ಮಕ್ಕಳು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು: ಆನಂದ್

| Published : Mar 04 2025, 12:34 AM IST

ಮಕ್ಕಳು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು: ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಕ್ಕಳು ಚೆನ್ನಾಗಿ ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನೇರಲಕೆರೆ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಸಲಹೆ ನೀಡಿದ್ದಾರೆ.

ಶ್ರೀ ಅಮೃತೇಶ್ವರ ಪ್ರೌಢಶಾಲೆಗೆ ಕಂಪ್ಯೂಟರ್ ಕೊಡುಗೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ಚೆನ್ನಾಗಿ ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನೇರಲಕೆರೆ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಸಲಹೆ ನೀಡಿದ್ದಾರೆ.

ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಗೆ ಕೆನರಾ ಬ್ಯಾಂಕ್ ನಿಂದ ₹49000 ರು. ಬೆಲೆ ಬಾಳು ಒಂದು ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಶಾಲೆಗೆ ಏನಾದರೂ ಒಂದು ಕೊಡುಗೆಯನ್ನು ನೀಡಬೇಕೆಂದು ಆಶಿಸುತ್ತಿದ್ದೆ. ಅದು ಈಗ ಸಾಧ್ಯವಾಗಿದೆ. ಮಕ್ಕಳು ಇದರ ಸದಪಯೋಗವನ್ನು ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ ಮಾತನಾಡಿ ಕೆನರಾ ಬ್ಯಾಂಕ್ ಮತ್ತು ವ್ಯವಸ್ಥಾಪಕರ ಈ ಉದಾರ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ತುಂಬ ಉದಾರವಾಗಿ ಕೊಡುಗೆ ನೀಡಿದ ಬ್ಯಾಂಕ್ ಮತ್ತು ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.ಶಿಕ್ಷಕರಾದ ಖಿಜರ್‌ಖಾನ್ ಮಾತನಾಡಿ ಬ್ಯಾಂಕ್ ಮತ್ತು ವ್ಯವಸ್ಥಾಪಕರ ಈ ಕೊಡುಗೆಯಿಂದ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಈ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಿಗಳಾದ ರವಿ, ಕಾರ್ತಿಕ್ ಹಾಗೂ ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.3ಕೆಟಿಆರ್.ಕೆ.10ಃ

ತರೀಕೆರೆ ಸಮೀಪದ ನೆರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಗೆ ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಒಂದು ಕಂಪ್ಯೂಟರ್ ನ್ನು ಶಾಲೆ ಮುಖ್ಯೋಪಾಧ್ಯಾಯರು ಕೆ.ಟಿ.ಹಾಲೇಶ್ ಮತ್ತಿತರರು ಸ್ವೀಕರಿಸಿದರು.