ಸಾರಾಂಶ
ಮಕರ ಸಂಕ್ರಮಣದ ಸಮಯದಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಜರುಗುತ್ತದೆ. ಜಾತ್ರೆಯ ಪ್ರಯುಕ್ತ ಈ ಬಾರಿ ಕಡಕೋಳ ಮಡಿವಾಳಪ್ಪನವರ ಪುರಾಣ ಪ್ರವಚನ ನಡೆಯುತ್ತಿದ್ದು ಜ.13ರಂದು ಕೊನೆಗಳ್ಳಲಿದೆ. ಜ.14ರಂದು ಮಲ್ಲಿಕಾರ್ಜುನ ದೇವರಿಗೆ ಅಕ್ಷತಾರೋಪಣ ಜರುಗಲಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಚಿನಮಳ್ಳಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದೆ ಎಂದು ದೇವಸ್ಥಾನದ ಕಮಿಟಿಯವರು ತಿಳಿಸಿದ್ದಾರೆ.ಪ್ರತಿವರ್ಷದ ಪದ್ಧತಿಯಂತೆ ಮಕರ ಸಂಕ್ರಮಣದ ಸಮಯದಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಜರುಗುತ್ತದೆ. ಜಾತ್ರೆಯ ಪ್ರಯುಕ್ತ ಈ ಬಾರಿ ಕಡಕೋಳ ಮಡಿವಾಳಪ್ಪನವರ ಪುರಾಣ ಪ್ರವಚನ ನಡೆಯುತ್ತಿದ್ದು ಜ.13ರಂದು ಕೊನೆಗಳ್ಳಲಿದೆ. ಜ.14ರಂದು ಮಲ್ಲಿಕಾರ್ಜುನ ದೇವರಿಗೆ ಅಕ್ಷತಾರೋಪಣ ಜರುಗಲಿದೆ.
ನಂತರ ಭೀಮಾ ನದಿಯಿಂದ 108 ಮುತ್ತೈದೆಯರಿಂದ ಕುಂಭ ಕಳಶ ಭವ್ಯ ಮೇರವಣಿಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ನಂತರ ಮಲ್ಲಿಕಾರ್ಜುನ ದೇವರು ಹಾಗೂ ಶ್ರೀ ಭ್ರಮರಾಂಬಿಕಾ ದೇವಿಗೆ ಸಹಸ್ರನಾಮದೊಂದಿಗೆ ಮಹಾಪೂಜೆ ನೆರವೇರಲಿದೆ.ಬಳಿಕ ರಾತ್ರಿ 8 ಗಂಟೆಗೆ ಧರ್ಮಸಭೆ ಜರುಗಲಿದೆ. ಧರ್ಮಸಭೆಯ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸುಪ್ರಸಿದ್ದ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಧ್ಯರಾತ್ರಿ 1 ಗಂಟೆಗೆ ಐತಿಹಾಸಿಕ ಚಮ್ಮಾಳಿಗೆ ಮೇರವಣಿಗೆ ಜರುಗಲಿದೆ. ಜ.15ರಂದು ಬೆಳಗ್ಗೆ 5 ಗಂಟೆಯಿಂದ 9 ಗಂಟೆ ವರೆಗೆ ಪುರವಂತರು, ವಾದ್ಯ ಮೇಳದ ಮೇರವಣಿಗೆಯೊಂದಿಗೆ ಪಲ್ಲಕ್ಕಿಯೂ ಮಲ್ಲಿಕಾರ್ಜುನ ದೇವಸ್ಥಾನ ಪ್ರವೇಶವು ನಡೆಯಲಿದೆ ಎಂದು ಕಮಿಟಿಯವರು ತಿಳಿಸಿದ್ದಾರೆ.