ಸಾರಾಂಶ
ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಅಪರಾಧ ತಡೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸುರಪುರಶಾಲಾ-ಕಾಲೇಜು ಮಕ್ಕಳಲ್ಲಿ ಹೆಚ್ಚಿನ ಕಾನೂನು ಜಾಗೃತಿ ಮತ್ತು ಅದನ್ನು ಬಳಸಿಕೊಳ್ಳುವ ಕಲೆಯನ್ನು ತಿಳಿಸಿಕೊಡುವುದೇ ಅಪರಾಧ ತಡೆ ಮಾಸಾಚರಣೆಯಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಾದರೂ ಪೊಲೀಸರಿಗೆ ತಪ್ಪದೇ ಮಾಹಿತಿ ನೀಡಬೇಕು ಎಂದು ಸುರಪುರ ಠಾಣೆ ಪಿಎಸ್‌ಐ ಶಿವರಾಜ್ ಪಾಟೀಲ್ ಹೇಳಿದರು. ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಬಗ್ಗೆಯೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಬಳಿ ಯಾರಾದರೂ ಅಪರಿಚಿತರು ಕಂಡು ಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದರಬೇಕು. ತೊಂದರೆ ಕೊಟ್ಟು ಬಲವಂತವಾಗಿ ಮಾತನಾಡಲು ಯತ್ನಿಸಿದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಮದು ತಿಳಿಸಿದರು. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಶಾಲೆ ಬಿಟ್ಟು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಲ್ಲಿ ತಿಳಿಸಿದರೆ, ಅವರನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ಕೊಡಿಸಲಾಗುವುದು. ಅನಕ್ಷರತೆ ಹೋಗಲಾಡಿಸಿ, ಒಳ್ಳೆಯ ಮೌಲ್ಯಯುತ ಶಿಕ್ಷಣ ಪಡೆದಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು. ಲೈಂಗಿಕ ಮಕ್ಕಳ ತಡೆ ಕಾಯಿದೆ ಪೋಕ್ಸೋ ಆಕ್ಟ್ 2012 ರ ಕುರಿತು ವಿದ್ಯಾರ್ಥಿ ದೆಸೆಯಿಂದಲೇ ಅರಿತುಕೊಳ್ಳಬೇಕು. ಯಾವುದೇ ಅಕ್ರಮ ಅಪರಾಧದ ಚಟುವಟಿಕೆಗಳು ಕಂಡು ಕೂಡಲೇ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ತಿಳಿಸಬೇಕು. ರಸ್ತೆಯಲ್ಲಿ ಓಡಾಡುವಾಗ ಸುರಕ್ಷತೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ವಂಚಕರಿಂದ ಎಚ್ಚರಿಕೆ ಇರಬೇಕು ಎಂದು ಎಚ್ಚರಿಸಿದರು. ಕೆಪಿಎಸ್ ಮುಖ್ಯಶಿಕ್ಷಕ ಸಿದ್ದಣ್ಣ ಕರಡಕಲ್, ಶಾಲೆಯ ಶಿಕ್ಷಕರು, ಪೊಲೀಸರಾದ ದಯಾನಂದ ಜಮಾದಾರ್, ಮಹಾದೇವ್ ಸೇರಿದಂತೆ ಇತರರಿದ್ದರು.
;Resize=(128,128))
;Resize=(128,128))
;Resize=(128,128))