ಸಾರಾಂಶ
ಚಿಂಚೋಳಿ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ಆಜ್ಞೆ ನೀಡಿ ಆದೇಶ ಹೊರಡಿಸಿ ಪುನಃ ಪ್ರಾರಂಭಗೊಂಡಿರುವುದಕ್ಕೆ ತಾಲೂಕು ರೈತ ಸಂಘದ ಮುಖಂಡ ಬಿಜೆಪಿ ಚಿಂಚೋಳಿ ಮಂಡಲ ಉಪಾಧ್ಯಕ್ಷ ರಾಜಶೇಖರ ಗುಡದಾ ರಟಕಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಳಗಿ
ರಾಜಕೀಯ ದುರುದ್ದೇಶದಿಂದ ಚಿಂಚೋಳಿ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ಆಜ್ಞೆ ನೀಡಿ ಆದೇಶ ಹೊರಡಿಸಿ ಪುನಃ ಪ್ರಾರಂಭಗೊಂಡಿರುವುದಕ್ಕೆ ತಾಲೂಕು ರೈತ ಸಂಘದ ಮುಖಂಡ ಬಿಜೆಪಿ ಚಿಂಚೋಳಿ ಮಂಡಲ ಉಪಾಧ್ಯಕ್ಷ ರಾಜಶೇಖರ ಗುಡದಾ ರಟಕಲ್ ಸಂತಸ ವ್ಯಕ್ತಪಡಿಸಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಬಂದ್ ಮಾಡುವ ಹುನ್ನಾರಕ್ಕೆ ಕೈಹಾಕುತ್ತಿರುವುದು ಅನೇಕ ರೈತರಿಗೆ ಕೂಲಿ ಕಾರ್ಮಿಕರ ಹೊಟ್ಟೆಯ ಮೆಲೆ ಹೊಡೆದಂತೆ. ಗಂಡ ಹೆಂಡತಿ ನಡುವೆ ಕೂಸು ಬಡುವಾದಂತೆ. ರಾಜಕೀಯ ಏನಿದ್ದರು ಚುನಾವಣೆಯಲ್ಲಿ ನಿಮ್ಮ ವೈಯಕ್ತಿಕ ರಾಜಕೀಯ ರೈತರ ಮೆಲೆ ತೋರಿಸುವದು ಶುದ್ಧ ಅನ್ಯಾಯವಾಗಿದೆ.
ಕಾರ್ಖಾನೆ ಇದ್ದಕ್ಕಿದ್ದಂತೆ ಬಂದ ಮಾಡಿದ ಸುದ್ದಿ ತಿಳಿದ ನಂತರ ಕಾಳಗಿ ತಾಲ್ಲೂಕಿನ ರೈತರೆಲ್ಲರು ಸೇರಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಕಾಳಗಿ ತಾಲ್ಲೂಕು ರೈತ ಸೇನೆ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ, ಜಗದೀಶ್ ಪಾಟರ್ ರಾಜಾಪುರ, ಅಣವೀರ ಹೆಬ್ಬಾಳ ಮನವಿ ಸಲ್ಲಿಸಿದ್ದೆವು.ಎಲ್ಲಾ ರೈತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ತಕ್ಷಣವೇ ನಿಮ್ಮ ಹೆಸರಿನಿಂದ ಪರ್ಯಾಯ ಕಾರ್ಖಾನೆಗೆ ಕಬ್ಬು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದಾಗ ಸ್ವಲ್ಪ ಮಟ್ಟಿಗೆ ರೈತರು ನಿಟ್ಟುಸಿರು ಬಿಟ್ಟರು. ನಂತರ ಯತ್ನಾಳ ವಡೆತನದ ಚಿಂಚೋಳಿ ಖಬ್ಬು ಕಾರ್ಖಾನೆ ಮರು ಚಾಲನೆಗೆ ಉಚ್ಚ ಆದೇಶವನ್ನು ಕೇಳಿ ತೀರಾ ಜಿಲ್ಲಾ ಮತ್ತು ಕಾಳಗಿ ತಾಲ್ಲೂಕಿನ ರೈತರಿಗೆ ಸಂತೋಷವಾಯಿತೆಂದು ರಾಜಶೇಖರ ಗುಡದಾ ಹೇಳಿದ್ದಾರೆ.