆ ನೀಡುವ ಮಟ್ಟಕ್ಕೆ ಬೆಳೆದಿರುವ ಬಗ್ಗೆ ತಿಳಿಸಿದರು.

ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಪುಟ್ಟಪ್ಪ .ಟಿ ಮಾತನಾಡಿ, ಸಮಾಜಕ್ಕೆ ಚಿಟ್ಟಕ್ಕಿ ಬಸಪ್ಪನವರ ರೀತಿ ಉದಾರ ದೇಣಿಗೆ ನೀಡುವ ರೀತಿಯಲ್ಲಿ ಮಕ್ಕಳು ಬೆಳೆಯುವಂತೆ ತಿಳಿ ಹೇಳಿದರು.ನಿವೃತ್ತ ಶಿಕ್ಷಕ ಮೂರ್ತಿ .ಎಸ್ ಮಕ್ಕಳು ಚಿಟ್ಟಕ್ಕಿ ಬಸಪ್ಪ ಟ್ರಸ್ಟ್ ನಿಂದ ನೀಡುತ್ತಿರುವ ಈ ಉಚಿತ ಸಮವಸ್ತ್ರ ಸಮರ್ಪಕವಾಗಿ ಬಳಸಿಕೊಂಡು, ತಾವೆಲ್ಲಾ ಈ ಸಮವಸ್ತ್ರ ಧರಿಸುವ ಮೂಲಕ ತಾವೆಲ್ಲಾ ಒಂದೇ ಎಂಬ ಭಾವನೆ ಹೊಂದಲು ತಿಳಿಸಿದರು.ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಎಚ್.ನಾಗರಾಜ್ ಮಾತನಾಡಿ ಕೊಡುಗೈ ದಾನಿಯಾಗಿ ಚಿಟ್ಟಕ್ಕಿ ಬಸಪ್ಪನ ವರು ಬೆಳೆದಿದ್ದು, ಅವರ ಹಾದಿಯಲ್ಲಿ ಮಕ್ಕಳೂ ಕೂಡ ಹೆಜ್ಜೆ ಹಾಕಬೇಕೆಂದು ಹೇಳಿದರು. ಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ. ಟಿ, ಮಾತನಾಡಿ ಮಕ್ಕಳು ಹೀಗ ನೀಡುತ್ತಿರುವ ಉಚಿತ ಸಮವಸ್ತ್ರವನ್ನು ಯೋಜಿತ ಪ್ರಮಾಣದಲ್ಲಿ ಬಳಸಿಕೊಂಡು, ತಮ್ಮ ಕಲಿಕಾ ಪ್ರಮಾಣ ಉತ್ತಮಪಡಿಸಿಕೊಳ್ಳಲು ತಿಳಿಸಿದರು. ಅಲ್ಲದೆ ಮಕ್ಕಳು ಉಚಿತವಾಗಿ ನೀಡುತ್ತಿರುವ ಈ ಸಮವಸ್ತ್ರ ಬಳಸಿಕೊಂಡು, ಉತ್ತಮ ಮೌಲ್ಯ ಅಳವಡಿಸಿಕೊಂಡು, ಉತ್ತಮ ಪ್ರಜೆಗಳಾಗು ವಂತೆ ತಿಳಿಸಿದರು.ಶಾಲೆ ಸ್ಥಳೀಯ ಸಲಹಾ ಸಮತಿ ಉಪಾಧ್ಯಕ್ಷ ಷಡಕ್ಷರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಶಾಲಾ ಕ್ಯಾಂಪಸ್‌ನಲ್ಲಿ ನೀಡುತ್ತಿರುವ ಸೌಲಭ್ಯ ಉತ್ತಮವಾಗಿದೆ. ಅವುಗಳನ್ನು ಸರಿಯಾಗಿ ಬಳಸಿ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.ಸ್ಥಳೀಯ ಸಲಹಾ ಸಮತಿ ಸದಸ್ಯೆ ಪಾರ್ವತಮ್ಮ ಕೆ ಬಿ, ಶಿಕ್ಷಕ ರಮಾಕಾಂತ್, ಶಿಕ್ಷಕಿ ಮಂಜುಳ ಮಲ್ಲಿಗವಾಡ, ಸವಿತಮ್ಮ ಬಿ. ಭಾಗವಹಿಸಿದ್ದರು. --

5ಕೆಟಿಆರ್.ಕೆ.4ಃ ತರೀಕೆರೆಯ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಗಿತ್ತು.