ಹಜರತ್ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಪ್ರಮುಖ ಸಂದೇಶಗಳು ಮತ್ತು ಬೋಧನೆಗಳು ಶಾಂತಿ, ಮಾನವೀಯತೆ ಮತ್ತು ಸತ್ಯಸಂಧತೆಯ ಮೇಲೆ ಆಧಾರಿತವಾಗಿವೆ.ಶಾಂತಿ ಮತ್ತು ಸೌಹಾರ್ದತೆ ಇಸ್ಲಾಂ ಎಂದರೆ ಶಾಂತಿ. ಸಮಾಜದಲ್ಲಿ ಎಲ್ಲರೂ ಅನ್ಯೋನ್ಯವಾಗಿ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಮತ್ತು ಶಾಂತಿಯಿಂದ ಬದುಕಬೇಕು ಹಜರತ್ ಮಹಮ್ಮದ್ ಪೈಗಂಬರ್ ಬೋಧಿಸಿದರು ಎಂದು ತಾಲೂಕ ಮುಸ್ಲಿಂ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸ್ತಾನಅಲಿ ಪಟ್ಟೇದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ಚಂದಾಪುರ್ ಮದೀನಾ ಮಸೀದಿ ಆವರಣದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕುಲ, ಜಾತಿ, ಬಣ್ಣ ಅಥವಾ ವರ್ಗದ ಆಧಾರದ ಮೇಲೆ ಮನುಷ್ಯರಲ್ಲಿ ಯಾವುದೇ ಭೇದಭಾವವಿಲ್ಲ. ಎಲ್ಲ ಮಾನವರೂ ಸಮಾನರು ಮತ್ತು ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಪ್ರತಿಪಾದಿಸಿದರು.

ಮುಸ್ಲಿಂ ಸಮಾಜ ಹಿರಿಯ ಮುಖಂಡ ಕೆ.ಎಮ.ಬಾರಿ ಅಬ್ದುಲ್ ಬಾಸಿದ್, ಶಬ್ಬೀರ್ ಅಹ್ಮದ್ , ಹಸೇನ್ ಹಾಶ್ಮಿ ಶೇಕ್ ಫರೀದ್, ಗೋಪಾಲರಾವ್ ಕಟ್ಟಿಮನಿ, ಸಂಜೀವನ್ ಯಾಕಪುರ್, ಲಕ್ಷ್ಮಣ ಆವಂಟಿ ಮಾತನಾಡಿದರು. ಮಹಮ್ಮದ್ ಪೈಗಂಬರ್ ಈದ್ ಮಿಲಾದುನ್ನಬಿ ಹಬ್ಬದ ನಿಮಿತ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಾಲು ವಿತರಣೆ ಮಾಡಲಾಯಿತು. ಅಲ್ಲದೆ ಉಚಿತ ನೇತ್ರ ತಪಾಸಣೆ, ದಂತ ಪರೀಕ್ಷೆ, ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಬಡಿ ದರ್ಗಾದ ಸಯ್ಯದ್ ಅಕ್ಬರ್ ಹುಸೇನಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕ್ಷಯರೋಗ ಡಾ.ಮಹಮ್ಮದ್ ಗಫಾರ್ ,ಡಾ.ಮಹಮ್ಮದ್ ಅಜೀಜ್ ,ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೂಗುರೇಶ್ ಬುಳ್ಳ, ಡಾ.ಮಹಮದ ಅಖಿಲ್, ಖಲೀಲ್ ಪಟೇಲ್ ಅಬ್ದುಲ್ ಹಾಫೀಜ ಮಫ್ತಿ, ಜೀಯಾ‌ಉರ ರೆಹಮಾನ್, ಮೊಹಮ್ಮದ್ ಇದ್ರಿಸ ಅಲಿ, ಸಿಪಿಐ ಕಪಿಲ್ ದೇವ್. ಪಿಎಸ್ಐ ಗಂಗಮ್ಮ ಜಿನಿಕೇರಿ, ಮಮ್ಮದ್ ಆಫೀಸ್ ಮುಫ್ತಿ, ಮಹಮ್ಮದ್ ಹಾಫಿಜ್ ಇಸ್ಮಾಯಿಲ್, ಮೊಹಮ್ಮದ್ ಆಫೀಜ ಅಹದ್ ಇದ್ದರು.

ಅಬ್ದುಲ್ ಬಾಸೀದ್ ಸ್ವಾಗತಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಮೊಹಮ್ಮದ್ ಹಾದಿಮಿಯಾ ವಂದಿಸಿದರು. ಹಾಫೀಸ್ ಇಸ್ಮಾಯಿಲ್ ನಿರೂಪಿಸಿದರು.