ಸಾರಾಂಶ
- ಮಕ್ಕಳಿಗೆ ಸ್ಕೂಲ್‌ಬ್ಯಾಗ್, ಟ್ರ್ಯಾಕ್‌ಸೂಟ್ ಹಾಗೂ ನೋಟ್‌ಪುಸ್ತಕಗಳ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಶಾಲಾ ಮತ್ತು ಹಾಸ್ಟೆಲ್ ಮಕ್ಕಳು ಸರ್ಕಾರ ಮತ್ತು ಸ್ಥಳೀಯ ದಾನಿಗಳು ನೀಡಿರುವ ಈ ಅಭ್ಯಾಸ ಸಾಮಗ್ರಿಗಳನ್ನು ಬಳಸಿಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಲಾ ಸಮಿತಿ ಸದಸ್ಯ ಎನ್ .ಪಿ. ಈಶ್ವರಪ್ಪ ತಿಳಿಸಿದ್ದಾರೆ. ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕೆಕೆಜಿಬಿವಿ ಹಾಸ್ಟೆಲ್ ಮತ್ತು ಶಾಲಾ ಮಕ್ಕಳಿಗೆ ಸ್ಕೂಲ್‌ಬ್ಯಾಗ್, ಟ್ರ್ಯಾಕ್‌ಸೂಟ್ ಹಾಗೂ ನೋಟ್‌ಪುಸ್ತಕಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಓದುವ ಎಲ್ಲ ಮಕ್ಕಳು ಗಮನಕೊಟ್ಟು ಓದಿ, ಸಮಾಜದಲ್ಲಿ ಉನ್ನತ ಸ್ಥಾನ ಪಡೆಯ ಬೇಕೆಂದರು. ನೋಟ್‌ಪುಸ್ತಕ ದಾನಿಗಳಾದ ಬೆಟ್ಟದ ತಾವರೆಕೆರೆಯ ಶಿವರಾಜ್ ಮಾತನಾಡಿ, ವಿದ್ಯೆ ಸಾಧಕನ ಸ್ವತ್ತು, ಮಕ್ಕಳು ಮನೆಯಲ್ಲಿ ತಮ್ಮ ಪೋಷಕರು ಪಡುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮುಂದಿನ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ನೋಟ್‌ಪುಸ್ತಕಗಳ ಮತ್ತೊಬ್ಬ ದಾನಿ ಶಾಲಾ ಸಮಿತಿ ಸದಸ್ಯರಾದ ಸಮತಲ ಗ್ರಾಮದ ಮಲ್ಲೇಶಪ್ಪ ಮಾತನಾಡಿ ಈ ಶಾಲೆ ಮತ್ತು ಹಾಸ್ಟೆಲ್‌ನಲ್ಲಿ ಸಿಗುತ್ತಿರುವ ಅತ್ಯಾಧುನಿಕ ಸೌಲಭ್ಯ ಬಳಸಿಕೊಂಡು ಓದಿನಲ್ಲಿ ಏಕಾಗ್ರತೆ ಸಾಧಿಸಿ, ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.ಶಾಲಾ ಸಮಿತಿ ಸದಸ್ಯ ಬಸವರಾಜ ಮಾತನಾಡಿ ಈ ಶಾಲಾ ಕ್ಯಾಂಪಸ್‌ನಲ್ಲಿ ದೊರಕಿಸಿರುವ ಎಲ್ಲ ಸೌಲಭ್ಯಗಳ ಹಿಂದೆ ಹಲವರ ಶ್ರಮವಿದೆ. ಅವರೆಲ್ಲರ ಶ್ರಮದ ಸಾರ್ಥಕವಾಗಬೇಕೆಂದರೆ ಇಲ್ಲಿ ಓದುವ ಮಕ್ಕಳು ಚೆನ್ನಾಗಿ ಕಲಿಯಬೇಕು ಎಂದು ಹೇಳಿದರು. ಶಾಲಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಮಾತನಾಡಿ ನಮ್ಮ ಶಾಲಾ ಪರಿಸರದಲ್ಲಿ ಓದಿಗೆ ಉತ್ತಮ ವಾತಾವರಣ ಕಲ್ಪಿಸ ಲಾಗಿದ್ದು, ಈಗ ಸದ್ಯದಲ್ಲೇ ಇಲ್ಲೊಂದು ಭೋಜನಾಲಯ ಅಥವಾ ಪ್ರಾರ್ಥನಾಲಯ ನಿರ್ಮಿಸುವ ಉದ್ದೇಶ ವಿದೆ. ಶ್ರೀ ಅಮೃತೇಶ್ವರನ ಕೃಪೆಯಿಂದ ಆ ಕಾರ್ಯ ಬೇಗ ನೆರವೇರಲಿ ಎಂದು ಆಶಿಸಿದರು.ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ ಮಾತನಾಡಿ ಈ ಶಾಲಾ ಕ್ಯಾಂಪಸ್‌ನಲ್ಲಿ ಎಷ್ಟೆಲ್ಲ ಸೌಲಭ್ಯ ದೊರೆಯಲು ಉದಾರ ದಾನ ನೀಡಿರುವ ಎಲ್ಲ ದಾನಿಗಳಿಗೆ ಕೃತಜ್ಞತೆ ತಿಳಿಸಿದ ಅವರು, ಅವರೆಲ್ಲರ ಸೇವೆ ಮರೆಯಲು ಸಾಧ್ಯವಿಲ್ಲ, ಮಕ್ಕಳು ಇಂದು ನೀಡಿರುವ ಈ ಅಭ್ಯಾಸ ಸಾಮಗ್ರಿಗಳನ್ನು ಸರಿಯಾಗಿ ಬಳಸುವ ಮೂಲಕ ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ತಿಳಿಸಿದರು. ಶಾಲೆ ಶಿಕ್ಷಕರಾದ ರಮಾಕಾಂತ್, ಸವಿತಮ್ಮ ಬಿ, ಮಂಜುಳ ಮಲ್ಲಿಗವಾಡ, ಪಂಚಾಕ್ಷರಪ್ಪ,ಶಿಕ್ಷಕರಾದ ಖಿಜರ್‌ಖಾನ್ , ಶಿಕ್ಷಕ ಸತೀಶ್ ನಂದಿಹಳ್ಳಿ, ಹಾಸ್ಟೆಲ್ ನಿಲಯ ಪಾಲಕಿಯಾದ ಸೌಮ್ಯ, ಪಲ್ಲವಿ, ಬಿಸಿಯೂಟ ತಯಾರಕರಾದ ಭಾಗ್ಯಮ್ಮ, ರತ್ನಮ ಮತ್ತಿತರರು ಭಾಗವಹಿಸಿದ್ದರು.
12ಕೆಟಿಆರ್.ಕೆ.6ಃತರೀಕೆರೆ ಸಮೀಪದ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಕೆಕೆಜಿಬಿವಿ ಹಾಸ್ಟೆಲ್ ಮತ್ತು ಶಾಲಾ ಮಕ್ಕಳಿಗೆ ಸ್ಕೂಲ್‌ಬ್ಯಾಗ್, ಟ್ರ್ಯಾಕ್‌ಸೂಟ್ ಹಾಗೂ ನೋಟ್‌ಪುಸ್ತಕ ವಿತರಿಸುವ ಕಾರ್ಯಕ್ರಮ ನಡೆಯಿತು.