ಸಾರಾಂಶ
- ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಬ್ಯಾಗ್ ಲೆಸ್ ಡೇ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ
ಮಕ್ಕಳು ಅಂತರ್ಜಾಲವನ್ನು ಓದು ಬರಹಕ್ಕೆ ಪೂರಕವಾಗಿ ಬಳಸಬೇಕು ಎಂದು ಸಲಹೆ ಮಾಡಿದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಶಿಕ್ಷಕ ಖಿಜರ್ ಖಾನ್ ಈ ಸಮೂಹ ಮಾಧ್ಯಮಗಳ ಸಮರ್ಪಕ ಬಳಕೆ ಆದಾಗ ಮಾತ್ರ ಅವುಗಳ ಉಪಯೋಗ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಶಾಲಾ ಅವರಣದಲ್ಲಿ ಬ್ಯಾಗ್‌ಲೆಸ್ ಡೇ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮ ಮತ್ತು ಅಂತರ್ಜಾಲ ಎಂಬ ವಿಷಯ ಕುರಿತು ಮಾತನಾಡಿದರು. ಶಾಲೆಯಲ್ಲಿ ಹೇಗೆ ಈ ಅಂತರ್ಜಾಲದ ಸಮರ್ಪಕ ಬಳಕೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕ ರಮಾಕಾಂತ್ ಮಾತನಾಡಿ ಈ ಹಿಂದೆ ಕೇವಲ ಆಡಿಯೋ, ಮಾಧ್ಯಮ, ರೇಡಿಯೋ ಬಳಸಿ ಮಾಹಿತಿ ಪಡೆಯಲಾಗುತ್ತಿತ್ತು. ಇಂದಿನ ಆಡಿಯೋ-ವೀಡಿಯೋ ಮಾಧ್ಯಮಗಳ ಭರಾಟೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ. ಕೃತಕ ಉಪಗ್ರಹಗಳ ಸಹಾಯದಿಂದ ಹೇಗೆ ಈ ಮಾಹಿತಿ ಪ್ರಸಾರ ಆಗುತ್ತಿದೆ. ದಿನದ ೨೪ ಗಂಟೆ ಕಾರ್ಯಕ್ರಮ ಪ್ರಸಾರ ಹಾಗೂ ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಹಣ ಹೇಗೆ ಕ್ಯಾಷ್‌ಲೆಸ್ ಆಗಿ ಬಳಕೆ ಆಗುತ್ತಿದೆ ಎಂಬುದರ ವಿವರಣೆ ನೀಡಿದರು.ಶಿಕ್ಷಕಿ ಮಂಜುಳ ಮಲ್ಲಿಗವಾಡ ಮಾತನಾಡಿ ಸರ್ಕಾರದ 3 ಅಂಗಗಳ ಜೊತೆ 4ನೇ ಅಂಗವಾಗಿ ಈ ಸಮೂಹ ಮಾಧ್ಯಮ ಹೇಗೆ ತಮ್ಮ ಪಾತ್ರ ನಿರ್ವಹಿಸುತ್ತವೆ, ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹೇಗೆ ಪಡೆಯಬಹುದು. ಆನ್‌ಲೈನ್ ವ್ಯವಹಾರ ಹೇಗೆ ಈ ಅಂತರ್ಜಾಲದ ಸಹಾಯ ದಿಂದ ನಡೆಯುತ್ತಿವೆ ಎಂಬ ಬಗ್ಗೆ ತಿಳಿಸಿದರು.
ಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ ಟಿ. ಮಾತನಾಡಿ ಈ ಸ್ಮಾರ್ಟ್‌ಫೋನ್ ಅಸ್ತಿತ್ವಕ್ಕೆ ಬರುವ ಮುನ್ನ ಕಥೆ-ಕಾದಂಬರಿ ಓದಿ ತಮ್ಮ ಜ್ಞಾನ ದಾಹ ನೀಗಿಸಿಕೊಳ್ಳುತ್ತಿದ್ದರು. ಮಕ್ಕಳು ಈ ಮೊಬೈಲ್ ನ್ನು ಕೇವಲ ಅವರ ಜ್ಞಾನದಾಹ ಹೆಚ್ಚಿಸಿ ಕೊಳ್ಳಲು ಮಾತ್ರ ಬಳಸಿಕೊಳ್ಳಬೇಕೆಂದು. ತಮ್ಮ ಅಮೂಲ್ಯವಾದ ಕಣ್ಣು ಮತ್ತು ಕಿವಿಯನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ದೈಹಿಕ ಶಿಕ್ಷಕ ಪಂಚಾಕ್ಷರಪ್ಪ. ಶಿಕ್ಷಕರಾದ ಸತೀಶ್ ನಂದಿಹಳ್ಳಿ, ಅಕ್ಷತಾ ಕೆ ಎಚ್, ಜಯಶ್ರೀ ಯು ನಾಯ್ಕ್, ಕಾವ್ಯ, ಮಂಜುನಾಥ ಹುಗ್ಗೇರ್, ಧನುಕುಮಾರ್ ಪಟ್ಟಣಶೆಟ್ಟಿ , ದೀಕ್ಷಿತಾ ಆರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
18ಕೆಟಿಆರ್.ಕೆ.2ಃತರೀಕೆರ ಸಮೀಪದ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ನಡೆದ ಬ್ಯಾಗ್ ಲೆಸ್ ಡೇ ಕಾರ್ಯಕ್ರಮದಲ್ಲಿ ಶಾಲೆ ಮುಖ್ಯೋಪಾಧ್ಯಾಯರು ಹಾಲೇಶ್ ಕೆ.ಟಿ. ಶಿಕ್ಷಕರು ಖಿಜರ್ ಖಾನ್, ಶಿಕ್ಷಕರು ಸತೀಶ್ ನಂದಿಹಳ್ಳಿ ಮತ್ತಿತರರು ಭಾಗವಹಿಸಿದ್ದರು.