ಮಕ್ಕಳು ಆಟಪಾಠಗಳಿಂದ ವಂಚಿತರಾಗಬಾರದು: ನ್ಯಾ.ಶಿವಕುಮಾರ್. ಆರ್

| Published : Jun 13 2024, 12:48 AM IST

ಮಕ್ಕಳು ಆಟಪಾಠಗಳಿಂದ ವಂಚಿತರಾಗಬಾರದು: ನ್ಯಾ.ಶಿವಕುಮಾರ್. ಆರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಕ್ಕಳು ಆಟಪಾಠಗಳಿಂದ ವಂಚಿತರಾಗಬಾರದು ಎಂದು ಸಿವಿಲ್ ನ್ಯಾಯಾಧೀಶ ಶಿವಕುಮಾರ್ ಆರ್. ಹೇಳಿದ್ದಾರೆ.

-ಬಾಲ ಕಾರ್ಮಿಕ ವಿರೋದಿ ದಿನದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ಆಟಪಾಠಗಳಿಂದ ವಂಚಿತರಾಗಬಾರದು ಎಂದು ಸಿವಿಲ್ ನ್ಯಾಯಾಧೀಶ ಶಿವಕುಮಾರ್ ಆರ್. ಹೇಳಿದ್ದಾರೆ.

ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ ತರೀಕೆರೆ, ವಕೀಲರ ಸಂಘ, ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಯಶೋದಮ್ಮ ನಾಗತಿ ಪ್ರೌಢಶಾಲೆ ಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಹದಿನಾಲ್ಕು ವರ್ಷ ಕೆಳಗಿನ ಮಕ್ಕಳು ವಂಚಿತರಾಗಬಾರದು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ವಾಗಿದೆ ಎಂದು ಹೇಳಿದರು.

ವಕೀಲರು ಎಸ್.ಸುರೇಶ್ ಚಂದ್ರ ಮಾತನಾಡಿ ಮಕ್ಕಳು ಎಂದರೆ 18 ವರ್ಷ ದೊಳಗಿನ ಮಕ್ಕಳಿಗೆ ತೊಂದರೆ ಕೊಡಬಾರದು. 2012ರಲ್ಲಿ ಫೋಸ್ಕೋ ಕಾಯಿದೆ ಜಾರಿಗೆ ಬಂದಿದೆ. ಈ ಕಾಯಿದೆಯನ್ನು 2018ರಲ್ಲಿ ತಿದ್ದುಪಡಿ ಮಾಡಿ ಬಾಲ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರಲಾಗಿದೆ. ಈ ಕಾಯಿದೆ ಪ್ರಕಾರ ಅಂಗಡಿ ಹೋಟೆಲ್, ಬೇಕರಿ, ಊದುಬತ್ತಿ ತಯಾರಿಕೆ, ಇಟ್ಟಿಗೆ ಗೂಡು, ಪಟಾಕಿ ಅಂಗಡಿ ಇತ್ಯಾದಿಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡರೆ ಅದು ಅಪರಾಧವಾಗುತ್ತದೆ ಎಂದು ಹೇಳಿದರು.

ವಿದ್ಯೆಯಿಂದ ಮಕ್ಕಳು ವಂಚಿತರಾಗಬಾರದು. ವಿವಾಹವಾಗಲು ಪುರುಷರಿಗೆ 21 ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿರಬೇಕು ಎಂದರು.

ಅಪರ ಸರ್ಕಾರಿ ವಕೀಲರಾದ ಟಿ.ಜೆ.ಜಗದೀಶ್ ಮಾತನಾಡಿ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡ ಬೇಕು ಎಂದು ಹೇಳಿದರು.

ತರೀಕೆರೆ ಹಿರಿಯ ಕಾರ್ಮಿಕ ನಿರೀಕ್ಷಕ ಮಹಾದೇವಪ್ಪ ಮಾತನಾಡಿ ಬಾಲಕಾರ್ಮಿಕರು ಕಂಡು ಬಂದರೆ ನಮಗೆ ಮಾಹಿತಿ ನೀಡಬೇಕು. ಅದನ್ನು ನಾವು ತಡೆಗಟ್ಟುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಸಿಡಿಪಿಒ ಚರಣ್ ಕುಮಾರ್ ಮಾತನಾಡಿ ಮಕ್ಕಳು ದೇಶದ ಪ್ರಜೆಗಳು, ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯಬೇಕು, ಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿದ್ದರೆ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತದೆ. ಬಾಲ್ಯ ಪುನಹ ಬರುವುದಿಲ್ಲ. ಬಾಲ್ಯ ಶ್ರೀಮಂತವಾದುದು ಎಂದು ಹೇಳಿದರು.

ಶಾಲೆ ಮುಖ್ಯೋಪಾಧ್ಯಾಯ ವೀರಪ್ಪ ಟಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ಕುಮಾರ್, ಉಷ, ಮತ್ತಿತರರು ಭಾಗವಹಿಸಿದ್ದರು.12ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಿವಿಲ್ ನ್ಯಾಯಾಧೀಶ ಶಿವಕುಮಾರ್ ಆರ್. ನೆರವೇರಿಸಿದರು. ವಕೀಲ ಎಸ್.ಸುರೇಶ್ ಚಂದ್ರ, ಅಪರ ಸರ್ಕಾರಿ ವಕೀಲ ಟಿ.ಜೆ.ಜಗದೀಶ ಮತ್ತಿತರರು ಇದ್ದರು.