ಸಾರಾಂಶ
ಆಲೂರು ತಾಲೂಕು ಕಣತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಬೇಸಿಗೆ ಶಿಬಿರ ಕಾರ್ಯಾಗಾರ ಹಮ್ಮಿಕೊಂಡಿತ್ತು.
ಬೇಸಿಗೆ ಶಿಬಿರ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಆಲೂರುಮಕ್ಕಳ ಜ್ಞಾನ ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ಪಠ್ಯೇತರ ಚಟವಟಿಕೆಗಳಲ್ಲಿ ವಿಕಸನಗೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ನಿತ್ಯ ಜೀವನದಲ್ಲಿ ಇತರ ಚಟುವಟಿಕೆಗಳ ಅವಶ್ಯಕತೆ ತುಂಬಾ ಮಹತ್ವದ್ದಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ ಅಭಿಪ್ರಾಯಪಟ್ಟರು.
ಆಲೂರು ತಾಲೂಕು ಕಣತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಾಗಾರದಲ್ಲಿ ನಿತ್ಯ ಜೀವನದಲ್ಲಿ ಗಂಟುಗಳ ಮಹತ್ವ ಕುರಿತು ಮಾತನಾಡಿ, ಸಮಗಂಟು, ಕೊಟ್ಟಿಗೆ ಗಂಟು, ಬೆಸ್ತರ ಗಂಟು, ಜೀವ ರಕ್ಷಕ ಗಂಟು ಮುಂತಾದ ಒಂಬತ್ತು ವಿಧದ ಗಂಟುಗಳನ್ನು ಬಳಸುತ್ತೇವೆ. ದನಕರುಗಳನ್ನು ಕಟ್ಟುವಾಗ ಕೊರಳ ಬದಿ ಜೀವ ರಕ್ಷಕ ಗಂಟನ್ನು ಹಾಕಿದರೆ, ಗೂಟದ ಬದಿ ಕೊಟ್ಟಿಗೆ ಗಂಟನ್ನು ಬಳಸುತ್ತೇವೆ. ನೀರಿಗೆ ಬಿದ್ದವರ ಸಂರಕ್ಷಣೆಯಲ್ಲಿ ಜೀವರಕ್ಷಕ ಗಂಟನ್ನು ಬಳಸುತ್ತೇವೆ. ಪ್ರತಿಯೊಬ್ಬ ಮಕ್ಕಳೂ ಸಹ ಇಂತಹ ಗಂಟುಗಳನ್ನು ಕಲಿಯುವುದರಿಂದ ಜೀವನ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕಿದೆ. ಮಕ್ಕಳು ಕೇವಲ ಪಠ್ಯ ಪುಸ್ತಕ ಮಾಹಿತಿಗಷ್ಟೇ ಸೀಮಿತಗೊಳ್ಳದೇ ಸ್ಕೌಟ್ಸ್, ಗೈಡ್ಸ್ ಕೌಶಲಗಳನ್ನು ರೂಢಿಸಿಕೊಂಡಾಗ ಜೀವನ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಡಾ ವೈ.ಎಸ್.ವೀರಭದ್ರಪ್ಪ, ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ತಾಲೂಕು ಖಜಾಂಚಿ ಬಿ.ಎಸ್.ಹಿಮ, ನಿವೃತ್ತ ಶಿಕ್ಷಕ ಎಸ್.ಎನ್.ಸಿದ್ಧಯ್ಯ, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಹಾಜರಿದ್ದರು.
ಆಲೂರಿನ ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಾಗಾರದಲ್ಲಿ ಎಚ್.ಜಿ.ಕಾಂಚನಮಾಲ ಮಾತನಾಡಿದರು.