ಹಾಸನ ಜಿಲ್ಲೆ ಬಾಲ್ಯವಿವಾಹ ಪ್ರಕರಣಗಳಲ್ಲಿ ೪ನೇ ಸ್ಥಾನದಲ್ಲಿದೆ. ಇದು ನಮಗೆ ತುಂಬ ಅವಮಾನಕರ ಸಂಗತಿಯಾಗಿದೆ, ಆದ್ದರಿಂದ ಪೊಲೀಸ್ ಠಾಣೆಯ ಅಧಿಕಾರಿಗಳು ಬಾಲ್ಯವಿವಾಹ ತಪ್ಪಿಗೆ ಆರಂಭದಲ್ಲಿ ಅರಿವು ಮೂಡಿಸಲು ಕಾರ್ಯನಿರ್ವಹಿಸಬೇಕಿದೆ, ಒಂದು ವೇಳೆ ವಿವಾಹಗಳು ನಡೆದಿರುವುದು ಕಂಡುಬಂದರೆ ತಕ್ಷಣ ಕಾನೂನು ಕ್ರಮ ತೆಗೆದುಕೊಂಡು ಅಂತಹ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ತಡೆಯಬಹುದಾಗಿದೆ. ಇದರಿಂದ ಹೆಣ್ಣು ಮಕ್ಕಳು ಬಾಲ ಗರ್ಭಿಣಿಯಾಗುವುದನ್ನು ತಡೆಯಬಹುದು. ಎಲ್ಲಾ ಅಧಿಕಾರಿಗಳು ಬಾಲ್ಯವಿವಾಹ ತಡೆಯಲು ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಪೊಲೀಸ್ ಅಧಿಕಾರಿಗಳು ಮಕ್ಕಳ ಕಾನೂನುಗಳನ್ನು ಸರಿಯಾದ ಸ್ವರೂಪದಲ್ಲಿ ಅರ್ಥ ಮಾಡಿಕೊಂಡು ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಬಿ.ಕೆ ತಿಳಿಸಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯೂತ್ ಹಾಸ್ಟೆಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ, ಪೋಕ್ಸೊ, ಬಾಲನ್ಯಾಯ ಕಾಯ್ದೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳನ್ನು ಹೆಚ್ಚು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಯೋಗ್ಯತೆ, ಅಸಹಾಯಕತೆಯನ್ನು ಸಮಾಜದ ದುಷ್ಟ ಶಕ್ತಿಗಳು ದುರ್ಬಳಕೆ ಮಾಡಿಕೊಂಡು ಅವರಿಂದ ತಪ್ಪುಗಳನ್ನು ಮಾಡಿಸುವುದು, ಮಕ್ಕಳ ಹಕ್ಕುಗಳ ಉಲ್ಲಂಘನೆ ಮಕ್ಕಳ ಮೇಲೆ ದೈಹಿಕ, ಲೈಂಗಿಕ ಸ್ವರೂಪದ ಹಿಂಸೆಗಳು, ದೌರ್ಜನ್ಯಗಳನ್ನು ಎಸಗುತ್ತಿದ್ದಾರೆ ಇದನ್ನು ತಡೆಯಬೇಕು ಎಂದರು.

ಹಾಸನ ಜಿಲ್ಲೆ ಬಾಲ್ಯವಿವಾಹ ಪ್ರಕರಣಗಳಲ್ಲಿ ೪ನೇ ಸ್ಥಾನದಲ್ಲಿದೆ. ಇದು ನಮಗೆ ತುಂಬ ಅವಮಾನಕರ ಸಂಗತಿಯಾಗಿದೆ, ಆದ್ದರಿಂದ ಪೊಲೀಸ್ ಠಾಣೆಯ ಅಧಿಕಾರಿಗಳು ಬಾಲ್ಯವಿವಾಹ ತಪ್ಪಿಗೆ ಆರಂಭದಲ್ಲಿ ಅರಿವು ಮೂಡಿಸಲು ಕಾರ್ಯನಿರ್ವಹಿಸಬೇಕಿದೆ, ಒಂದು ವೇಳೆ ವಿವಾಹಗಳು ನಡೆದಿರುವುದು ಕಂಡುಬಂದರೆ ತಕ್ಷಣ ಕಾನೂನು ಕ್ರಮ ತೆಗೆದುಕೊಂಡು ಅಂತಹ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ತಡೆಯಬಹುದಾಗಿದೆ. ಇದರಿಂದ ಹೆಣ್ಣು ಮಕ್ಕಳು ಬಾಲ ಗರ್ಭಿಣಿಯಾಗುವುದನ್ನು ತಡೆಯಬಹುದು. ಎಲ್ಲಾ ಅಧಿಕಾರಿಗಳು ಬಾಲ್ಯವಿವಾಹ ತಡೆಯಲು ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.

ಬಾಲ್ಯವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆಯನ್ವಯ ಪೊಲೀಸ್ ಅಧಿಕಾರಿಗಳಿಗೆ ಸುಮೊಟೊ ಪ್ರಕರಣ ದಾಖಲಿಸಲು ಅವಕಾಶ ನೀಡಿದ್ದು ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು ಎಂದರು. ಬಾಲ್ಯವಿವಾಹ ಕಾಯ್ದೆಯ ಪ್ರಕಾರ ಬಾಲ್ಯವಿವಾಹಗಳನ್ನು ತಡೆಗಟ್ಟುವುದು, ಒಂದು ವೇಳೆ ವಿವಾಹವಾಗುತ್ತಿದ್ದರೆ ಸಂರಕ್ಷಿಸುವುದು, ಒಂದು ವೇಳೆ ವಿವಾಹ ಅಥವಾ ವಿವಾಹ ಪೂರ್ವ ಕಾರ್ಯ ನಡೆದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಬಾಲ್ಯವಿವಾಹ ನಿಷೇಧ ಕಾಯ್ದೆಯನ್ವಯ ನ್ಯಾಯಲಯದಲ್ಲಿ ಪ್ರತಿಬಂಧಕಾಜ್ಞೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಅಧಿಕಾರಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಪ್ರಕರಣ ತಡೆಯಲು ಕಾರ್ಯಪ್ರವೃತ್ತರಾಗಿರಿ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಮ್ಮಯ್ಯ ಅವರು ಮಾತನಾಡಿ ಮಕ್ಕಳ ಪ್ರಕರಣಗಳು ಬಹಳ ಸೂಕ್ಷ್ಮ ವಿಚಾರ ಮಕ್ಕಳನ್ನು ಹೊಂದಿರುವ ಪೋಷಕರು ಮಕ್ಕಳಿಗೆ ಏನಾದರು ತೊಂದರೆಯಾದರೆ ಬಹಳ ಆತಂಕಕ್ಕೆ ಒಳಗಾಗುತ್ತಾರೆ ಹಾಗಾಗಿ ಬಾಲ್ಯವಿವಾಹ, ಪೋಕ್ಸೊ, ಇನ್ನಿತರ ಯಾವುದೇ ಮಕ್ಕಳ ಪ್ರಕರಣ ಬಂದ ಕೂಡಲೆ ದೂರು ದಾಖಲು ಮಾಡಬೇಕು, ತಡೆ ಮಾಡಬಾರದು ಎಂದು ತಿಳಿಸಿದರು. ಮಕ್ಕಳು ಕಾಣೆಯಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಗೆ ಕ್ರಮವಹಿಸಿಸಬೇಕಿದೆ, ಇಲ್ಲದಿದ್ದರೆ ಅವರ ದುರ್ಬಳಕೆ ಇನ್ನಿತರೆ ಸಮಸ್ಯೆಗೆ ಮಕ್ಕಳು ಒಳಗಾಗಬಹುದು. ಇದರಿಂದ ಪೋಷಕರು ಒತ್ತಡಕ್ಕೆ ಒಳಗಾಗುತ್ತಾರೆ ಎಂದರು.

ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ಚಂದ್ರಮೌಳಿ ಮಾತನಾಡಿ ಅರಿವು ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಮಾಡಬೇಕಿದೆ, ಈಗ ಮಕ್ಕಳ ವಿಶೇಷ ಗ್ರಾಮ ಸಭೆಗಳು ನಡೆಯುತ್ತಿವೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಭಾಗವಹಿಸಿ ಬಾಲ್ಯವಿವಾಹ, ಪೋಕ್ಸೊ, ಮತ್ತು ಬಾಲ ಗರ್ಭಿಣಿ ತಡೆಗೆ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಮಧುಕುಮಾರಿ ವಹಿಸಿದರು, ಡಿವೈಎಸ್‌ಪಿ ಗಂಗಾಧರಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ದಿಲೀಪ್ ಕೆ.ಜಿ ಉಪಸ್ಥಿತರಿದ್ದರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಕಾಂತರಾಜು ಅವರು ತರಬೇತಿ ನೀಡಿದರು.