ಮಕ್ಕಳಿಗಾಗಿಯೇ ಇಂದು ವಿಶೇಷ ಗ್ರಾಮಸಭೆ ಆಯೋಜನೆ ಮಾಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು

ಹನುಮಸಾಗರ: ಮಕ್ಕಳಿಗಾಗಿ ಸರ್ಕಾರ ಕಾನೂನಾತ್ಮಕ ಹಕ್ಕುಗಳನ್ನು ರೂಪಿಸಿದ್ದು, ತಮ್ಮ ಮೇಲೆ‌ ನಡೆಯುವ ದೌರ್ಜನ್ಯ, ಅನ್ಯಾಯ ಮೆಟ್ಟಿ‌ ನಿಲ್ಲಲು ತಮ್ಮ‌ಹಕ್ಕುಗಳನ್ನು ಪಡೆದುಕೊಂಡು ಭವಿಷ್ಯದ ಉತ್ತಮ‌ ಪ್ರಜೆಗಳಾಗಿ‌ ಹೊರಹೊಮ್ಮಬೇಕು ಎಂದು ನಿಲೋಗಲ್ಲ ಪಿಡಿಓ ಚಂದಪ್ಪ ಗುಡಿಮನಿ ಹೇಳಿದರು.

ತಾಲೂಕಿನ ನಿಲೋಗಲ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಈ ವೇಳೆ ಮಾತನಾಡಿದ ಅವರು‌, 3 ರಿಂದ 6 ವರ್ಷದ ಎಲ್ಲ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ 6 ರಿಂದ 18 ವರ್ಷದೊಳಗಿನ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಪಡೆಯಬೇಕು. ಮಕ್ಕಳು ದೈಹಿಕ, ಮಾನಸಿಕ, ಶೈಕ್ಷಣಿಕ, ಭಾವನಾತ್ಮಕ ಹಾಗೂ ಸರ್ವತೋಮುಖ ಬೆಳವಣಿಗೆ ಹೊಂದಿ ಉತ್ತಮ ಪ್ರಜೆಗಳಾಗಲು, ಕುಟುಂಬ, ಸಮುದಾಯ, ಶಾಲೆ, ಕಾಲೇಜಿನಲ್ಲಿ ಪೂರಕ ವಾತಾವರಣ ಇರಬೇಕು. ಬಾಲ್ಯವಿವಾಹ, ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಮಕ್ಕಳ ಪ್ರಗತಿಗೆ ಅಡ್ಡಿಯಾಗುವ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಕೂಡಲೇ ಸಹಾಯವಾಣಿ‌ ನಂ.1098 ಹಾಗೂ 112ಗೆ ಕರೆ ಮಾಡಲು ತಿಳಿಸಿದರು.

ಮಕ್ಕಳಿಗಾಗಿಯೇ ಇಂದು ವಿಶೇಷ ಗ್ರಾಮಸಭೆ ಆಯೋಜನೆ ಮಾಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು. ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ವ್ಯಕ್ತಪಡಿಸಿ.ಸಂಬಂಧಪಟ್ಟ ಇಲಾಖೆಯರಿಂದ ಪರಿಹರಿಸಲಾಗುವುದು ಎಂದು ತಿಳಿಸಿದರು.

ಭೀಮನಗೌಡ ಪೊಲೀಸ್ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಹಾಗೂ ಮುಖ್ಯ ಗುರುಗಳು ಪ್ರೌಢ ಶಾಲೆ ಹಾಗೂ ಮಕ್ಕಳ ಏಳಿಗೆಗಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ಗ್ರಾಪಂ‌ ಅಧ್ಯಕ್ಷೆ‌ ಮಲ್ಲವ್ವ ಮಲ್ಲಪ್ಪ ತಳವಾರ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪ್ರವೀಣ ಜಾಮ್ರಾನಕುಂಟಿ, ವಿಠಲ ಪತ್ತಾರ, ಭೀಮನಗೌಡ ಪಾಟೀಲ್ ಮತ್ತು ಯಮನೂರ ಗಾಜಿ ಶಾಲೆಯ ಮುಖ್ಯಗುರುಗಳು ಹಾಗೂ ರಾಮಣ್ಣ ಗುಜ್ಜಲ್ ಸೇರಿದಂತೆ ಇತರರು ಇದ್ದರು.