ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಕರೆ

| Published : May 28 2024, 01:04 AM IST

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಸಲಹೆ ನೀಡಿದರು.

ಸೋಷಿಯಲ್ ವೆಲ್‌ ಫೇರ್ ಸೊಸೈಟಿ ಸಭಾಂಗಣದಲ್ಲಿ 2 ದಿನಗಳ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಸಲಹೆ ನೀಡಿದರು.

ಶನಿವಾರ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಭಾಂಗಣದಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ, ತಾಲೂಕು ವಕೀಲರ ಸಂಘ,ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ 2 ದಿನಗಳ ಮಕ್ಕಳ ಬೇಸಿಗೆ ಶಿಬಿರ ಹಾಗೂ ವಿಶ್ವ ತಂಬಾಕು ನಿಷೇದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಹಲವು ಕಾನೂನುಗಳು ಇದೆ. ಬಾಲ್ಯ ವಿವಾಹ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ ಇದೆ. 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ವಿವಾಹ ಮಾಡಬಾರದು. ಹಾಗೆಯೇ 21 ವರ್ಷ ತುಂಬದ ಗಂಡು ಮಕ್ಕಳಿಗೂ ವಿವಾಹ ಮಾಡುವುದು ಕಾನೂನು ಬಾಹಿರ ಎಂದರು.ಅತಿಥಿಯಾಗಿದ್ದ ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ ಮಾತನಾಡಿ, ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಹಲವು ವಿಚಾರಗಳು ತಿಳಿಯಲಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳಿವೆ. ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶದ ಬಗ್ಗೆ ಕಾನೂನು ಇದ್ದು ಸುರಕ್ಷಿತ ಸ್ಪರ್ಶ ಎಂದರೆ ಮಕ್ಕಳ ಕೈ, ಬುಜ, ಬೆನ್ನು ಮುಟ್ಟಬಹುದು.ತಲೆ ಸವರಬಹುದು. ಅಸುರಕ್ಷಿತ ಸ್ಪರ್ಶ ಎಂದರೆ ಮಕ್ಕಳ ಕೆನ್ನೆ, ಎದೆ, ತುಟಿ ಮಟ್ಟಬಾರದು. ಮಕ್ಕಳಿಗೆ ಏನಾದರೂ ಸಮಸ್ಯೆ ಬಂದರೆ ಮಕ್ಕಳ ಹೆಲ್ಪ್ ಲೈನ್ 1098 ಕ್ಕೆ ಕರೆ ಮಾಡಿ ಎಂದು ಸಲಹೆ ನೀಡಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ತಂಬಾಕು ನಿಷೇದ ದಿನದ ಬಗ್ಗೆ ಮಾತನಾಡಿ, ವಿಶ್ವದಾದ್ಯಂತ ಮೇ 31 ರಂದು ತಂಬಾಕು ನಿಷೇದ ದಿನ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನರು ಹೆಚ್ಚಾಗಿ ತಂಬಾಕು ಬಳಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಜೀವಕ್ಕೆ ಅಪಾಯವಿದೆ. ತಂಬಾಕಿನ ಕೈಗೆ ನಿಮ್ಮ ಜೀವ ನೀಡಬಾರದು. ತಂಬಾಕಿನಿಂದ ಕ್ಯಾನ್ಸರ್ ಕಾಯಿಲೆ ಬರುತ್ತದೆ. 1987 ರಿಂದ ತಂಬಾಕು ನಿಷೇದ ದಿನ ಆಚರಿಸಲಾಗುತ್ತಿದೆ ಎಂದರು. ಸಭೆ ಅಧ್ಯಕ್ಷತೆವಹಿಸಿದ್ದ ಸೋಷಿಯಲ್ ವೆಲ್ ಫೇರ್ ಸೊಸೈಟಿ ನಿರ್ದೇಶಕ ಫಾ.ಜೋಬೀಶ್ ಮಾತನಾಡಿ, ವಿದ್ಯಾರ್ಥಿ ಗಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಹೊಸ, ಹೊಸ ವಿಚಾರಗಳು ತಿಳಿಯಲಿದೆ. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆಟಗಳನ್ನು ಆಡಿಸಲಾಗುತ್ತದೆ. ಮನರಂಜನೆಯಿಂದ ಮಕ್ಕಳ ಮನಸ್ಸು ಉಲ್ಲಾಸಭರಿತವಾಗಲಿದೆ ಎಂದರು. ಎಸ್.ಡಬ್ಲೂ ಎಸ್ ಸಂಸ್ಥೆ ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶಶಿಕಲಾ ಮಾತನಾಡಿ, ಸಂಸ್ಥೆ ಕಳೆದ 8 ವರ್ಷಗಳಿಂದ ಬೇಸಿಗೆ ಶಿಬಿರ ಮತ್ತು ದಸರಾ ಶಿಬಿರ ನಡೆಸುತ್ತಿದ್ದೇವೆ. ಇದರಿಂದ ಮಕ್ಕಳಿಗೆ ನಾಲ್ಕು ಗೋಡೆ ಒಳಗಿನ ಶಿಕ್ಷಣಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಪ್ರತಿ ವರ್ಷ ಬೇಸಿಗೆ ಶಿಬಿರದಲ್ಲಿ ನುರಿತ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಈ ವರ್ಷ 2 ದಿನಗಳ ಶಿಬಿರ ಮುಗಿಸಿದ ನಂತರ ಮಕ್ಕಳಿಗೆ ಉಪಯೋಗವಾಗುವ ಶೈಕ್ಷಣಿಕ ಸಾಮಾಗ್ರಿ ಕಿಟ್ ವಿತರಿಸಲಾಗುತ್ತದೆ ಎಂದರು. ಸಂಪಲ್ಮೂಲ ವ್ಯಕ್ತಿ ಕೆ.ಎಸ್.ರಾಜಕುಮಾರ್ ಹಾಗೂ ಸುಬಾಷ್ ಮಕ್ಕಳಿಗೆ ವಿವಿಧ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಹಾಯಕ ನಿರ್ದೇಶಕ ಫಾ.ಅಭಿನವ್, ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಸುಬಾಶ್, ಪ್ರಿನ್ಲಿ ಸೆಬಾಸ್ಟಿನ್, ಆರ್. ಶಶಿಕಲಾ, ಉಷಾ ಇದ್ದರು.