ಸಾರಾಂಶ
ಮಕ್ಕಳು ಉತ್ತಮ ಸಂಸ್ಕೃತಿಯೊಂದಿಗೆ ತಮ್ಮ ಗುರಿ ಮತ್ತು ಧ್ಯೇಯವನ್ನು ಸಾಧಿಸಿ ದೇಶಕ್ಕೆ ಕೀರ್ತಿ ತರುವಂತಹ ಒಳ್ಳೆಯ ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಮೇಟಗಳ್ಳಿಯ ಜೆಎಸ್‌ಎಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಆಯೋಜಿಸಲಾಗಿತ್ತು.ಬಿಗ್‌ಬಾಸ್‌ಸೀಸನ್10ರ ವಿಜೇತ, ಬಹುಮುಖ ನಟ ಕಾರ್ತಿಕ್ ಮಹೇಶ್ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳ ನೃತ್ಯ ನೋಡಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಅವರು, ತಾವು ಮನೆಗೆ ಒಳ್ಳೆಯ ಮಕ್ಕಳಾಗಬೇಕು ಮತ್ತು ತಂದೆ ತಾಯಿಗೆ ಗೌರವ ನೀಡುವುದರ ಜೊತೆಗೆ ಚೆನ್ನಾಗಿ ನೋಡಿಕೊಳ್ಳಬೇಕು. ಆಂಗ್ಲಭಾಷೆ ಕಲಿಯುವುದರ ಜೊತೆಗೆ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.ರಂಗ ಶಿಕ್ಷಕ ಚಂದ್ರಶೇಖರಾಚಾರ್, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಾಟಕ, ನೃತ್ಯ, ಅಭಿನಯ, ಗಾಯನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದರು.
ಕುವೆಂಪುನಗರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಪಿ. ವಾಸು ಮಾತನಾಡಿ, ಮಕ್ಕಳು ಉತ್ತಮ ಸಂಸ್ಕೃತಿಯೊಂದಿಗೆ ತಮ್ಮ ಗುರಿ ಮತ್ತು ಧ್ಯೇಯವನ್ನು ಸಾಧಿಸಿ ದೇಶಕ್ಕೆ ಕೀರ್ತಿ ತರುವಂತಹ ಒಳ್ಳೆಯ ಕೆಲಸ ಮಾಡಬೇಕು ಎಂದರು.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ದೀಪಾ ಪ್ರಶಾಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕ ಪಿ. ರಾಜಶೇಖರಮೂರ್ತಿ ಅತಿಥಿ ಶಿಕ್ಷಕರಾಗಿ ವೇದಿಕೆಯ ಮೇಲೆ ಇದ್ದರು.
ವಿದ್ಯಾರ್ಥಿ ಪ್ರತಿನಿಧಿಗಳಾದ 10ನೇ ತರಗತಿಯ ಪಿ. ವರುಣ್ ಹಾಗೂ ಎಸ್. ಪ್ರತೀಕ್ಷಾ ಇದ್ದರು. ಸಹ ಶಿಕ್ಷಕಿ ವಿನುತಾ ಶೇಖರ್ ಸ್ವಾಗತಿಸಿದರು. ಎಂ. ಅಮೃತವಾಣಿ ನಿರೂಪಿಸಿದದರು. ದೈಹಿಕ ಶಿಕ್ಷಣ ಶಿಕ್ಷಕ ಆರ್. ಪ್ರಭುಸ್ವಾಮಿ ವಂದಿಸಿದರು.