ವಿಜ್ಞಾನ ಅನುಸರಣೆಯಿಂದ ಮಕ್ಕಳ ಮನಸ್ಸು ವಿಕಾಸ: ಎಚ್.ಎಸ್.ಟಿ.ಸ್ವಾಮಿ

| Published : Dec 29 2024, 01:18 AM IST

ಸಾರಾಂಶ

ವಿಜ್ಞಾನವ ಅನುಸರಿಸುವುದರಿಂದ ಮಕ್ಕಳ ಮನಸ್ಸು ವಿಕಾಸವಾಗುತ್ತದೆ. ಬೌದ್ಧಿಕತೆ ಬೆಳವಣಿಗೆಗೆ ಅದು ಪೂರಕ ವಾತಾವರಣ ಸೃಷ್ಠಿಸುತ್ತದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ ಸ್ವಾಮಿ ಅಭಿಪ್ರಾಯಪಟ್ಟರು. ಚಿತ್ರದುರ್ಗದಲ್ಲಿ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಸೈನ್ಸ್ ಎಕ್ಸ್ ಪೋ ಕಾರ್ಯಕ್ರಮ । ಎಲ್ಲ ವಲಯದಲ್ಲಿಯೂ ವ್ಯಾಪಿಸಿರುವ ಸೈನ್ಸ್‌ । ಇದರಿಂದ ಜೀವನಶೈಲಿ ಬದಲು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿಜ್ಞಾನವ ಅನುಸರಿಸುವುದರಿಂದ ಮಕ್ಕಳ ಮನಸ್ಸು ವಿಕಾಸವಾಗುತ್ತದೆ. ಬೌದ್ಧಿಕತೆ ಬೆಳವಣಿಗೆಗೆ ಅದು ಪೂರಕ ವಾತಾವರಣ ಸೃಷ್ಠಿಸುತ್ತದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ ಸ್ವಾಮಿ ಅಭಿಪ್ರಾಯಪಟ್ಟರು.

ಚಿತ್ರದುರ್ಗದ ನ್ಯಾಷನಲ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸೈನ್ಸ್ ಎಕ್ಸ್ ಪೋ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಸಂದರ್ಭದ ಈ ವೇಳೆ ವಿಜ್ಞಾನ ಎಲ್ಲ ವಲಯದಲ್ಲಿಯೂ ವ್ಯಾಪಿಸಿದೆ. ನಿತ್ಯದ ಪ್ರತಿ ಆಗು ಹೋಗುಗಳಿಗೆ ವಿಜ್ಞಾನದ ಚಲನೆಯಿದೆ. ವಿಜ್ಞಾನದಿಂದ ನಮ್ಮ ಜೀವನ ಶೈಲಿಯೇ ಬದಲಾಗಿದೆ. ಇಂತಹ ವಿಜ್ಞಾನ ಮೇಳಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳ ಮನಸ್ಸು ವಿಕಾಸ ವಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಿವೆ ಎಂದರು.

ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ತಯಾರಿಸಿರುವ ಮಾದರಿಗಳು ಇಷ್ಟಕ್ಕೇ ಸೀಮಿತವಾಗದೇ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸುವ ಮೂಲಕ ಅವರ ಭವಿಷ್ಯ ಉಜ್ವಲ ಮಾಡಿಕೊಳ್ಳಬೇಕು. ವಿಜ್ಞಾನ ಅಧ್ಯಯನ ಮಾಡಿದವರಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಇಂತಹ ಮಾದರಿಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಲಿ ಎಂದರು.

ವಿಜ್ಞಾನ ಇಂದು ಜಗತ್ತನ್ನು ಆಳುತ್ತಿದೆ. ಸಾಮಾಜಿಕ ವ್ಯವಸ್ಥೆ ಬೆಳಣಿಗೆ, ದೇಶದ ಆರ್ಥಿಕ ಅಭಿವೃದ್ದಿ, ಸಂವಹನ ಸೇರಿದಂತೆ ಪ್ರತಿಯೊಂದರಲ್ಲಿಯೂ ವಿಜ್ಞಾನದ ಛಾಪು ಇದು. ವಿಜ್ಞಾನ ಬಿಟ್ಟು ನಾವು ಉಸಿರಾಡಲು ಸಾಧ್ಯವಾಗದಂತಹ ಪರಿಸ್ತಿತಿಯಿದೆ. ವಿದ್ಯಾರ್ಥಿಗಳು ವಿಜ್ಞಾನದ ಕಡೆ ಹೆಚ್ಚು ಮುಖ ಮಾಡಬೇಕು. ಲಭ್ಯವಾಗುವ ಶೈಕ್ಷಣಿಕ ಅವಕಾಶಗಳ ಸಮರ್ಥವಾಗಿ ಬಳಕೆ ಮಾಡಿಕೊಂಡು ಭವಿಷ್ಯದ ವಿಜ್ಞಾನಿಗಳಾಗಬೇಕೆಂದು ಎಚ್.ಎಸ್.ಟಿ.ಸ್ವಾಮಿ ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಸೈಯದ್ ಅಕ್ತರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನಿಗಳ ಸಾಧನೆ ಪರಿಚಯವಾಗಬೇಕು, ವಿಜ್ಞಾನದ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಬೇಕು. ತಮ್ಮ ಛಾಪನ್ನು ಮೂಡಿಸಿ ಶಾಲೆಗೆ , ಶಿಕ್ಷಕರಿಗೆ, ತಂದೆ ತಾಯಿಯರಿಗೆ ಗೌರವ ತರಬೇಕು ಎಂದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ವಿಜ್ಞಾನದ ಚಟುವಟಿಕೆಗಳು ಉತ್ತಮವಾಗಿವೆ. ವಿಜ್ಞಾನಕ್ಕೆ ಮೂಲ ನೆಲೆ ಒದಗಿಸಲು ಸೈನ್ಸ್ ಪೌಂಡೇಷನ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವೈಜ್ಞಾನಿಕ ಮನೋಭಾವ ಪಸರಿಸುವಲ್ಲಿ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಸಂಸ್ಥೆಯ ನಿರ್ದೇಶಕ ಸೈಯದ್ ಶುಜತ್, ವ್ಯವಸ್ಥಾಪಕ ಇಮ್ರಾನ್ ಸೈಫ್, ಪ್ರಾಂಶುಪಾಲೆ ರುಕಿಯಾ ಖಾನಂ, ಉಪ ಪ್ರಾಂಶುಪಾಲ ಶಹನಾಜ್, ಶಿಕ್ಷಕರಾದ ದಿವ್ಯಾ, ಮೋಹಸೀನಾ, ಸಾಜಿದ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.