ಕೈಯಲ್ಲಿ ಬೆತ್ತ ಹಿಡಿದು ಹೆಜ್ಜೆ ಹಾಕಿದ ಚಿಣ್ಣರು

| Published : Oct 07 2024, 01:30 AM IST

ಕೈಯಲ್ಲಿ ಬೆತ್ತ ಹಿಡಿದು ಹೆಜ್ಜೆ ಹಾಕಿದ ಚಿಣ್ಣರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ವಿಜಯದಶಮಿ ಅಂಗವಾಗಿ ವಿದ್ಯಾಗಿರಿಯಲ್ಲಿ ಆರ್‌ಎಸ್‌ಎಸ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಬಾಲಕರ ಪಥಸಂಚಲನದಲ್ಲಿ ಬಾಲಕರು ಕೈಯಲ್ಲಿ ಬೆತ್ತ ಹಿಡಿದುಕೊಂಡು ಆಕರ್ಷಕ ಹೆಜ್ಜೆ ಹಾಕಿದರು. ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ಆರಂಭವಾದ ಪಥ ಸಂಚಲನದಲ್ಲಿ ನೂರಾರು ಬಾಲಕರು ಪಾಲ್ಗೊಂಡಿದ್ದರು. ಇದನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಪಥ ಸಂಚಲನ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಜಯದಶಮಿ ಅಂಗವಾಗಿ ವಿದ್ಯಾಗಿರಿಯಲ್ಲಿ ಆರ್‌ಎಸ್‌ಎಸ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಬಾಲಕರ ಪಥಸಂಚಲನದಲ್ಲಿ ಬಾಲಕರು ಕೈಯಲ್ಲಿ ಬೆತ್ತ ಹಿಡಿದುಕೊಂಡು ಆಕರ್ಷಕ ಹೆಜ್ಜೆ ಹಾಕಿದರು. ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ಆರಂಭವಾದ ಪಥ ಸಂಚಲನದಲ್ಲಿ ನೂರಾರು ಬಾಲಕರು ಪಾಲ್ಗೊಂಡಿದ್ದರು. ಇದನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಪಥ ಸಂಚಲನ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮಾರ್ಗದುದ್ದಕ್ಕೂ ಜನರು ರಸ್ತೆ, ಮನೆಗಳ ಮುಂದೆ ರಂಗೋಲಿ ಬಿಡಿಸಿದ್ದರು. ಸ್ವಾಗತ ಕಮಾನುಗಳನ್ನು ನಿಲ್ಲಿಸಿದ್ದರು. ಅಲ್ಲಲ್ಲಿ ಪುಠಾಣಿ ಮಕ್ಕಳು ದೇಶಭಕ್ತರು, ಮುಖಂಡರ ವೇಷಭೂಷಣ ಧರಿಸಿ ಸ್ವಾಗತಿಸಿದರು. ಅಥಣಿ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ವಿದ್ಯಾಗಿರಿಯ 7, 8 ಹಾಗೂ 9ನೇ ಕ್ರಾಸ್‌ನಲ್ಲಿ ಸಂಚರಿಸಿ 12ನೇ ಕ್ರಾಸ್, ಕಾಳಮ್ಮದೇವಿ, ಕೆಂಚಮ್ಮದೇವಿ ದೇವಸ್ಥಾನ, 15 ಹಾಗೂ 16ನೇ ಕ್ರಾಸ್, 18 ಹಾಗೂ19 ಕ್ರಾಸ್‌ನ ಅಡ್ಡ ರಸ್ತೆ ಮುಖಾಂತರ ನೇರವಾಗಿ 22ನೇ ಕ್ರಾಸ್‌ಗೆ ಆಗಮಿಸಿತು. ಇಂಜಿನಿಯರಿಂಗ್ ಕಾಲೇಜು ವೃತ್ತದ ಮೂಲಕ ಗೌರಿ ಶಂಕರ ಕಲ್ಯಾಣ ಮಂಟಪಕ್ಕೆ ತಲುಪಿತು. ಆಎಸ್‌ಎಸ್‌ನ ಹಿರಿಯರು, ಸಂಚಾಲಕರ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಬಾಲಕರು ಪಥ ಸಂಚಲದಲ್ಲಿ ಭಾಗವಹಿಸಿದ್ದರು. ಸಂಘದ ಘೋಷವಾದ್ಯದ ತಕ್ಕಂತೆ ಬಾಲಕರು ಹಾಕುತ್ತಿದ್ದ ಹೆಜ್ಜೆಗಳು ಆಕರ್ಷಿಸಿತು.

ಬಾಲಕರ ಪ್ರತ್ಯೇಕ ಪಥಸಂಚಲನ ನೋಡಲು ನಗರದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಆಗಮಿಸಿದ್ದರು. ರಸ್ತೆ ಇಕ್ಕೇಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಹೂ ಮಳೆಗೈದರು.

ಈ ವೇಳೆ ಆರ್.ಎಸ್.ಎಸ್ ಜಿಲ್ಲಾ ಸಂಘ ಚಾಲಕ ಸಿ.ಎಸ್.ಪಾಟೀಲ, ಪ್ರಮುಖರಾದ ವಿಜಯ ಸುಲಾಖೆ, ಬಸವರಾಜ ಕಟಗೇರಿ, ಬಸವರಾಜ ಯಂಕ್ಕಂಚಿ, ಸುರೇಶ ಮಜ್ಜಗಿ ಹಾಗೂ ವಿರೇಶ ಬೆಣ್ಣೂರ ಇತರರಿದ್ದರು.