ಹೊಸಕಾಡಿನಲ್ಲಿ ಚಿಣ್ಣರ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರ

| Published : Apr 12 2024, 01:01 AM IST

ಸಾರಾಂಶ

ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಕಸದಿಂದ ರಸರಸ, ಕ್ರಾಫ್ಟ್ ಆರ್ಟ್, ಆಶು ನಟನೆ, ಸಂಗೀತ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮಕ್ಕಳಿಗೆ ಎಳವೆಯಲ್ಲಿ ಸೃಜನಶೀಲತೆ, ಹಿರಿಯರಿಗೆ ಗೌರವ ಕೊಡುವ ಶಿಕ್ಷಣದ ಬಗ್ಗೆ ಪೂರಕವಾಗಿರುವ ಕಾರ್ಯಕ್ರಮ ಹಮ್ಮಿಕೊಂಡಾಗ ಮಕ್ಕಳ ಸರ್ವೋತೋಮುಖ ಅಭಿವೃದ್ಧಿಯಾಗಲು ಸಾಧ್ಯವೆಂದು ನಿವೃತ್ತ ಸೇನಾನಿ ಭಾಸ್ಕರ ಶೆಟ್ಟಿ ಕುಬೆವೂರು ಹೇಳಿದರು.

ಕೆಮ್ರಾಲ್ ಪಕ್ಷಿಕೆರೆ ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂಡಳಿಮಂಡಳಿಯ ಆಶ್ರಯದಲ್ಲಿ ಹೊಸಕಾಡಿನಲ್ಲಿ ಜರುಗಿದ ಮಕ್ಕಳ ಚಿಣ್ಣರಚಿಲಿ ಪಿಲಿ- ೨೦೨೪ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕಾಟಿಪಳ್ಳ ಸರ್ಕಾರಿ ಪದವಿ ಪೂರ್ವ ಕಾಲೇಜು ಅಧ್ಯಾಪಕಿ ಸುಮತಿ ಭಟ್, ನಮ್ಮ ಆಚಾರ ವಿಚಾರ ಮತ್ತು ಸಂಸ್ಕಾರದ ಮಾಹಿತಿ ನೀಡಿದರು. ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್, ಪರಿಸರದ ಬಗ್ಗೆ ಉಪನ್ಯಾಸ ನೀಡಿದರು. ಆರೋಗ್ಯದ ಬಗ್ಗೆ ಮಾಹಿತಿಯನ್ನು ಡಾ.ರಶ್ಮಿ ಸಿ. ಸುವರ್ಣ ಎಸ್‌. ಕೋಡಿ ನೀಡಿದರು.

ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಕಸದಿಂದ ರಸರಸ, ಕ್ರಾಫ್ಟ್ ಆರ್ಟ್, ಆಶು ನಟನೆ, ಸಂಗೀತ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿಶ್ವಹಿಂದು ಪರಿಷತ್, ಬಜರಂಗ ದಳ ನಾಗಬ್ರಹ್ಮ ಶಾಖೆ ಹೊಸಕಾಡುವಿನ ಅಧ್ಯಕ್ಷ ಕಿಶೋರ್ ಕುಮಾರ್, ನಾಗಬ್ರಹ್ಮ ಭಜನಾ ಮಂಡಳಿಯ ಅಧ್ಯಕ್ಷ ಸಂದೀಪ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಈಶ ಸ್ವಾಗತಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಲಕ್ಷಣ ವಂದಿಸಿದರು.