ಸಾರಾಂಶ
ಶೃಂಗೇರಿ, ಇಂದಿನ ಆಧುನಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಎದುರಿಸ ಬೇಕಾಗುತ್ತದೆ. ಆದ್ದರಿಂದ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಮಕ್ಕಳು ಸಾಹಿತ್ಯ, ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಮೆಣಸೆ ಗ್ರಾಮಪಂಚಾಯಿತಿ ಗ್ರಂಥಾಲಯದ ಗ್ರಂಥಪಾಲಕ ಶ್ರೀನಿವಾಸ್ ಹೇಳಿದರು.
ಕನ್ನಡಪ್ರಭ ವಾರ್ತೆ, ಶೃಂಗೇರಿ
ಇಂದಿನ ಆಧುನಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಎದುರಿಸ ಬೇಕಾಗುತ್ತದೆ. ಆದ್ದರಿಂದ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಮಕ್ಕಳು ಸಾಹಿತ್ಯ, ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಮೆಣಸೆ ಗ್ರಾಮಪಂಚಾಯಿತಿ ಗ್ರಂಥಾಲಯದ ಗ್ರಂಥಪಾಲಕ ಶ್ರೀನಿವಾಸ್ ಹೇಳಿದರು.ಮೆಣಸೆ ಗ್ರಾಮ ಪಂಚಾಯಿತಿ ಹಾಗೂ ಅರಿವು ಕೇಂದ್ರ ಸಹಯೋಗದೊಂದಿಗೆ ಮೆಣಸೆ ಗ್ರಾಮಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಅಭಿಯಾನದಡಿ ಮಸಿಗೆ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ ಓದು ಬರಹ ಕುರಿತ ಮಾಹಿತಿ ಅರಿವು ಕಾರ್ಯಕ್ರಮ ದಲ್ಲಿ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪ್ರಚಲಿತ ಘಟನೆಗಳು, ರಾಜ್ಯ, ದೇಶ, ಪ್ರಪಂಚದ ಆಗುಹೋಗು, ಘಟನಾವಳಿಗಳ ಬಗ್ಗೆ ತಿಳಿದುಕೊಳ್ಳಬೇಕು. ಪತ್ರಿಕೆಗಳನ್ನು ಓದುವುದರಿಂದ ನಮಗೆ ಸಾಕಷ್ಟು ಜ್ಞಾನ ವೃದ್ದಿಯಾಗುತ್ತದೆ. ಇತಿಹಾಸ, ರಾಜಕೀಯ, ಕ್ರೀಡೆ, ವಿಜ್ಞಾನ ಇತರೆ ಸಾಕಷ್ಟು ವಿಷಯಗಳು ನಾವು ತಿಳಿದುಕೊಳ್ಳಬಹುದಾಗಿದೆ. ಶಿಕ್ಷಣಕ್ಕೆ ಪೂರಕ ಅನೇಕ ವಿಚಾರಗಳು ಪತ್ರಿಕೆಗಳಲ್ಲಿ ಸಿಗುತ್ತವೆ ಎಂದರು.
ಸಾಹಿತ್ಯ ಕೃತಿಗಳನ್ನು ಓದುವುದರಿಂದ ಹೆಚ್ಚು ಹೆಚ್ಚು ಜ್ಞಾನಭಿವೃದ್ಧಿಯಾಗುತ್ತದೆ. ಭಾಷೆ ಬೆಳವಣಿಗೆಯಾಗುತ್ತದೆ. ಶಾಲೆಗಳಲ್ಲಿರುವ ವಾಚನಾಲಯಗಳನ್ನು ಸಮರ್ಪಕವಾಗಿ ದುಪಯೋಗ ಪಡೆಸಿಕೊಳ್ಳಬೇಕು. ಕತೆಗಳು, ಲೇಖನಗಳು, ಕವಿತೆಗಳನ್ನು ಓದಬೇಕು. ನಮ್ಮ ಹೆಚ್ಚು ವಿಚಾರಧಾರೆ ಅಭಿವೃದ್ಧಿಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳಿಗೆ ಹೋಗುವ ಓದುಗರ ಸಂಖ್ಯೆ ಹೆಚ್ಚಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಮೆಣಸೆ ಗ್ರಾಪಂ ಸದಸ್ಯರಾದ ಕುಸುಮಾ, ಶಾಮಣ್ಣ, ಸುಷ್ಮ ಮತ್ತಿತರರು ಉಪಸ್ಥಿತರಿದ್ದರು.14 ಶ್ರೀ ಚಿತ್ರ 1-
ಶೃಂಗೇರಿ ಮೆಣಸೆ ಗ್ರಾಮಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಅಭಿಯಾನದಡಿ ಮಸಿಗೆ ಶಾಲೆಯ ವಿದ್ಯಾರ್ಥಿಗಳಿಗೆ ಓದು ಬರಹ ಮಾಹಿತಿ ಕಾರ್ಯಕ್ರಮ ನಡೆಯಿತು.